The Public Spot
Uncategorizedರಾಜಕೀಯ

ಡಿಕೆ ಬ್ರದರ್ಸ್​ ಒತ್ತಡಕ್ಕೆ ಹೈಕಮಾಂಡ್​​ ಮಣಿದರೆ ಉಳಿಯುತ್ತಾ ಸರ್ಕಾರ..?

ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಆಗುವ ದಿನಗಳು ಸನಿಹಕ್ಕೆ ಬರುತ್ತಿವೆ. ಎರಡೂವರೆ ವರ್ಷ ಎಂದು ಒಪ್ಪಂದ ಆಗಿದೆ ಎನ್ನುವುದು ಡಿಸಿಎಂ ಡಿ.ಕೆ ಶಿವಕುಮಾರ್​ ಬಣದ ವಾದ. ಆ ವಾದವನ್ನು ಅಲ್ಲಗಳೆಯದ ಸಿದ್ದರಾಮಯ್ಯ ಆಪ್ತ ಬಣ ಏನಿದ್ದರೂ ಹೈಕಮಾಂಡ್​ ಜೊತೆಗೆ ಆಗಿರುವುದು. ನಾವು ಹೈಕಮಾಂಡ್​ ಹೇಳಿದಂತೆ ನಡೆದುಕೊಳ್ತೇವೆ ಎನ್ನುತ್ತಲೇ ಹೈಕಮಾಂಡ್​ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್​ ಹೈಕಮಾಂಡ್​ ನಾಯಕರಿಗೆ ಮನವರಿಕೆ ಮಾಡಿ ಬಂದಿದ್ದರು. ತಕ್ಷಣವೇ ದೆಹಲಿಗೆ ಹೊರಟ ಸತೀಶ್​ ಜಾರಕಿಹೊಳಿ, ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್​ ಹಾಗೂ ಡಿ.ಕೆ ಸುರೇಶ್​ ದೆಹಲಿ ಭೇಟಿ ಬೆನ್ನಲ್ಲೇ ದೆಹಲಿಯಲ್ಲಿ ಅಹಿಂದ ಸಚಿವರ ತಂಡ ಬೀಡು ಬಿಟ್ಟಿದೆ. ಅಹಿಂದ ಸಚಿವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಮೇ ತಿಂಗಳಲ್ಲಿ ನಡೆಯಬಹುದಾದ ಬೆಳವಣಿಗೆಗಳಿಗೆ ಮದ್ದು ಅರೆಯುವ ಕಸರತ್ತು ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರುವ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಾ. ಹೆಚ್. ಸಿ ಮಹದೇವಪ್ಪ ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬದಲಿಸಿ, ಸತೀಶ್ ಜಾರಕಿಹೊಳಿಗೆ ನೀಡುವಂತೆ ಒತ್ತಾಯ ಮುಂದಿಟ್ಟಿದ್ದಾರೆ. ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಅನ್ನೋ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ನಾಯಕತ್ವದ ಗೊಂದಲದಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಈಗಲೇ ಇದನ್ನು ಸರಿಪಡಿಸದಿದ್ದರೆ ಮುಂದೆ ಇನ್ನಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದಿರುವ ನಾಯಕರು, ಸಿಎಂ ಬದಲಾವಣೆ ಇದೆಯೋ..? ಇಲ್ಲವೋ..? ಎಂಬುದನ್ನು ಈಗಲೇ ಸ್ಪಷ್ಟಪಡಿಸುವುದು ಒಳ್ಳೆಯದು. ಬದಲಾವಣೆ ಇದೆ ಎನ್ನುವುದೇ ಆದರೆ ಅಹಿಂದ ನಾಯಕರ ಸ್ಥಾನಮಾನದ ಬಗ್ಗೆ ಸ್ಪಷ್ಟತೆ ನೀಡಿ. ಅಹಿಂದ ವರ್ಗವನ್ನು ಬಿಟ್ಟು ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಹಿರಿಯ ನಾಯಕರ ಹುದ್ದೆ, ಜವಾಬ್ದಾರಿ ಬಗ್ಗೆಯೂ ಈಗಲೇ ನಿರ್ಣಯಗಳಾಗಲಿ ಎಂದು ಹೈಕಮಾಂಡ್ ನಾಯಕರಿಗೆ ಸತೀಶ್ ಜಾರಕಿಹೊಳಿ, ಮಹದೇವಪ್ಪ ಒತ್ತಾಯ ಮಾಡಿದ್ದಾರೆ.

ಮುಸ್ಲಿಂ ಸಮುದಾಯದ ಮುನಿಸು ಬೇಸರದ ಬಗ್ಗೆಯೂ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿರುವ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ರಾಜ್ಯದಲ್ಲಿ ಅಹಿಂದ ಸಮಾವೇಶ ಆಯೋಜನೆ ಬಗ್ಗೆಯೂ ಚರ್ಚೆ ಆಗಿದೆ. ಅಹಿಂದ ಹೋರಾಟಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಮಾವೇಶಗಳನ್ನು ಆಯೋಜಿಸುತ್ತಿದ್ದೇವೆ. ಈ ಮೂಲಕ ಯುವ ಸಮುದಾಯಕ್ಕೆ ಅಹಿಂದ ಹೋರಾಟ ಹಾಗೂ ಚಳವಳಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ರಾಜಕೀಯ ಶಕ್ತಿಯಾಗಿದ್ದ ಅಹಿಂದ ಅಸ್ತ್ರ ಬಳಕೆ ಮಾಡಲು ಸಿದ್ದರಾಮಯ್ಯ ಬಣ ಮುಂದಾಗಿದೆ ಅನ್ನೋದನ್ನು ಪರೋಕ್ಷವಾಗಿ ಹೈಕಮಾಂಡ್​ಗೆ ತಿಳಿಸುವ ಮೂಲಕ ಕುರ್ಚಿಗೆ ಕೈ ಹಾಕಿದ್ರೆ ಹುಷಾರ್​ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ.

Related posts

ಇರಾನ್​ಗೆ ವಾರ್ನಿಂಗ್​ ಮೇಲೆ ವಾರ್ನಿಂಗ್​ ಕೊಡ್ತಿರೋದ್ಯಾಕೆ ಅಮೆರಿಕ..?

Publicspot

Cough syrup Death; ಪೋಷಕರೇ ಮಕ್ಕಳಿಗೆ ಕೆಮ್ಮು ಔಷಧಿ ಬಳಸಬೆಡಿ.. ಸಾವು ಸಂಭವಿಸುತ್ತೆ..

Publicspot

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Publicspot

Modi Meeting; ಕಾರು ಸ್ಫೋಟ.. ಇವತ್ತು ಮೋದಿ ಸಭೆ.. ವಿಪಕ್ಷಗಳಿಗೆ ಉತ್ತರ..

Publicspot

ಪರಿಷತ್‌ ಫೈಟ್‌ನಲ್ಲಿ ಸಿಎಂ ಜೊತೆಗೆ ಕುಮಾರಸ್ವಾಮಿ ಜಿದ್ದಾಜಿದ್ದಿ ಫೈಟ್‌.. ಗೆಲ್ಲೋದ್ಯಾರು..?

Publicspot

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

Publicspot