The Public Spot
ರಾಜಕೀಯ

ಕೇಂದ್ರ ರಾಜ್ಯದ ನಡುವೆ ಮೆಟ್ರೋ ಅನುದಾನ ವಾರ್.. ಕೃಷ್ಣಬೈರೇಗೌಡರ ಮಾತಿಗೆ ಕತ್ತರಿ..?

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ನಡುವೆ ನಾಳೆ ಪ್ರಧಾನಿ ನರೇಂದ್ರ ಮೋದಿ ಪಿಂಕ್​ ಲೈನ್​ ಮೆಟ್ರೋ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಬಗ್ಗೆ ವಿಕಾಸಸೌಧದಲ್ಲಿ ಸಿದ್ಧತಾ ಸಭೆ ನಡೆಸಿದ ಗ್ರೇಟರ್​ ಬೆಂಗಳೂರು ಸಚಿವ ಕೃಷ್ಣಬೈರೇಗೌಡ, ನಮ್ಮ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರದ ಪಾಲು ಹಾಗೂ ಕೇಂದ್ರ ಸರ್ಕಾರದ ಪಾಲು ಎಷ್ಟೆಷ್ಟು..? ಅನ್ನೋ ಬಗ್ಗೆ ಮಾಧ್ಯಮಗಳ ಎದುರು ಬಹಿರಂಗ ಮಾಡಿದ್ದರು.

ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ 59 ಕಿ.ಮೀ. ನಮ್ಮ ಮೆಟ್ರೋ ಮಾರ್ಗ ಪೂರ್ಣಗೊಳಿಸುವ ಗುರಿ ಇದೆ. ಹೆಬ್ಬಾಳ ಪ್ಲೈ ಓವರ್​ವರೆಗೆ 32ಕಿ.ಮೀ ಇದೆ. ಶೀಘ್ರವಾಗಿ ಕಿತ್ತಳೆ ಲೈನ್‌ ಕಾಮಗಾರಿ ಆರಂಭಿಸುತ್ತೇವೆ ಎಂದಿದ್ದ ಕೃಷ್ಣಬೈರೇಗೌಡರು, 44.5ಕಿ.ಮೀ ಕಿತ್ತಳೆ ಮಾರ್ಗದ ಕಾಮಗಾರಿಗೆ ಮುಂದಿನ 6 ತಿಂಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದಿದ್ದರು. ಮುಂದುವರಿದು ಮೆಟ್ರೋ ಕಾಮಗಾರಿಯಲ್ಲಿ ಶೇಕಡ 84ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸ್ತಿದೆ. ಕೇಂದ್ರ ಸರ್ಕಾರ ಕೇವಲ ಶೇಕಡ 16 ರಷ್ಟು ವೆಚ್ಚ ಭರಿಸ್ತಿದೆ. ಕೇಂದ್ರ ಸರ್ಕಾರದ್ದೂ ಜವಾಬ್ದಾರಿ ಇದೆ, ಅದನ್ನು ಕೇಂದ್ರ ಸರ್ಕಾರ ನಿಭಾಯಿಸಬೇಕು ಎಂದಿದ್ದರು.

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಟ್ಯಾಕ್ಸ್ ಹೋಗುತ್ತದೆ. ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚು ಹಣವನ್ನು ವಿನಿಯೋಗ ಮಾಡ್ಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಈ ಬಗ್ಗೆ ಮನವಿ ಮಾಡ್ತೇವೆ. ಒಟ್ಟು ನಮ್ಮ ಮೆಟ್ರೋ 3 ಹಂತವನ್ನ ಸೇರಿಸಿದ್ರೆ 77,891ಕೋಟಿ‌ ಆಗುತ್ತದೆ. ಇದರಲ್ಲಿ 65,291ಕೋಟಿ ಹಣ ಕರ್ನಾಟಕ ಸರ್ಕಾರದ್ದು. 12,600 ಕೋಟಿ ಮಾತ್ರ ಕೇಂದ್ರ ಸರ್ಕಾರದ ಹಣ. ನಾವು ₹5 ರೂಪಾಯಿ ಹೂಡಿಕೆ ‌ಮಾಡಿದ್ರೆ ಕೇಂದ್ರದಿಂದ ₹1 ರೂಪಾಯಿ ಹೂಡಿಕೆ ಆಗ್ತಿದೆ. ಅಂತಾರಾಷ್ಟೀಯ ಸಂಸ್ಥೆಯ ಸಾಲದ ಒಡಂಬಡಿಕೆಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಅದನ್ನು ಮರುಪಾವತಿ ಮಾಡೋದು ರಾಜ್ಯ ಸರ್ಕಾರ ಎಂದಿದ್ದರು.

ಕೇಂದ್ರ ಸರ್ಕಾರ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಕೊಡಬೇಕು. ಮೆಟ್ರೋಗೆ ಆಗಿರುವ ನಷ್ಟ ರಾಜ್ಯ ಸರ್ಕಾರ ಭರಿಸಿದೆ. ಯೋಜನೆ ವೆಚ್ಚ ಹೆಚ್ಚಾದ್ರೂ ರಾಜ್ಯ ಸರ್ಕಾರವೇ ಭರಿಸಬೇಕು ಅಂತಾ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರು ಹೇಳಿದ ಬೆನ್ನಲ್ಲೆ ಸಿಎಂ ಡಿಕೆ ಶಿವಕುಮಾರ್​ ಸೇರಿದಂತೆ ಹಲವಾರು ಸಚಿವರು ದನಿಗೂಡಿಸಿದ್ದರು. ಇದೀಗ ಕೃಷ್ಣಬೈರೇಗೌಡರ ಭಾಷಣಕ್ಕೆ ಬ್ರೇಕ್​ ಹಾಕಲಾಗಿದೆ ಎಂದು ಸ್ವತಃ ಕೃಷ್ಣಬೈರೇಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಮೋದಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರ ಭಾಷಣ ಕತ್ತರಿ ಬಿದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಕರ್ನಾಟಕಕ್ಕೆ ನ್ಯಾಯ ಕೇಳಿದಕ್ಕೆ ಸಿಕ್ಕ ಬಹುಮಾನ ಎಂದಿದ್ದಾರೆ. ಮೊದಲಿಗೆ ಸಚಿವ ಕೃಷ್ಣಬೈರೇಗೌಡ ಅವರ ಭಾಷಣಕ್ಕೆ ಸಮಯ ನಿಗದಿ ಪಡಿಸಲಾಗಿತ್ತು. ಇದೀಗ ಭಾಷಣ ತೆಗೆದು ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ಮೆಟ್ರೋ ಕಾಮಗಾರಿಗೆ ಬಹುತೇಕ ಕರ್ನಾಟಕ ಪಾಲು ಹೆಚ್ಚಿದೆ. ಕೇಂದ್ರದ ಪಾಲು ಕಡಿಮೆಯಿದೆ ಎಂದಿದ್ದಕ್ಕೆ ಕೃಷ್ಣಬೈರೇಗೌಡರ ಭಾಷಣ ಕಟ್ ಆಗಿdಎ ಎನ್ನಲಾಗ್ತಿದ್ದು, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರು ಅಭಿವೃದ್ಧಿ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ.‌ ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

Related posts

Ballari Galate; ಕಾಂಗ್ರೆಸ್‌ ಕೊಟ್ಟ ಕಾರಣ ಏನು..? ಬಿಜೆಪಿ ಪ್ರತ್ಯುತ್ತರ ಏನು..?

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆ

admin

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ಕಾಂಗ್ರೆಸ್​ನಲ್ಲಿ ಟಿಕೆಟ್​ ಕುಟುಂಬಕ್ಕೇ ಸೇರಿದೆ.. ಒಂದಾಗುತ್ತಾ ಒಡೆದ ಮನಸ್ಸುಗಳು..?

Publicspot

ಇವತ್ತು ವಿಶ್ವಾಸ ಗೆದ್ದು ಬೀಗ್ತಾರಾ ನಟ ವಿಜಯ್‌‌..? ಯಾರೆಲ್ಲಾ ಬೆಂಬಲಿಸ್ತಾರೆ..?

Publicspot