The Public Spot
ರಾಜ್ಯ

ಹಾಸನ ಡಿಸಿ ಕಚೇರಿಯಲ್ಲಿ ಕೋಟಿ ಕೋಟಿ ಡೀಲ್‌.. ಸಿಎಂ ಸಮರ್ಥನೆ..!!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್‌ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಮಾಜಿ ಸಿಎಂ ಹಾಲಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರ ಮತ್ತೊಂದು ತಲೆನೋವು ತಂದಿದ್ದಾರೆ. ಹಾಸನ ಜಿಲ್ಲಾಡಳಿತದಲ್ಲಿ ಫೈಲ್‌ಗಳನ್ನು ಮೂವ್‌ ಮಾಡೋಕೆ ಅಂದ್ರೆ ಪರ್ಮಿಷನ್‌ ಕೊಡೋಕೆ ಲಕ್ಷ ಲಕ್ಷ ಲಂಚ ಪಡೆಯುತ್ತಿರುವುದನ್ನು ಸಾಕ್ಷಿ ಸಮೇತ ಆರೊಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ, ಹಾಸನ ಜಿಲ್ಲೆಯಲ್ಲೇ ಉಳಿದುಕೊಳ್ಳುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರಿಗೆ ಬರೋಬ್ಬರಿ 75 ಲಕ್ಷ ರುಪಾಯಿ ಲಂಚ ಕೊಟ್ಟಿರುವುದನ್ನು ಬಹಿರಂಗ ಮಾಡಿದ್ದಾರೆ.

DC PA ಶಶಿಕಿರಣ್

ಹಾಸನ ಜಿಲ್ಲಾಡಳಿತ ವಿರುದ್ಧ ಲಂಚ ಕೇಳಿದ ಆರೋಪ ಕೇಳಿಬಂದಿದ್ದು, ಜಿಲ್ಲಾಧಿಕಾರಿ ಲತಾಕುಮಾರಿ ಅವರ ಪಿಎ ಶಶಿಕಿರಣ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕಲ್ಲು ಕ್ರಷರ್‌ಗಳಿಗೆ ಲೈಸೆನ್ಸ್ ನೀಡಲು ಲಕ್ಷ ಲಕ್ಷ ರೂಪಾಯಿ ಲಂಚ ಕೇಳಲಾಗಿದೆ ಎಂದು ಆರೋಪಿಸಿರುವ ಹೆಚ್‌.ಡಿ ಕುಮಾರಸ್ವಾಮಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಮಧ್ಯವರ್ತಿಯೊಬ್ಬರ ಜೊತೆ ಡಿಸಿ ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ನಡೆಸಿರುವ ವಾಟ್ಸಾಪ್ ಚಾಟ್‌ಗಳನ್ನು ರಿಲೀಸ್ ಮಾಡಿದ್ದಾರೆ.

ವಾಟ್ಸಪ್‌ ಸಂಭಾಷಣೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಮನೆಯ ಖರ್ಚು 50 ರಿಂದ 60 ಸಾವಿರ ಆಗುತ್ತದೆ ಅನ್ನೋದ್ರಿಂದ ಹಿಡಿದು ಜಿಲ್ಲಾಡಳಿತದ ಕಚೇರಿಯಲ್ಲಿ ಯಾವ ಅಧಿಕಾರಿಗೆ ಎಷ್ಟು ಹಣ ಹೋಗುತ್ತದೆ..? ಜಿಲ್ಲಾಧಿಕಾರಿ ಅವರ ಎಲೆಕ್ಟ್ರಾನಿಕ್‌ ಸೈನ್‌ ಮಾಡೋದು ಯಾರು..? ಪಾಸ್‌ ವರ್ಡ್‌ ಯಾರ ಬಳಿ ಇದೆ..? ಅನ್ನೋ ಮಾಹಿತಿಯನ್ನೂ ಕೊಟ್ಟಿದ್ದಾರೆ. ಇನ್ನೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಹೆಸರು ಹೇಳಿರುವುದಕ್ಕೆ ಅವರ ಬಳಿ ಕೆಲಸ ಮಾಡಿಸಿಕೊಳ್ಳೋದಾದರೆ ನನ್ನ ಬಳಿ ಕೀಳೋಕೆ ಮಾತಾಡ್ತಿದ್ಯಾ..? ಎಂದು ದಗರಿದ್ದಾರೆ. ಇನ್ನೂ ಸಂಸದರನ್ನು ಚೈಲ್ಡ್‌ ಶ್ರೇಯಸ್‌ ಎಂದಿರುವುದು ಮಾನಹಾನಿಕರ ಮಾತಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ಆಪ್ತ ಸಹಾಯಕ ಶಶಿಕಿರಣ್‌ ವಿರುದ್ಧ ಲಂಚದ ಆರೋಪಕ್ಕೆ ಡಿಸಿ ಲತಾಕುಮಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ವಿರುದ್ಧ ಸುಳ್ಳು ಹಾಗೂ ಆಧಾರ ರಹಿತ ಮಾಹಿತಿಗಳನ್ನು ಹರಡಲಾಗುತ್ತಿದೆ. ನಾವು ಯಾವುದೇ ರೀತಿಯ ಅನಧಿಕೃತ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿರುಗೇಟು ನೀಡಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಡಿಸಿ ಲತಾಕುಮಾರಿ ಪರವಾಗಿ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳಿದ ಕೆಲಸವನ್ನು ಮಾಡಿಲ್ಲ ಎಂಬ ಕಾರಣಕ್ಕೆ ಕೆಲವರು ದೂರುತ್ತಿದ್ದಾರೆ ಎಂದು ಡಿಸಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಇನ್ನೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ನಾನು ಮನೆಗೆ ಹೋಗಿ 20 ದಿನ ಆಯ್ತು. ಹಾಸನಾಂಬೆ ಕೆಲಸ ಮಾಡ್ಕೊಂಡು ಇಲ್ಲೇ ಇದ್ದೀನಿ. ಭ್ರಷ್ಟಾಚಾರದ ಆರೋಪ ಮಾಡೋ ಸಮಯ ಇದಲ್ಲ. ನನ್ನ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. ಆದರೆ, ಡಿಸಿ ಕಚೇರಿಯಲ್ಲಿ ಲಕ್ಷ ಲಕ್ಷ ಲಂಚದ ಆರೋಪದ ನಡುವೆಯೂ ಸಿಎಂ ಡಿ.ಕೆ ಶಿವಕುಮಾರ್‌ ಸಮರ್ಥನೆ ಅಸಹನೀಯ ಎನ್ನುವಂತಾಗಿದೆ.

Related posts

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot

Caste Census Extended: ಈ ತಿಂಗಳಾಂತ್ಯಕ್ಕೆ ಜಾತಿಜನಗಣತಿ ಸಮೀಕ್ಷೆ ನಿಜವಾಗಲೂ ಮುಗಿಯುತ್ತಾ..?

Publicspot

ಮಳೆ ಸಾವಿನ ತನಿಖೆಗೆ ಸಮಿತಿ ರಚನೆ.. ಎಂಜಿನಿಯರ್ಸ್‌ ರಜೆ ರದ್ದು..

Publicspot

ದಲಿತ ಸಚಿವರನ್ನು ಮುಂದಿಟ್ಟು ಡಬಲ್​ ಗೇಮ್​ ಆಡಿದ್ರಾ ಸಿಎಂ..?

Publicspot

ನಾಳೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಆಗುತ್ತಾ..? ಇಲ್ವಾ..? ಕಾಂಗ್ರೆಸ್‌-ಬಿಜೆಪಿ ಇಬ್ಬರಿಗೂ ಮನಸ್ಸಿಲ್ವಾ..?

Publicspot