The Public Spot
ರಾಜ್ಯ

Farmers Protest: ರೈತರಿಗೆ ಧಿಕ್ಕಾರ ಕೂಗಲು ಅಷ್ಟೇ ಸಾಧ್ಯ.. ಏನ್​ ಮಾಡ್ತೀರಾ..?

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಕೈ ಬಿಡುವಂತೆ ರೈತರು ಪ್ರತಿಭಟನೆ ಮಾಡಿದ್ದಾರೆ. ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಭೂಸ್ವಾಧಿನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯ ಮಾಡಿದ್ದಾರೆ. ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ರೈತರು ಶಾಸಕ ಹೆಚ್.ಸಿ ಬಾಲಕೃಷ್ಗೆ ತರಾಟೆ ತೆಗೆದುಕೊಂಡಿದ್ದು, ಗುಳ್ಳೆನರಿ ಆಟ ಅಡ್ತಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ. ನಾನು ಈ ಹಿಂದೆ ವಿರೋಧ ಮಾಡಿದ್ದೆ. ಆಗ ರೈತರು ಸಪೋರ್ಟ್ ಮಾಡಲಿಲ್ಲ ಎಂದಿದ್ದಾರೆ ಬಾಲಕೃಷ್ಣ. ಈ ಹಿನ್ನೆಲೆ ಶಾಸಕ ಬಾಲಕೃಷ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ರೈತರಿಗೆ ಡಿಕೆಶಿ ಎಚ್ಚರಿಕೆ..!

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನೆಗೆ ರೈತರು ವಿರೋಧ ಮಾಡ್ತಿರುವ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​, ರೈತರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಜೊತೆಗೆ ಕೆಲಕಾಲ ಮಾತನಾಡಿದ ಬಳಿಕ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಶಾಸಕನಿಗೆ ಅವಮಾನ ಮಾಡಿದ್ರೆ ಹೇಗೆ..? ನಿಮ್ಮಿಂದ ಧಿಕ್ಕಾರ ಕೂಗಲು ಮಾತ್ರ ಸಾಧ್ಯ. ಏನ್ ಮಾಡ್ತೀರಾ ಮಾಡ್ಕೊಳ್ಳಿ. ಕಾನೂನಿನಲ್ಲಿ ಏನ್ ಸಹಾಯ ಮಾಡಬೇಕೋ ಮಾಡ್ತೇನೆ. ಅದನ್ನ ಬಿಟ್ಟು ಕೂಗಾಡಿದರೆ ಏನು ಆಗಲ್ಲ. ಯಾವನ್ ಬಂದಿದ್ದ ನಿಮ್ಮ ಪರ ಎಂದು ಗರಂ ಆಗಿದ್ದಾರೆ.

BJP-JDS ಮಾಡಬಹುದಿತ್ತು.. ಮಾಡಿಲ್ಲ..

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಲೋಗೋ ಅನಾವರಣ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​, ಇಂಟಿಗ್ರೇಟೆಡ್ ಟೌನ್​ಶಿಪನ್ನು ಕುಮಾರಸ್ವಾಮಿ ಅವರು ಸಿಎಂ ಆದಾಗ ಪೈಲೆಟ್ ಪ್ರಾಜೆಕ್ಟ್​ಗಾಗಿ ಮಾಡಿದ್ರು. ಇದೀಗ ಈ ಯೋಜನೆಗೆ 25 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರ ಇದನ್ನ ರಿಜೆಕ್ಟ್ ಮಾಡಬಹುದಿತ್ತು. ಇದನ್ನು ನಾವು‌ ಡಿನೋಟಿಫಿಕೇಷನ್ ಮಾಡಲು ಆಗೋದಿಲ್ಲ. ಡಿನೋಟಿಫಿಕೇಷನ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿ ಹೊಸ ಉದ್ಯೋಗ ಸೃಷ್ಠಿಸಲು ಮುಂದಾಗಿದ್ದೇವೆ. ಇಲ್ಲಿಗೆ ನಮ್ಮ ‌ಮೆಟ್ರೋ ತರಲು ಕೂಡ ಪ್ಲ್ಯಾನ್ ಮಾಡುತ್ತಿದ್ದೇವೆ ಎಂದಿದ್ದಾರೆ.

ಹಳ್ಳಿಗಳಿಗೆ ತೊಂದರೆ ಮಾಡಲ್ಲ – ಡಿಕೆಶಿ

ಬೈರಮಂಗಲ ಕೆರೆಯನ್ನ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಹಳ್ಳಿಗಳಿಗೆ ತೊಂದರೆ ಕೊಡಲ್ಲ, ನಗರದ ರೀತಿಯಲ್ಲಿ 26 ಹಳ್ಳಿಗಳನ್ನ ಅಭಿವೃದ್ಧಿ ಮಾಡುತ್ತೇವೆ. ಯೋಜನೆಗಾಗಿ ಹಳ್ಳಿಗಳನ್ನ ಶಿಫ್ಟ್ ಮಾಡಲ್ಲ. ಜಮೀನು ಸ್ವಾಧೀನ ಆದ ರೈತರಿಗೆ ಹಣ ಪಡೆಯದೇ ಇದ್ದರೇ 50 : 50 ಅನುಪಾದಲ್ಲಿ ಸೈಟ್​ಗಳನ್ನು ನೀಡುತ್ತೇವೆ. ಇದೊಂದು ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಈ ಯೋಜನೆಗಾಗಿ 300 ಮೀಟರ್ ಬ್ಯುಸಿನೆಸ್ ಕಾರಿಡಾರ್ ಮಾಡುತ್ತೇವೆ. ಇದಕ್ಕಾಗಿ ಕೂಡ ಭೂಸ್ವಾಧೀನ ಮಾಡುತ್ತೇವೆ. ಭೂಸ್ವಾಧೀನಕ್ಕಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಮನವಿ ಮಾಡಿದ್ದಾರೆ. ಅವರಿಗೆ ಅಭಿನಂದನ ಸಲ್ಲಿಸುತ್ತೇನೆ. 10 ಸಾವಿರ ಕೋಟಿ ಭೂಸ್ವಾಧೀನ, 15 ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡ್ತೇವೆ ಎಂದಿದ್ದಾರೆ.

Related posts

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಏನೆಲ್ಲಾ ಬದಲಾವಣೆ..?

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

Publicspot

RSS ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾ..? ಬಿಜೆಪಿ ಕೆಂಡಾಮಂಡಲ ಆಗ್ತಿರೋದ್ಯಾಕೆ..?

Publicspot

No Namma Metro, Basava Metro; ನಮ್ಮ ಮೆಟ್ರೋ ಬದಲಿಸ್ತೇನೆ.. ಲಿಂಗಾಯತ ಸಮಾವೇಶದಲ್ಲಿ ಸಿಎಂ ದಾಳ..

Publicspot

ವಕೀಲರಿಗೆ ಸಿಹಿ ಸುದ್ದಿ.. ಬಾರ್​ ಕೌನ್ಸಿಲ್​ನಲ್ಲಿ ಎನ್​ರೋಲ್​ ಆದ ವಕೀಲರಿಗೆ ನಿರ್ಬಂಧವಿಲ್ಲ..!

Publicspot