The Public Spot
ಅಪರಾಧ

ಕಮಲಾಕರ ಭಟ್‌ಗೆ ಬಲೆ ಬೀಸಿದಾಕೆ ಸುಚಿತ್ರಾ ಅಲ್ಲ.. ಸುಳ್ಳು ಹೆಸರಿನ ಹಿಂದಿನ ರಹಸ್ಯ ಏನು..?

ಜ್ಯೋತಿಷಿ ಕಮಲಾಕರ ಭಟ್ ಅವರನ್ನು ಬುಟ್ಟಿಗೆ ಹಾಕೊಂಡು ಗಂಡನ ಅಣ್ಣನನ್ನೇ ಕೊಲೆ ಮಾಡಿ ಜೈಲಿನಲ್ಲಿರುವ ಸುಚಿತ್ರಾ ಹೆಸರು ಅಸಲಿಗೆ ಸುರೇಖಾ. ಆದರೆ ಗಂಡ ಬೆಂಗಳೂರಿನಲ್ಲಿ ದುಡಿಯಲು ಹೋದಾಗ ಆಂಟಿ ಸೋಷಿಯಲ್‌ ಮೀಡಿಯಾದಲ್ಲಿ ಹುಡುಗರನ್ನು ಸೆಳೆಯುವ ಉದ್ದೇಶದಿಂದ ತನ್ನ ಹೆಸರನ್ನು ಸುಚಿತ್ರಾ ಎಂದು ಬದಲಿಸಿಕೊಂಡಿದ್ದಳು ಅನ್ನೋ ಸತ್ಯ ಬಯಲಾಗಿದೆ. ಅಷ್ಟೇ ಅಲ್ಲದೇ ಹುಡುಗರು ಯಾರಾದರೂ ತನ್ನ ಮನೆಗೆ ಬಂದಾಗ ಹಳೇ ಫೋಟೋ ತೋರಿಸಿ, ಇದು ನನ್ನ ಅಕ್ಕ, ನಾವಿಬ್ಬರೂ ಅವಳಿ ಜವಳಿ ಎಂದು ಸುಳ್ಳು ಸುದ್ದಿಯನ್ನೇ ನಂಬುವಂತೆ ಮಾಡುತ್ತಿದ್ದಳೂ ಅನ್ನೋದೂ ಗೊತ್ತಾಗಿದೆ.

ತುಟಿಯಂಚಲ್ಲೇ ಚಿನ್ನಾಟದ ನಗು ಬೀರುವ ಸುಚಿತ್ರಾ, ಬಾಗಿಲ ಮರೆಯಲ್ಲಿ ನಿಂತು ಪ್ರೇಮದಾಟಕ್ಕೆ ಆಹ್ವಾನ ನೀಡುತ್ತಿದ್ದಳು ಅನ್ನೋದೂ ಗೊತ್ತಾಗಿದೆ. ಊರೂರಲ್ಲೂ ಸುನಾಮಿ ಎಬ್ಬಿಸಿದ ಸುಚಿತ್ರಾ, ಪ್ರೇಮ ಪ್ರಸಂಗ ಬಯಲಾಗುತ್ತಿವೆ. ಗಂಡ-ಮಕ್ಕಳನ್ನ ಮರೆತು ನಿಂತಿದ್ದ ಆಂಟಿ, ಪ್ರೇಮದ ಪಲ್ಲಕ್ಕಿ ಏರೋದಕ್ಕೆ ಹಾತೊರೆಯುತ್ತಿದ್ದಳು. ಮೈ-ಕೈ ತುಂಬ್ಕೊಂಡ ಪ್ರಾಯದ ಹುಡುಗರು ಫೇಸ್‌ಬುಕ್‌ನಲ್ಲಿ ಸಿಕ್ಕರೆ ತಾನೇ ಬಲೆ ಬೀಸುತ್ತಿದ್ದಳು. ಸೋಷಿಯಲ್‌ ಮೀಡಿಯಾವನ್ನೇ ತನ್ನ ಕಾಮದ ಅಡ್ಡೆ ಮಾಡ್ಕೊಂಡಿದ್ದಳು. ಹೈ-ಫೈ ಆಗಿ ಕಾಣ್ತಿದ್ದ ಹುಡುಗರನ್ನೇ ಹುಡುಕಿ ಹುಡುಕಿ ಗಾಳ ಹಾಕ್ತಿದ್ದಳು. ಮೊದಲಿಗೆ ತಾನೇ ಹುಡುಗರಿಗೆ ಕಮೆಂಟ್‌ ಮಾಡುತ್ತಿದ್ದಳು. ಆ ಬಳಿಕ ನಂಬರ್‌ ಬದಲಾವಣೆ ಆಗ್ತಿತ್ತು ಎನ್ನಲಾಗಿದೆ.

ಮೊದಲಿಗೆ ಹಾಯ್‌ ಬಾಯ್‌ನಿಂದ ಶುರುವಾಗುವ ಸಂದೇಶಗಳು ನಂತರ ಪೋಲಿ ಸಂದೇಶದಿಂದ ಮಂಚದವರೆಗೂ ತಂದು ನಿಲ್ಲಿಸಿಕೊಳ್ತಿದ್ದಳು. ಎರಡ್ಮೂರು ತಿಂಗಳು ಮೆಸೇಜ್‌ ಮಾಡುತ್ತಿದ್ದ ಆಂಟಿ ಸುಚಿತ್ರಾ, ಆ ನಂತರ ಚನ್ನಾಗಿ ಪಳಗಿಸಿಕೊಂಡ ಬಳಿ ಹಣವಂತ ಅನ್ನೋದನ್ನು ಖಚಿತ ಮಾಡ್ಕೊಂಡ ಬಳಿಕ ಭೇಟಿ ಮಾಡೋಣ, ಡೇಟಿಂಗ್‌, ಲಾಂಗ್‌ ರೈಡ್‌ ಹೋಗಣ ಅಂತಾ ಆಹ್ವಾನ ಕೊಡ್ತಿದ್ದಳು. ಪ್ರೀತಿ ಹೆಸರಲ್ಲಿ ಕಾಮದ ನಶೆ ಏರಿಸ್ತಿದ್ದ ಸುಚಿತ್ರಾ, ಕೈಗೆ ಸಿಕ್ಕಷ್ಟು ಹಣವನ್ನು ಬಾಚಿಕೊಳ್ತಿದ್ದಳು. ಕಂಡ ಕಂಡವ್ರ ಜೊತೆ ಲಲ್ಲೆ ಹೊಡೀತಿದ್ದ ಸುಚಿತ್ರಾ ಹುಡುಗರನ್ನು ತನ್ನ ಮನೆಗೇ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಮನೆಗೆ ಬಂದ ಹುಡುಗರು ಮಕ್ಕಳು ಯಾರು8 ಎಂದು ಕೇಳಿದರೆ ತನ್ನ ಹಳೇ ಫೋಟೋವನ್ನೇ ತೋರಿಸಿ ಇವ್ಳು ನನ್ನ ಅಕ್ಕ ಸುರೇಖಾ, ನಾವಿಬ್ಬರು ಅವಳಿ ಜವಳಿ. ಆಕೆಯ ಗಂಡನೇ ಮಹೇಶ. ನನ್ನಕ್ಕ ತೀರಿ ಹೋದ್ಮೇಲೆ, ನಾನೇ ಈ ಮಕ್ಕಳನ್ನ ಸಾಕ್ತಿದ್ದೀನಿ ಅಂತಾ ಕಥೆ ಕಟ್ಟುತ್ತಿದ್ದಳು. ಅಷ್ಟೇ ಅಲ್ಲ, ನಾನಿನ್ನೂ ಸಿಂಗಲ್‌‌, ಮಿಂಗಲ್‌ ಆಗೋದಕ್ಕೆ ಒಳ್ಳೆ ಹುಡುಗ ಸಿಕ್ತಿಲ್ಲ ಅಂತಾ ಒಬ್ಬೊಬ್ಬರ ಮುಂದೆ ಒಂದೊಂದು ರೀತಿಯ ಕಥೆ ಹೇಳ್ತಿದ್ದಳು. ಆದ್ರೆ, ಆಂಟಿ ಸಿಕ್ಕ ಖುಷಿಯಲ್ಲಿದ್ದ ಹುಡುಗರು, ಹಿಂದೆ ಮುಂದೆ ಯೋಚಿಸದೆ ಈಕೆ ಹೇಳಿದ್ದನ್ನೇ ಪರಮ ಸತ್ಯ ಅಂತಾ ನಂಬಿ ಪ್ರೇಮದ ಅಮಲಲ್ಲಿ ತೇಲಾಡ್ತಿದ್ರು ಅನ್ನೋದು ಗೊತ್ತಾಗಿದೆ.

Related posts

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

Publicspot

ACTOR AJAY RAO MARRIAGE STORY: ಕಷ್ಣನ ಲವ್‌ ಸ್ಟೋರಿಯಲ್ಲ.. ಸಂಸಾರ ಬಿರುಕು..

Publicspot

ಮರ್ಯಾದೆಗಾಗಿ ಮಗಳಿಗೇ ವಿಷ ಉಣಿಸಿದ ಹೆತ್ತವರು.. ಅರೆಸ್ಟ್​..

Publicspot

ATM Vehicle Looted : ಹಾಡಹಗಲೇ ATM ವಾಹನದಲ್ಲಿ 7 ಕೋಟಿ ರಾಬರಿ

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

Insta Love: ಏಕಾಂತದ ಸರಸಕ್ಕೆ ಅಡ್ಡಿ ಅಂತಾ ಮಲ-ಮಗಳನ್ನೇ ಕೊಂದ ತಂದೆ ಅರೆಸ್ಟ್‌!

Publicspot