The Public Spot
ರಾಜ್ಯ

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

ಕರ್ನಾಟಕ ರಾಜ್ಯ ಸರ್ಕಾರ ಕೊನೆಗೂ ಕಾನೂನು ಹೋರಾಟ ಕೈಬಿಟ್ಟು SSLC ಫಲಿತಾಂಶ ಪ್ರಕಟ ಮಾಡುವ ನಿರ್ಧಾರ ಮಾಡಿದೆ. ತೃತೀಯ ಭಾಷೆ ಪತ್ರಿಕೆಗೆ ಅಂಕಗಳನ್ನು ನೀಡುವ ಬದಲು ಗ್ರೇಡ್‌ ನೀಡಲು ರಾಜ್ಯ ಸರ್ಕಾರ ನ ನಿರ್ಧಾರ ಮಾಡಿತ್ತು. ಆದರೆ ಪರೀಕ್ಷಾ ಅಧಿಸೂಚನೆ 2025ರ ಅಕ್ಟೋಬರ್‌ನಲ್ಲೇ ಹೊರಡಿಸಿದ್ದು, ಪರೀಕ್ಷೆ ಮಧ್ಯದಲ್ಲಿ ಮಾಡಿದ ಬದಲಾವಣೆಗೆ ಹೈಕೋರ್ಟ್‌ ಸಮ್ಮತಿ ಸೂಚಿಸಿರಲಿಲ್ಲ. ಹೀಗಾಗಿ ಕರ್ನಾಟಕ ಹೈಕೋರ್ಟ್‌, ನಿಮ್ಮ ಬದಲಾವಣೆ ಏನೇ ಇದ್ದರೂ ಮುಂದಿನ ವರ್ಷದಿಂದ ಜಾರಿ ಮಾಡಿ ಎಂದು ಸೂಚನೆ ಕೊಟ್ಟಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗಬೇಕಾ..? ಅಥವಾ SSLC ಪರೀಕ್ಷೆ ಫಲಿತಾಂಶ ಪ್ರಕಟ ಮಾಡಬೇಕಾ..? ಅನ್ನೋ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇಂದು ಸಿಎಂ ಸಿದ್ದರಾಮಯ್ಯ ಜೊತೆಗೆ ಶಿಕ್ಷಣ ಸಚಿವ ಮಧು ಎಸ್‌ ಬಂಗಾರಪ್ಪ ಸಭೆ ನಡೆಸಿದ್ರು. ಸಭೆಯಲ್ಲಿ ಸಿಎಂ ಕಾನೂನು ಸಲಹೆಗಾರ A.S ಪೊನ್ನಣ್ಣ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹೈಕೋರ್ಟ್‌ ಆದೇಶ ಪ್ರಶ್ನಿಸಿದರೂ ಆದೇಶ ಬದಲಾಗುವ ಸ್ಥಿತಿಯಿಲ್ಲ ಅನ್ನೋದನ್ನು ಸಭೆಗೆ ಅರಿವು ಮೂಡಿಸಲಾಯ್ತು.

ಹೀಗಾಗಿ ನಾಳೆ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಶಿಕ್ಷಣ ಸಚಿವ ಮಧು ಎಸ್‌ ಬಂಗಾರಪ್ಪ ಮಾತನಾಡಿ, ಈ ಬಾರಿ ಕೋರ್ಟ್ ಆದೇಶ ಪಾಲನೆ ಮಾಡ್ತೀವಿ. ಗ್ರೇಸ್ ಕೊಡ್ತೀವಾ ಇಲ್ಲವಾ ಅಂತ ನಾಳೆ ಹೇಳ್ತೀವಿ. ಅಂಕಗಳನ್ನು ಕೊಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಾಳೆ ಫಲಿತಾಂಶದಲ್ಲಿ ಎಲ್ಲವನ್ನು ಹೇಳ್ತೀವಿ. ಈ ವರ್ಷ ಕೋರ್ಟ್ ಆದೇಶ ಪಾಲನೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯ್ತು ಎಂದಿದ್ದಾರೆ.

2025 -26ನೇ ಸಾಲಿನಲ್ಲಿ SSLC ಪರೀಕ್ಷೆಗೆ ವಿದ್ಯಾರ್ಥಿಗಳು 8 ಲಕ್ಷದ 65 ಸಾವಿರದ 988 ವಿದ್ಯಾರ್ಥಿಗಳು ಪರೀಕ್ಷೆಗೆ ‌ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಬಾಲಕರು 4 ಲಕ್ಷದ 44 ಸಾವಿರದ 172 ಜನ ಹಾಗೂ ಬಾಲಕಿಯರು 4 ಲಕ್ಷದ 21 ಸಾವಿರದ 816 ನೋಂದಾಯಿಸಿಕೊಂಡಿದ್ದರು. ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದೀಗ ನಿಗದಿಯಾಗಿದ್ದ ದಿನಾಂಕಕ್ಕೂ ಮೊದಲೇ ಫಲಿತಾಂಶ ಪ್ರಕಟ ಮಾಡಲು ನಿರ್ಧಾರ ಮಾಡಿದ್ದು, ಹಿಂದಿಗೆ ಗ್ರೇಸ್‌ ನೀಡಲು ನಿರ್ಧಾರವಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.ಈ ವೆಬ್ ಸೈಟ್ ಮೂಲಕ ಫಲಿತಾಂಶ ಪರಿಶೀಲಿಸಬಹುದು.
https://karresults.nic.in
https://www.digilocker.gov.in ಮೂಲಕ ಅಂಕಪಟ್ಟಿಗಳನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು

Related posts

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

ರಾಜ್ಯದಲ್ಲಿ ವರುಣಾರ್ಭಟ.. ಅಲ್ಲಲ್ಲಿ ಸಮಸ್ಯೆ.. ಬರ ನೀಗಿಸುತ್ತಾ ಮಳೆ..?

Publicspot

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

Publicspot

ಬೆಳೆ ಹಾನಿ ಬಗ್ಗೆ ಪರಿಶೀಲನೆಗೆ ನಾನೇ ಖುದ್ದು ಹೋಗ್ತೀನಿ.. ನೋಡ್ತೀನಿ.. ಗೌಡ್ರು..

Publicspot

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin