The Public Spot
ರಾಜಕೀಯ

ರಾಜ್ಯ ಕಾಂಗ್ರೆಸ್​ ಎಚ್ಚರಿಸಿದ್ದು ನಟ ಪ್ರಕಾಶ್​ ರಾಜ್.. ಸರ್ಕಾರ ಮಲಗಿತ್ತಾ..?

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಎಸ್‌ಐಆರ್ ವಿರುದ್ದ INDIA ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು‌ ಸಂಘಟನೆಯ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ‌ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆಯಲ್ಲಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ‌ ಸಿದ್ದರಾಮಯ್ಯ, ಸಚಿವರು, ಶಾಸಕರು ಸೇರಿದಂತೆ ಸಾಕಷ್ಟು ಜನರು ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರಾಜ್ ಮಾತನಾಡಿ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಮೇಲೆ ಪ್ರತಿಭಟನೆ ಆಗ್ತಿದೆ. ಈ ಮೊದಲೆ ಪ್ರತಿಭಟನೆ ಆಗಬೇಕಿತ್ತು. ಬಿಜೆಪಿ ವಿರೋಧಿಸೋದಕ್ಕೆ ಈ ಕೆಲಸ ಎಂದು ಹೇಳಿದ್ರು. ಆಗ ಫಾರಂ 6ಗೆ ಯಾಕೆ ತಿದ್ದುಪಡಿ ತಂದ್ರಿ ಎಂದು ಕೇಳಿದ್ವಿ. ಈಗ ಕೋರ್ಟ್ ಕೂಡ ಅದನ್ನೇ ಕೇಳ್ತಿದೆ. ಜ್ಞಾನೇಶ್ ಕುಮಾರ್‌‌ನ ತೆಗೆಯೋದ್ರಿಂದ ಮಾತ್ರ ಇದು ಸರಿಯಾಗಲ್ಲ. ಮೂರು ಕೋಟಿ ನುಸುಳುಕೋರರು ಬಂದಿದ್ದಾರೆಂದು ಕೇಂದ್ರ ಗೃಹ ಮಂತ್ರಿ ಹೇಳಿದ್ದಾರೆ. ಬಾಂಗ್ಲಾದೇಶದ ಜನಸಂಖ್ಯೆ 17ಕೋಟಿ ಅದರಲ್ಲಿ ಮೂರು ಕೋಟಿ ಬಂದ್ರಾ..? ಇಡಿ ಕರ್ನಾಟಕದಲ್ಲಿ ಇಬ್ಬರು ಸಿಕ್ಕಿರೋದು. ಅದು‌ ಸಹ ಮದುವೆಯಾಗಿ ಬಂದವರು. 20 ಲಕ್ಷ ನುಸುಳುಕೋರರು ಎಂದರು ಎಂದು ಟೀಕಿಸಿದ್ದಾರೆ.

ಆದಿವಾಸಿಗಳು, ಮುಸ್ಲಿಮರನ್ನ ತೆಗೆದು ಹಾಕಿರೋದನ್ನ ನಾವು ತೋರಿಸ್ತೇವೆ ಎಂದಿರುವ ಪ್ರಕಾಶ್​ ರಾಜ್​, ಜ್ಞಾನೇಶ್ ಕುಮಾರ್ ಅವರ ಹಿಂದೆ ಇದ್ದಾರಲ್ಲ, ರಂಗ ಬಿಲ್ಲ ಅವರನ್ನು ತೆಗೆಯಬೇಕು ಎನ್ನುವ ಮೂಲಕ ಪರೋಕ್ಷವಾಗಿ ಮೋದಿಯನ್ನು ಅಧಿಕಾರದಿಂದ ಇಳಿಸಬೇಕು ಅಂದ್ರು. SIR ಪ್ರಜಾಪ್ರಭುತ್ವವನ್ನ ಕೊಲೆ ಮಾಡುವ ವೇದಿಕೆ. ಕರ್ನಾಟಕ SIR ವಿರೋಧ ಮಾಡ್ಬೆಕು. ಬೂತ್ ಬೂತ್‌ಗೆ ಹೋಗಿ, ರಸ್ತೆಗಿಳಿದು ಇದನ್ನ ಪರಿಶೀಲನೆ ಮಾಡ್ಬೇಕು. ಬಿಜೆಪಿಯನ್ನ ನಾವು ಸುಮ್ನೆ ಬಿಡಲ್ಲ, ಮುಂದಿನ‌ ಎರಡು ವರ್ಷ ನಾವು ಹಳ್ಳಿ ಹಳ್ಳಿಗೆ ಹೋಗ್ತೇವೆ ಎಂದಿದ್ದಾರೆ. ನನ್ನನ್ನು ದೇಶದ್ರೋಹಿ ಎನ್ನುತ್ತಾರೆ. ಯುವಕರ ಮೇಲೆ‌ ಲಾಠಿ ಬೀಸ್ತೀರ, ಪ್ರತಿಭಟನೆಗೆ ಅವಕಾಶ ಕೊಡಲ್ಲ ಎಂದರೆ ಎಷ್ಟು ಹೆದರಿರಬೇಕು. ಕರ್ನಾಟಕ SIR ವಿರೋಧಿಸದೆ ಇದ್ರೆ ಇನ್ನೊಂದು ಬೆಂಗಾಲ್ ಆಗಲಿದೆ. ದೇಶವನ್ನ ಮನುಸ್ಮೃತಿ, ಬಿಜೆಪಿಯಿಂದ‌ ರಕ್ಷಣೆ ಮಾಡಬೇಕಾಗಿದೆ. SIR ತೆಗೆಯೋವರೆಗೆ ನಿತ್ಯ ಹೋರಾಟವನ್ನ ಮಾಡಬೇಕು. ಬಿಜೆಪಿಯನ್ನ ತೆಗೆಯುವ ತನಕ ಹೋರಾಟ ಮಾಡ್ಬೇಕಿದೆ ಎಂದಿದ್ದಾರೆ.

ಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ನಮ್ಮ ಮತ ನಮ್ಮ ಹಕ್ಕಿನ ಹೋರಾಟಕ್ಕೆ ಸೇರಿದ್ದೇವೆ. ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಯಿತು. ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಹೋರಾಟ ಮಾಡಿದ್ರು. ರಣಕಹಳೆ ಇಲ್ಲಿಂದಲೇ ಆರಂಭವಾಯ್ತು. ಆ ಹೋರಾಟ ಇಡಿ ದೇಶಕ್ಕೆ ಒಂದು ಸಂದೇಶ ನೀಡ್ತು ಎಂದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಮತಗಳ್ಳತನ ಆಯ್ತು ಅದನ್ನು ಎತ್ತಿ ತೋರಿಸ್ತು. ಇದು ಬರಿ ಕರ್ನಾಟಕದ ಹೋರಾಟ ಅಲ್ಲ. ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು ಯಾವ ರೀತಿಯಲ್ಲಿ ಕುತಂತ್ರ ನಡೆಯಿತು. ಮತಗಳ ದುರುಪಯೋಗ ಮಾಡಿಕೊಂಡಿದ್ದು ಸಾಕ್ಷಿ ಇದೆ ಅಂದ್ರು.

ನಾವು ಚುನಾವಣೆ ಆಯೋಗಕ್ಕೆ ಹೋಗಲು ಅವಕಾಶ ನೀಡಲಿಲ್ಲ. ರಾಹುಲ್ ಗಾಂಧಿಗೆ ಹೋಗಲು ಅವಕಾಶ ನೀಡಲಿಲ್ಲ. ಮತದಾರರ ಹಕ್ಕಿಗೆ ನಾವು ಅವಕಾಶ ಮಾಡುತ್ತಿದ್ದೇವೆ. ಚುನಾವಣಾ ಆಯೋಗ ಮತಗಳ್ಳತನಕ್ಕೆ ಅವಕಾಶ ಮಾಡಿಕೋಡುತ್ತಿದೆ. ನಟ ಪ್ರಕಾಶ್ ರಾಜ್ ಬಂದು ಒಂದು ‌ಮನವಿ ಕೊಟ್ರು. ಏನೆಲ್ಲ ಅನ್ಯಾಯ ಆಗಿದೆ ಅಂತ ತೋರಿಸಿದ್ರು. ಬಿಜೆಪಿಗರು 15-20 ಸಾವಿರ ಮತಗಳ ಡಿಲೀಟ್ ಮಾಡಲು ಹೊರಟ್ಟಿದ್ದರು. ಅಹಿಂದ ಮತಗಳ ಡಿಲೀಟ್ ಮಾಡಲು ಹೊರಟಿದ್ದರು. ಫಾರ್ಮ್​ಗಳನ್ನು ಆಯಾ ಕ್ಷೇತ್ರಗಳಿಗೆ ಕಳುಹಿಸಲಾಗಿತ್ತು. ದಲಿತರು ಹಿಂದುಳಿದ ವರ್ಗ ಅಲ್ಪಸಂಖ್ಯಾತ ಮತಗಳನ್ನ ಡಿಲೀಟ್ ಮಾಡಿ, ಫೋನ್ ನಂಬರ್ ಡಿಲೀಟ್ ಮಾಡಿಸಿ, ಬಿಜೆಪಿ ನಾಯಕರು ಆ ಕ್ಷೇತ್ರದ ನಾಯಕರಿಗೆ ಕಳಿಸಿಕೊಟ್ರು ನಾವು ಯಾಮಾರಿದ್ರೆ ದೊಡ್ಡ ಅನಾಹುತ ಆಗ್ತಿತ್ತು ಎಂದಿದ್ದಾರೆ.

ಕಾಂಗ್ರೆಸ್​ ಸರ್ಕಾರವನ್ನು ಎಚ್ಚರಿಸಿದ್ದು ನಟ ಪ್ರಕಾಶ್​ ರಾಜ್ ಅಂತಾ ಸರ್ಕಾರ ಅಂದ್ರೆ ಮಾನ್ಯ ಡಿ.ಕೆ ಶಿವಕುಮಾರ್​ ಒಪ್ಪಿಕೊಂಡಿದ್ದಾರೆ. ಅಂದರೆ ಕಾಂಗ್ರೆಸ್​ ಏಜೆಂಟ್​ಗಳು ಏನು ಮಾಡ್ತಿದ್ರು..? ನಟ ಪ್ರಕಾಶ್​ ರಾಜ್​ ಹೇಳಿರುವ ವಿಚಾರ ಸರಿಯಾಗೇ ಇರಬಹುದು. ಆದರೆ ಸರ್ಕಾರ ಮತ್ತು ಕಾಂಗ್ರೆಸ್​ ಪಕ್ಷ ಏನು ಮಾಡ್ತಿತ್ತು..? ಬಿಜೆಪಿ ನಾಯಕರು ಕುತಂತ್ರವನ್ನೇ ಮಾಡಿದರು ಅನ್ನೋದನ್ನು ಒಪ್ಪಿಕೊಳ್ಳೋಣ, ಆದರೆ ಕಾಂಗ್ರೆಸ್​ ಅದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಅದು ಕಾಂಗ್ರೆಸ್​ ಸರ್ಕಾರದ ಅಸಮರ್ಥ್ಯತೆ ಅಲ್ಲವೇ..? ಇದನ್ನು ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಒಪ್ಪಿಕೊಳ್ತಾರಾ..? ಜೊತೆಗೆ ಕಾಂಗ್ರೆಸ್​ ಸರ್ಕಾರ ಈ ಹಿಂದೆ ಮಾಡಿದ SIR ಕೂಡ ಮತ ಹಕ್ಕು ಕಸಿಯುವ ಕುತಂತ್ರವೇ ಆಗಿತ್ತಾ..?

Related posts

BJP ಯಲ್ಲಿ ಅಡ್ಡ ಮತದಾನ.. ಯಾರ ಮೇಲಿದೆ ಅನುಮಾನ..? ಶಿಸ್ತು ಕ್ರಮ ಏನು..?

Publicspot

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

RSS ನೋಂದಣಿ ಮಾಡಿಸುವ ವಿಚಾರ.. ಹೋಂ ಮಿನಿಸ್ಟರ್‌ ಮಾತಿಗೆ ಆಕ್ರೋಶ..

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot

S I R ಮತಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ.. ಸರಿಯಾಗ್ತಾರಾ BLO..?

Publicspot