The Public Spot
ದೇಶ-ವಿದೇಶರಾಜಕೀಯ

ಕೇರಳಂಗೆ ಕೊನೆಗೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಯ್ಕೆ.. KCV ಗೆ ಹಿನ್ನಡೆ

ಕೇರಳಂನ ಸಿಎಂ ಆಗಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಮೇ 18 ರಂದು ಕೇರಳಂನ ಸಿಎಂ ಆಗಿ ವಿ.ಡಿ ಸತೀಶನ್​ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಎಂ ಆಯ್ಕೆ ಸಂಬಂಧ ಕಳೆದ 10 ದಿನಗಳಿಂದ ನಡೆದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿದ್ದ ವಿ.ಡಿ ಸತೀಶನ್‌​ ಅವರು ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಮೇ 18 ರಂದು ತಿರುವನಂತಪುರಂನ ಸೆಂಟ್ರಲ್​ ಸ್ಟೇಡಿಯಂನಲ್ಲಿ ಬೆಳಗ್ಗೆ 10 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಕೇರಳಂನ ಸಿಎಂ ಆಗಿ ವಿ.ಡಿ ಸತೀಶನ್ ಅವ​ರನ್ನ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ ಬೆನ್ನಲ್ಲೇ ನಿಯೋಜಿತ ಸಿಎಂ ವಿ.ಡಿ. ಸತೀಶನ್ ರಾಜ್ಯಪಾಲರನ್ನ ಭೇಟಿ ಮಾಡಿದ್ದಾರೆ. ಲೋಕಭವನಕ್ಕೆ ಭೇಟಿ ನೀಡಿದ್ದ ವಿ.ಡಿ ಸತೀಶನ್‌, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಕಾರ್ಯಕ್ರಮದಲ್ಲಿ ಯಾರೆಲ್ಲಾ ಹಾಜರಿ ಇರ್ತಾರೆ ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಕೇರಳಂನ ಮುಖ್ಯಮಂತ್ರಿ ಆಗಿ ವಿ.ಡಿ ಸತೀಶನ್ ಅವ​ರನ್ನ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ ಬೆನ್ನಲ್ಲೇ ಕಂಟೋನ್ಮೆಂಟ್​ ಹೌಸ್​ಗೆ ಆಗಮಿಸಿದ ನಿಯೋಜಿತ ಸಿಎಂ ಅವರನ್ನು ಪೊಲೀಸರು ಸ್ವಾಗತ ಮಾಡಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ ರವಾಡ ಆಜಾದ್ ಚಂದ್ರಶೇಖರ್ ಹಾಗೂ ಎಡಿಜಿಪಿ ಹೆಚ್ ವೆಂಕಟೇಶ್ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ವಾಗತ ಮಾಡಿದ್ದಾರೆ. ಕೇರಳಂ ಸಿಎಂ ಆಗಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ ಬೆನ್ನಲ್ಲೇ ಸಿಪಿಎಂ ಕೂಡಾ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದೆ.

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್​ ಅವರನ್ನ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ ನಡೆದ ಸಿಪಿಎಂ ರಾಜ್ಯ ಸಮಿತಿ ಸಭೆಯುಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೆ.ಸಿ ವೇಣುಗೋಪಾಲ್‌ ಅವರು ಸಿಎಂ ಆಗುವ ಕಸರತ್ತು ಮಾಡಿದ್ದರು. ಕಾಂಗ್ರೆಸ್‌ ಹೈಕಮಾಂಡ್‌ನ ಮನವೊಲಿಸಿದ್ದ ವೇಣುಗೋಪಾಲ್‌ ಸಿಎಂ ಆಗುವ ಕಿನಸು ಕಂಡಿದ್ದರು. ಆದರೆ ವಿ.ಡಿ ಸತೀಶನ್‌ ಮಾತ್ರ ಮುಖ್ಯಮಂತ್ರಿ ಆಗಲೇಬೇಕು. ಇಲ್ಲದಿದ್ರೆ ನಾನು ಸರ್ಕಾರದ ಭಾಗವಾಗಲು ಇಚ್ಚಿಸುವುದಿಲ್ಲ. ನಾನು ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ ಎನ್ನುವ ಸಂದೇಶ ರವಾನಿಸಿದ್ದರು.

ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡುವುದರ ಜೊತೆಗೆ ಪಕ್ಷದಲ್ಲಿ ಎರಡು ಶಕ್ತಿ ಕೇಂದ್ರಗಳು ಸೃಷ್ಟಿಯಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಅರಿತ ಕಾಂಗ್ರೆಸ್‌‌ ಹೈಕಮಾಂಡ್‌ ವೇಣುಗೋಪಾಲ್‌ ಅವರನ್ನು ಆಡಳಿತದಿಂದ ದೂರ ಇಡುವ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ವೇಣುಗೋಪಾಲ್‌ ಅವರನ್ನು ಸರ್ಕಾರದ ಭಾಗವಾಗಿಸ್ತಾರಾ..? ಅಥವಾ ಹೈಕಮಾಂಡ್‌ ಮಟ್ಟದಲ್ಲೇ ಉಳಿದುಕೊಂಡು ಪಕ್ಷದ ಕಾರ್ಯ ನಿರ್ವಹಣೆ ಮಾಡ್ತಾರಾ..? ಅನ್ನೋದನ್ನು ಕಾದು ನೋಡ್ಬೇಕು. ಸದ್ಯಕ್ಕಂತು ಕೆ.ಸಿ ವೇಣುಗೋಪಾಲ್‌ಗೆ ಭಾರೀ ಹಿನ್ನಡೆ ಎಂದೇ ಹೇಳಬಹುದು.

Related posts

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot

D.K Shivakumar Mistake: ಸದನವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್​.. ಸಂವಿಧಾನಕ್ಕೂ ಗೌರವ ಇಲ್ಲವೇ..?

Publicspot

ಅಮೆರಿಕ ಬೆನ್ನುಮೂಳೆ ಮುರಿದ ಇರಾನ್​.. F-35 ಫೈಟರ್​ ಜೆಟ್​ ಫಿನಿಷ್​​..!!

Publicspot

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

Publicspot