The Public Spot
ಅಪರಾಧ

Lectuer – Student Love: ಮನೆಯಲ್ಲಿ ಮದುವೆ ತಯಾರಿ.. ಮಗಳು ಪ್ರಾಧ್ಯಾಪಕನ ಜೊತೆ ಪರಾರಿ..

ದೊಡ್ಡಬಳ್ಳಾಪುರದಲ್ಲಿ ಕೊಂಗಾಡಿಯಪ್ಪ ಕಾಲೇಜು ಅಂದ್ರೆ ತುಂಬಾ ಹೆಸರು ಮಾಡಿರುವ ಕಾಲೇಜು ಅದು. ಆ ಕಾಲೇಜಿನಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಕಳೆದ 15 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡ್ತಿದ್ದ ಪ್ರಾಧ್ಯಾಪಕ ಪ್ರವೀಣ್ ಕಾಲೇಜು ವಿದ್ಯಾರ್ಥಿನಿ ಜೊತೆಗೆ ಓಡಿ ಹೋಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರತಿಷ್ಠಿತ ಸರಕಾರಿ ಅನುದಾನಿತ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹಾಗೂ ಎನ್‌ಸಿಸಿಯಲ್ಲೂ ಕಾರ್ಯ ನಿರ್ವಹಣೆ ಮಾಡುವುದು, ಪ್ರವೀಣ್‌, ನಂತರ ಶಿಸ್ತಿನ ಪಾಠ ಹೇಳಬೇಕಿತ್ತು. ಆದರೆ ಕಾಮಪಾಠ ಕಲಿಸಿ ವಿದ್ಯಾರ್ಥಿನಿಯ ತಲೆಗೆ ಪ್ರೇಮದ ಅಮಲು ತುಂಬಿದ್ದಾನೆ.

ಮಕ್ಕಳಿಗೆ ಶಿಸ್ತಿನ ಪಾಠ ಹೇಳುತ್ತಿದ್ದ ಪ್ರಾಧ್ಯಾಪಕ ಪ್ರವೀಣ್‌, ತನಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ತಾನು ಪಾಠ ಹೇಳಿಕೊಡ್ತಿದ್ದ ವಿದ್ಯಾರ್ಥಿನಿ ಜೊತೆಗೆ ಎಸ್ಕೇಪ್ ಆಗಿದ್ದ. ವಿದ್ಯಾರ್ಥಿನಿಗೆ ಆಗಸ್ಟ್‌ 11ರಂದು ಮದುವೆ ನಿಗದಿ ಆಗಿತ್ತು. ಮದುವೆ ಹತ್ತಿರ ಬರುತ್ತಿದ್ದ ಹಾಗೆ ಆಗಸ್ಟ್‌ 2 ರಂದು ಪ್ರಾಧ್ಯಾಪಕನ ಜೊತೆಗೆ ವಿದ್ಯಾರ್ಥಿನಿ ಓಡಿ ಹೋಗಿದ್ದಳು. ಮೊದಲಿಗೆ ದೆಹಲಿಗೆ ಹೋಗಿದ್ದ ಈ ಜೋಡಿ, ಕೆಲವು ದಿನಗಳ ಕಾಲ ದೆಹಲಿಯಲ್ಲಿ ಸುತ್ತಾಡಿ, ನಂತರ ಬೆಂಗಳೂರಿಗೆ ವಾಪಸ್‌ ಆಗಿತ್ತು. ವಿದ್ಯಾರ್ಥಿನಿಯ ಪೋಷಕರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ ಬಳಿಕ ಎಸ್‌ಪಿ ಕಚೇರಿಗೆ ಭೇಟಿ ಕೊಟ್ಟ ಜೋಡಿ, ಹೇಳಿಕೆ ಕೊಟ್ಟು ಮತ್ತೆ ಎಸ್ಕೇಪ್‌ ಆಗಿತ್ತು.

ಯುವತಿಯ ಮನೆಯವರು ಯಾರೋ ಯುವಕ ಜೊತೆಯಲ್ಲಿ ಓಡಿ ಹೋಗಿರಬೇಕು ಎಂದು ಪೋಲೀಸರಿಗೆ ದೂರು ನೀಡಿದ್ದರು. ಆದರೆ ಪೋಲೀಸರ ತನಿಖೆಯಲ್ಲಿ ಪ್ರಾಧ್ಯಾಪಕನೇ ಕರೆದುಕೊಂಡು ಹೋಗಿರುವುದು ಎಂದು ತಿಳಿದು ಬಂದಿತ್ತು. ಬೆಂಗಳೂರಿನ ಎಸ್‌ಪಿ ಕಚೇರಿಗೆ ಬಂದು ಎಸ್‌ಪಿ ಎದುರು ಯುವತಿ ಹೇಳಿಕೆ ಕೊಟ್ಟು ಹೋದ ಬಳಿಕ ನಂಜನಗೂಡಿನ ಲಾಡ್ಜ್‌ ಒಂದರಲ್ಲಿ ಪ್ರೇಮಿಗಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಪ್ರಾಧ್ಯಾಪಕ ಪ್ರವೀಣ್‌ನನ್ನು ಕರೆತಂದು ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಈ ವಿಚಾರ ತಿಳಿಯುತ್ತಿದ್ದ ಹಾಗೆ ಕಾಲೇಜು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಲಾಗಿದೆ. ಈ ಎಲ್ಲಾ ವಿಚಾರ ಬಯಲಾದ ಬಳಿಕ ಪ್ರಾಧ್ಯಾಪಕ ಪ್ರವೀಣ್‌ ಪತ್ನಿ ಕೂಡ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಯುವತಿ ಎಸ್ಕೇಪ್‌ ಆದ ಬಳಿಕ ಪ್ರಾಧ್ಯಾಪಕದ ಪತ್ನಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದು, ನಮಗೆ ಮದುವೆ ಆಗಿದ್ದು ಇಬ್ಬರು ಮಕ್ಕಳಿದ್ದು, ನನಗೆ ವರದಕ್ಷಿಣೆ ಕಿರುಕುಳ ನೀಡಿದ್ದನು. ವಿದ್ಯಾರ್ಥಿನಿಯರ ಜೊತೆಗೆ ಇದೇ ರೀತಿ ನಡೆದಿತ್ತು. ಬೇರೆ ಯುವತಿಯರಿಗೂ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಎಂದು ಹೆಂಡತಿ ಆರೋಪ ಮಾಡಿದ್ದಾರೆ. ಅದೇನೇ ಇರಲಿ ಪೋಷಕರು ನಂಬಿಕೆ ಇಟ್ಟು ಕಾಲೇಜುಗಳಿಗೆ ಕಳುಹಿಸುತ್ತಾರೆ. ಮಕ್ಕಳನ್ನೇ ತಮ್ಮ ಕಾಮತೃಷೆಗೆ ಬಳಸಿಕೊಳ್ಳುವ ಚಾಳಿ ಮುಂದುವರಿದರೆ ಪೋಷಕರು ನಂಬುವುದು ಯಾರನ್ನ ಅನ್ನೋ ಪ್ರಶ್ನೆ ಉದ್ಬವ ಆಗುತ್ತದೆ. ಜೊತೆಗೆ NCC ಗೆ ಸೇರಿಕೊಂಡು ಕೆಲಸ ಮಾಡುವುದಕ್ಕೆ ಪೋಷಕರು ಅನುಮತಿ ನೀಡಲು ಸಾಧ್ಯವೇ..? ಅನ್ನೋ ಪ್ರಶ್ನೆಯೂ ಎದುರಾಗುತ್ತದೆ.

Related posts

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot

ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆ ಮತ್ತು ಅನುಮಾನ

Publicspot

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

ಅಪ್ರಾಪ್ತ ವಯಸ್ಸಲ್ಲಿ ಪ್ರೀತಿ.. ಪ್ರೇಮ.. ಇಷ್ಟೆ ಇಷ್ಟೆ.. ಎಚ್ಚರ ತಪ್ಪಿದ್ರೆ ಫಿನಿಷ್..!!

Publicspot

ಜೈಲಲ್ಲಿ ಪವಿತ್ರಾಗೌಡಗೆ ಮನೆಯೂಟ ಸಿಗುತ್ತಾ..? ಇಲ್ವಾ..? ಹೈಕೋರ್ಟ್‌ ಹೇಳಿದ್ದೇನು..?

Publicspot