The Public Spot
ಅಪರಾಧ

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

ಫ್ರೆಂಡ್ಸ್​​ ಜೊತೆ ಸೇರಿಕೊಂಡು ಹೆತ್ತವಳನ್ನೇ ಕೊಂದಿದ್ದಾರೆ ಮಗಳು. ತಾಯಿ ಅಂದ್ರೆ ಭೂಮಿ ತೂಕದ ಪ್ರೀತಿ.. ತಾಯಿ ಅಂದ್ರೆ ಸಹನಾ ಮೂರ್ತಿ.. ತನ್ನ ಜೀವವನ್ನೇ ಪಣಕ್ಕಿಟ್ಟು ಕರುಳ ಕುಡಿಗೆ ಜೀವ ತುಂಬ್ತಾಳೆ. ಆದರೆ ಇಂತಹ ತಾಯಿ ಋಣ ತೀರಿಸೋಕೆ ಮುಕ್ಕೋಟಿ ದೇವರಿಂದಲೂ ಸಾಧ್ಯವಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಬಳು ಮಹಾ ಕ್ರೂರಿ ಹೆತ್ತವಳ ಋಣ ತೀರಿಸೋ ಬದಲು, ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿಕೊಂಡು ಬಂದಿದ್ದ ಅಮ್ಮನ ಉಸಿರನ್ನೇ ನಿಲ್ಲಿಸಿದ್ದಾಳೆ. ಬೆಂಗಳೂರಲ್ಲಿ ಇಂತದ್ದೇ ದುರಂತ ಕಥೆಯೊಂದು ನಡೆದು ಹೋಗಿದೆ.. ಹೊತ್ತಲ್ಲದ ಹೊತ್ತಲ್ಲಿ ಬಂದಿದ್ದ ಅಪ್ರಾಪ್ತೆಯ ಲವರ್‌, ಅಮಾಯಕಿಯ ಹೆಣ ಉರುಳಿಸಿದ್ದಾನೆ. ಸ್ನೇಹಿತರ ಜೊತೆ ಸೇರ್ಕೊಂಡ ಮಗಳು, ಹೆತ್ತವಳು ಅನ್ನೋದನ್ನೂ ನೋಡದೆ ಕೊಂದು ಹಾಕಿದ್ದಾಳೆ.

ತಂದೆಯನ್ನ ಕೊಂದ ಮಗ, ತಾಯಿಯನ್ನ ಕೊಂದ ಮಗ ಅನ್ನೋ ಸುದ್ದಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಅಪ್ರಾಪ್ತ ಮಗಳೊಬ್ಬಳು ತಾಯಿಯನ್ನೇ ಕೊಂದಿದ್ದಾಳೆ. 35 ವರ್ಷದ ನೇತ್ರಾವತಿ ಗಂಡನಿಂದ ದೂರವಾಗಿ ಮಗಳ ಜೊತೆಯಲ್ಲಿ ಏಕಾಂಗಿ ಜೀವನ ಮಾಡುತ್ತಿದ್ದಳು. ಮಗಳ ಜೊತೆಗೆ ತನಗೂ ಒಂದು ಬದುಕು ಬೇಕು ಅಂತಾ ಮತ್ತೊಬ್ಬನನ್ನ ಮದುವೆ ಆಗಿದ್ದಳು. ಆದರೆ, ಎರಡನೇ ಗಂಡನೂ ಈಕೆ ಜೊತೆ ಬಹಳ ದಿನ ಸಂಸಾರ ಮಾಡಿರಲಿಲ್ಲ. ಹೀಗಾಗಿ ಅಮ್ಮ, ಮಗಳೇ ಉತ್ತರಹಳ್ಳಿಯ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ವಾಸವಾಗಿದ್ದರು. ಫೈನಾನ್ಸ್ ಕಂಪನಿಯಲ್ಲಿ ಹೆಲ್ಫರ್ ಆಗಿದ್ದ ನೇತ್ರಾವತಿ, ಕಷ್ಟಪಟ್ಟು ಮಗಳನ್ನ ಸಾಕ್ತಿದ್ರು. ಆದ್ರೆ ಮಗಳು ತಾಯಿಯ ಪ್ರಾಣ ತೆಗೆದಿದ್ದಾಳೆ. 18 ವರ್ಷ ತುಂಬದ ಮಗಳಿಗೆ ಪ್ರೀತಿ, ಪ್ರೇಮ ಶುರುವಾಗಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ಪ್ರಿಯಕರ ಮನೆಗೆ ಬಂದು ಹೋಗುವ ಮಟ್ಟಕ್ಕೂ ತಲುಪಿತ್ತು.

ಅಕ್ಟೋಬರ್ 5ರಂದು ನೇತ್ರಾವತಿ ಮಗಳು, ತನ್ನ ಬಾಯ್​ಫ್ರೆಂಡ್​​ ಜೊತೆ ಸೇರಿ ನಾಲ್ವರು ಸ್ನೇಹಿತೆಯರನ್ನ ತನ್ನ ಮನೆಗೆ ಕರ್ಕೊಂಡು ಬಂದಿದ್ದಳು. ರಾತ್ರಿ 10.30 ಆದ್ರೂ ಮನೆಯಿಂದ ಹೋಗಿರಲಿಲ್ಲ. ಇದ್ರಿಂದ ಸಿಟ್ಟಾದ ತಾಯಿ ನೇತ್ರಾವತಿ, ಮಗಳಿಗೆ ಬೈದು ಬುದ್ಧಿ ಹೇಳಿದ್ದಳು. ಇಷ್ಟು ಹೊತ್ತಲ್ಲಿ ಸ್ನೇಹಿತರನ್ನ ಮನೆಗೆ ಕರ್ಕೊಂಡು ಬರ್ತೀಯ. ಪೊಲೀಸ್ರಿಗೆ ಹೇಳ್ತಿನಿ ಅಂತಾ ಬೆದರಿಸಿದ್ದಳಂತೆ.. ಇದರಿಂದ ಸಿಟ್ಟಿಗೆದ್ದ ಅಪ್ರಾಪ್ತ ಸ್ನೇಹಿತರ ಬಳಗ ನೇತ್ರಾವತಿ ಕುತ್ತಿಗೆಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಆ ನಂತರ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದು ನಾಪತ್ತೆಯಾಗಿದ್ದರು. ಪೊಲೀಸರು ಆತ್ಮಹತ್ಯೆ ಅಂತಾ UDR ಪ್ರಕರಣ ದಾಖಲಿಸಿಕೊಂಡಿದ್ರು. ಈ ವೇಳೆ ಅಪ್ರಾಪ್ತೆ ಏನಾದ್ರು ಮನೆಯಲ್ಲೇ ಇದ್ದಿದ್ರೆ ಯಾರಿಗೂ ಡೌಟ್‌ ಬರ್ತಿತ್ತೋ ಇಲ್ವೋ ಗೊತ್ತಿಲ್ಲ.. ಹೆತ್ತವಳನ್ನ ಕೊಂದ ಮಗಳೂ ಕೂಡ ನಾಪತ್ತೆ ಆಗಿದ್ರಿಂದ ಅನುಮಾನ ಮೂಡಿತ್ತು.

ಹೆತ್ತವಳು ಸತ್ತು ಮೂರು ದಿನ ಆದರೂ ಅಪ್ರಾಪ್ತ ಮಗಳು ಮನೆಗೆ ಬಂದಿರ್ಲಿಲ್ಲ. ಹೀಗಾಗಿ ನೇತ್ರಾವತಿ ಅಕ್ಕ ಅನಿತಾ ಮಿಸ್ಸಿಂಗ್ ದೂರು ನೀಡಿದ್ದರು.. ಏಕಾಏಕಿ ಮನೆಗೆ ಬಂದ ಹುಡುಗಿ ದೊಡ್ಡಮ್ಮನ ಬಳಿ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದಳು. ಕೂಡಲೇ ಪೊಲೀಸ್ರಿಗೆ ವಿಷ್ಯ ಮುಟ್ಟಿಸ್ತಿದ್ದಂತೆ ಐವರು ಅಪ್ರಾಪ್ತರನ್ನ ಪೊಲೀಸರು ಎತ್ತಾಕ್ಕೊಂಡು ಬಂದಿದ್ದಾರೆ.. ಹೆತ್ತವಳು ಅನ್ನೋದನ್ನೂ ನೋಡದೆ, ಉಸಿರು ನಿಲ್ಲಿಸಿದ್ದ ಮಗಳ ಜೊತೆಗೆ ಎಲ್ಲಾ ಅಪ್ರಾಪ್ತ ಪೋಲಿಗಳನ್ನು ಕಂಬಿ ಹಿಂದೆ ತಳ್ಳಿದ್ದಾರೆ.

Related posts

ಬಡ್ಡಿ ಕೊಡೋಕೆ ಆಗದೆ ಕೊಲೆ ಮಾಡೋಕೆ ಸ್ಕೆಚ್​.. ಆರೋಪಿಗಳು ಸಿಕ್ಕಿ ಬಿದ್ದಿದ್ಹೇಗೆ..?

Publicspot

ಶಾಸಕ ಚಂದ್ರು ಲಮಾಣಿಯನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ರಾ..? ಬಂಜಾರ ಬೆಂಬಲ..!!

Publicspot

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಪರ ವಕೀಲರ ಪ್ಲಾನ್ ಏನು..? ​

Publicspot

ತರಬೇತಿ ಸರ್ಟಿಫಿಕೇಟ್‌‌ ಪಡೆಯಲು ಹೋದ ವೈದ್ಯೆ ಕೊಂದಿದ್ಯಾರು..?

Publicspot

Hassan Tragedy most of the Students Deaths: ಹಾಸನ‌ ದುರಂತದಲ್ಲಿ ಸತ್ತವರೆಲ್ಲಾ ಸ್ಟೂಡೆಂಟ್ಸ್​.. ಯಾಕೆ..?

Publicspot