The Public Spot
Uncategorized

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ತಾವೇ ಸುಪ್ರೀಂಕೋರ್ಟ್‌‌ನಲ್ಲಿ ಕಾಣಿಸಿಕೊಂಡ್ರು. ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡ್ತಿರೋದ್ರಿಂದ ಲೋಪದೋಷಗಳ ಬಗ್ಗೆ ದೀದಿ ಸರ್ಕಾರ ಹಾಕಿದ್ದ ಅರ್ಜಿಗಳ ವಿಚಾರಣೆ ನಡೆದಿದ್ದು, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಭಾಗ್‌ಚಿ ಮತ್ತು ವಿಪುಲ್ ಪಂಚೋಲಿ ಅವರ ಪೀಠದಲ್ಲಿ ವಿಚಾರಣೆ ನಡೆದಿದೆ. ಸರ್ಕಾರಿ ವಕೀಲರು, ಎಲೆಕ್ಷನ್‌‌ ಕಮೀಷನ್‌ ಪರ ವಕೀಲರು ತಮ್ಮ ವಾದ ಮಮಡಿಸಿದ್ರು.. ಆಗ ನೂರಾರು ವಕೀಲರ ಮಧ್ಯೆ ಸರ್ವೋಚ್ಛ ನ್ಯಾಯಾಲಯದ ಎದುರು ವಿನ್ರಮತೆಯಿಂದ ಕೈ ಮುಗಿದು, ಮಾನ್ಯ ಮುಖ್ಯನ್ಯಾಯಮೂರ್ತಿಗಳೇ ನಾನು ಮಾತಾಡಲು ಅವಕಾಶ ಮಾಡಿಕೊಡಿ ಅಂತ ನ್ಯಾಯಪೀಠದ ಮುಂದೆ ಮನವಿ ಮಾಡಿದ್ರು.

ಸರ್‌ ಪ್ಲೀಸ್‌‌ ನನಗೆ 5 ನಿಮಿಷ ಟೈಂ ಕೊಡಿ, ನ್ಯಾಯ ಅನ್ನೋದು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ. ಹೀಗಾಗಿ ನಾನು ಮಾತನಾಡಲೇಬೇಕು ಸರ್‌, ದಯವಿಟ್ಟು ಎಂದ ಮಮತಾ ಬ್ಯಾನರ್ಜಿಗೆ ಮಮತಾ ಮೇಡಂ, ಖಂಡಿತಾ ಅವಕಾಶ ಕೊಡ್ತೀವಿ. 5 ನಿಮಿಷ ಅಲ್ಲ, ನಿಮಗೆ 15 ನಿಮಿಷ ಕೊಡುತ್ತೇವೆ. ನ್ಯಾಯಾಲಯದಲ್ಲಿ ಮುಕ್ತವಾಗಿ ಮಾತಾಡಬಹುದು. ಮೊದಲು ವಕೀಲರು ಅವರವರ ವಾದ ಮುಗಿಸಲಿ ಎಂದರು. ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿದ್ದ ಸಿಜೆಐ ಸೂರ್ಯಕಾಂತ್‌ ಹೀಗೆ ಹೇಳ್ತಿದ್ದಂತೆ, ಮಮತಾ ಬ್ಯಾನರ್ಜಿ ಕೈಕಟ್ಟಿ ನಿಂತಿದ್ರು.. ಆ ಬಳಿಕ ನ್ಯಾಯಾಲಯ ಮಮತಾ ಬ್ಯಾನರ್ಜಿ ಅವರಿಗೆ ಸಮಯ ನೀಡಿತು. ಆಗ ಮಮತಾ ಬ್ಯಾನರ್ಜಿ ಕೋರ್ಟ್‌ಗೆ ಹೇಳಿದ ಒಂದೊಂದು ಮಾತುಗಳು SIR‌ನಲ್ಲಿ ಆಗ್ತಿರೋ ಲೋಪದೋಷಗಳ ಬಗ್ಗೆ ಒಂದೊಂದೇ ಪಾಯಿಂಟ್‌ ಹೇಳ್ತಿದ್ರೆ ನ್ಯಾಯಮೂರ್ತಿಗಳೇ ಆಶ್ಚರ್ಯಚಕಿತರಾಗಿದ್ರು..

ಮಮತಾ ಬ್ಯಾನರ್ಜಿ ದಾಖಲೆ ಸಮೇತ ಮಂಡಿಸಿದ ಒಂದೊಂದು ವಾದ ಕೇಳಿ ಅಚ್ಚರಿಗೊಂಡ ನ್ಯಾಯಮೂರ್ತಿಗಳು, ಚುನಾವಣಾ ಆಯೋಗಕ್ಕೆ ಉತ್ತರ ಕೇಳಿ ನೋಟಿಸ್‌ ಜಾರಿಮಾಡಿದ್ದಾರೆ.. CJI ಸರ್‌‌ ಬಂಗಾಳದಲ್ಲಿ ಬೇಕಾಬಿಟ್ಟಿ SIR ಆಗ್ತಿದೆ. ಬೇಕಾಬಿಟ್ಟಿಯಾಗಿ ಹೆಸರುಗಳನ್ನ ತೆಗೆದು ಹಾಕಿದ್ದಾರೆ. ಮದುವೆಯಾಗಿ ಗಂಡನ ಮನೆಗೆ ಹೋದವರ ಹೆಸರು ತೆಗೆದಿದ್ದಾರೆ. ಬಡವನೊಬ್ಬ ಸ್ವಂತ ಮನೆಗೆ ಹೋದ್ರೆ ಅವನ ಹೆಸರು ತೆಗೆದಿದ್ದಾರೆ. ಉದ್ಯೋಗಿಗಳು ಬೇರೆ ಕಡೆ ಶಿಫ್ಟ್‌ ಆದರೂ ಹೆಸರು ತೆಗೆದಿದ್ದಾರೆ. ಹಳೇ ವಿಳಾಸ, ಹೊಸ ವಿಳಾಸ 2 ಕಡೆಯೂ ಹೆಸರು ಡಿಲೀಟ್‌‌ ಆಗಿವೆ ಎಂದು ಮಮತಾ ಬ್ಯಾನರ್ಜಿ ಹೇಳಿದ ಬಳಿಕ SIRಗೂ ಮುನ್ನ ನೋಟಿಸ್‌‌ ಕೊಡಬೇಕು, ಕೊಟ್ಟಿರ್ತಾರೆ. ಹೆಸರು ತೆಗೆದಿದ್ರೆ ಸೇರಿಸಲು ಅವಕಾಶ ಇದೆ. ಅದರಲ್ಲಿ ತಪ್ಪೇನಿದೆ? ಎಂದಾಗ ನಾನು ಇದೇ ಪ್ರಶ್ನೆಗಳನ್ನ ಕೇಳಿ 6 ಸಲ ಪತ್ರ ECಗೆ ಪತ್ರ ಬರೆದಿದ್ದೆ. ಆದ್ರೆ ನನ್ನ ಒಂದು ಪತ್ರಕ್ಕೂ ಸ್ಪಷ್ಟ ಉತ್ತರ ಕೊಟ್ಟಿಲ್ಲ ಸರ್‌‌. SIR ಮೊದಲ ಹಂತದಲ್ಲಿ 58 ಲಕ್ಷ ಹೆಸರುಗಳನ್ನ ಅಳಿಸಲಾಗಿದೆ. SIR ನಡೆಸುವಾಗ ನೋಟಿಸ್‌ ಕೊಡ್ತಾರೆ, ಕೊಟ್ಟಿದ್ದಾರೆ. ಹೆಸರು ಡಿಲೀಟ್‌‌ಗಷ್ಟೇ ಅವಕಾಶ-ಹೆಸರು ಸೇರಿಸಲು ಆಗ್ತಿಲ್ಲ. ಫಾರಂ 6ರ ಅಡಿ ಮತದಾರರಿಗೆ ಮೇಲ್ಮನವಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ವಾದ ಕೇಳ್ತಿದ್ದ ಹಾಗೆ ನ್ಯಾಯ ಪೀಠ, ಅದು ಹೇಗೆ ಸಾಧ್ಯ? ಹೆಸರು ಸೇರಿಸಲು ಅವಕಾಶವಿದೆ. ನೋಟಿಸ್‌‌ ಪಡೆದವರು ಸ್ಪಷ್ಟನೆ ಕೊಟ್ರೆ ಸೇರಿಸಬೇಕು ಅಲ್ವಾ ಎಂದಿದ್ದಾರೆ. ಆದಕ್ಕೆ ಮಮತಾ ಬ್ಯಾನರ್ಜಿ ಉತ್ತರ ಕೊಟ್ಟಿದ್ದು, ಜಡ್ಜ್‌ ಸರ್‌, ಸಾಮಾನ್ಯ ಜನರಿಗಷ್ಟೇ ನೋಟಿಸ್‌‌ ಕೊಟ್ಟಿಲ್ಲ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ಥ್ಯ ಸೇನ್ ಅವರಿಗೂ ಕೊಟ್ಟಿದ್ದಾರೆ. ಪ್ರಸಿದ್ಧ ಬಂಗಾಳಿ ಕವಿ ಜಾಯ್ ಗೋಸ್ವಾಮಿಯವ್ರಿಗೆ ಕೊಟ್ಟಿದ್ದಾರೆ. ಸಂಸದ ದೀಪಕ್ ಅಧಿಕಾರಿ ಸೇರಿ ಹಲವರಿಗೆ SIR ನೋಟಿಸ್‌ ಬಂದಿದೆ. ಹೆಸರು ಡಿಲೀಟ್‌‌ ಅಧಿಕಾರ BLO ಮೇಲ್ಪಟ್ಟ ಅಧಿಕಾರಿಗಳಿಗೆ ಇತ್ತು. ಆದರೆ ಆಯೋಗ ಮೈಕ್ರೋ ಅಬ್ಸರ್ವರ್ಸ್‌ಗೆ ಅಧಿಕಾರ ಕೊಟ್ಟಿದೆ. ಈ ಮೈಕ್ರೋ ಅಬ್ಸರ್ವರ್‌‌ಗಳು ಮೂಲತಃ ಬಂಗಾಳದವರೇ ಅಲ್ಲ. ಬಿಜೆಪಿ ಆಡಳಿತ ಇರುವ ಬೇರೆ ಬೇರೆ ರಾಜ್ಯಗಳಿಂದ ನೇಮಕ ಆಗಿದ್ದಾರೆ. ಇವರ ಕಾಟ ತಡೆಯಲಾಗದೇ 150 BLOಗಳ ಜೀವ ಹೋಗಿದೆ. ಮುಖ್ಯ ಚುನಾವಣಾಧಿಕಾರಿಗಳ ಒತ್ತಡದಿಂದಲೇ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಆಗ ಎಲ್ಲದಕ್ಕೂ ರಾಜಕೀಯ ಲೇಪನ ಆಗಬಾರದು ಮಮತಾ ಮೇಡಂ ಎಂದಿದ್ದಾರೆ.

ಆಗ ರಾಜಕೀಯ ಕಾರಣಕ್ಕೆ ಹೇಳ್ತಿಲ್ಲ ಸರ್‌‌, ದಾಖಲೆಗಳಿವೆ. ಡೆತ್‌ನೋಟ್‌ ಬರೆದಿಟ್ಟಿದ್ದಾರೆ, ಪತ್ರಿಕೆಗಳಲ್ಲೂ ಸುದ್ದಿ ಆಗಿವೆ. ಪಶ್ಚಿಮ ಬಂಗಾಳಕ್ಕೆ ನಾನು ಮುಖ್ಯಮಂತ್ರಿ ಆಗಿರಬಹುದು. ಆದರೆ ನಾನು ಕಾಮನ್‌‌ ಕುಟುಂಬದಿಂದ ಬಂದವಳು ಸರ್‌, ಬಂಗಾಳವನ್ನ ಗುರಿಯಾಗಿಸಿ ಉದ್ದೇಶಪೂರ್ವಕ SIR ಆಗ್ತಿದೆ. 2 ವರ್ಷದಿಂದ ಸುಮ್ಮನಿದ್ದು ಎಲೆಕ್ಷನ್‌ ಟೈಂನಲ್ಲೇ ಯಾಕೆ..? ಎಂದಿದ್ದಾರೆ. AI ಬಳಸಿ ಎಲ್ಲೋ ಕೂತು ಡಿಲೀಟ್‌‌ ಮಾಡ್ತಾ ಇದ್ದಾರೆ. ಚುನಾವಣಾ ಆಯೋಗ ವಾಟ್ಸಪ್‌ ಆಯೋಗ ಆಗಿದೆ. ಆಧಾರ್‌‌ ಅಷ್ಟೇ ಅಲ್ಲ, ಸರ್ಕಾರದ ದಾಖಲೆಗಳನ್ನೂ ಸ್ವೀಕರಿಸ್ತಿಲ್ಲ. ರೇಷನ್‌ಕಾರ್ಡ್‌‌, ಜಾತಿಪತ್ರ, ಸರ್ಕಾರದ ಗುರುತಿನ ಚೀಟಿ, ಸರ್ಕಾರ ಕೊಟ್ಟ ಪ್ರಮಾಣಪತ್ರಗಳಿಗೂ SIRನಲ್ಲಿ ಒಪ್ತಿಲ್ಲ ಎಂದಿದ್ದಾರೆ. ಆಗ SIR ಉದ್ದೇಶ ಅರ್ಹ ಮತದಾರರನ್ನ ಉಳಿಸುವುದು ಆಗಿದೆ. ಅದನ್ನ ಬಿಟ್ಟು ಅರ್ಹರನ್ನೇ ಪಟ್ಟಿಯಿಂದ ತೆಗೆಯಬಾರದು. ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯಬೇಕು. SIR ನೋಟಿಸ್‌ ಕಳಿಸುವಾಗ ಜಾಗರೂಕರಾಗಿರಬೇಕು. ಆಯೋಗದ ಪರ ವಕೀಲರೇ ಇದು ಗಂಭೀರವಾದ ವಿಷಯ. ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಬುದ್ಧಿವಂತರಾಗಿರಲು ಹೇಳಿ. ಫೆಬ್ರವರಿ 10ರೊಳಗೆ ಎಲ್ಲದಕ್ಕೂ ಸ್ಪಷ್ಟ ಉತ್ತರವನ್ನ ಸಲ್ಲಿಸಬೇಕು ಎಂದು ನೋಟಿಸ್‌ ಜಾರಿಯಾಗಿದೆ.

Related posts

ಗಾಯಕ ರಘು ದೀಕ್ಷಿತ್‌ ಮತ್ತೆ ಮದುವೆ.. ಹೊಸ ಬಾಳಿಗೆ ವಾರಿಜಶ್ರೀ ಸಂಗಾತಿ..

Publicspot

Devil Release; ರಾಜ್ಯಾದ್ಯಂತ ನಟ ದರ್ಶನ್​ ಫ್ಯಾನ್ಸ್​​ ಆರ್ಭಟ..

Publicspot

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾನ ಹಬ್ಬ.. ಖರ್ಗೆಗೆ ಸಂಕಷ್ಟ..

Publicspot

Bihara Result; ಕಾಂಗ್ರೆಸ್‌ ಸೋಲಿಗೆ ಕಾರಣ ಏನು..? EVM ತಿರುಚಲಾಗಿದ್ಯಾ..?

Publicspot

ನಟ ಧ್ರುವಾ ಸರ್ಜಾಗೆ ಬಂಧನದ ಭೀತಿ.. ಮುಂಬೈನಲ್ಲಿ FIR..

Publicspot

ಅಮೆರಿಕ ಎದುರು ಗುಟುರು ಹಾಕಿದ ಭಾರತ – ರಷ್ಯಾ ಜೋಡಿ..

Publicspot