ಕನ್ನಡಿಗರ ವಿರೋಧದ ನಡುವೆ ಹಿಂದಿ ದಿವಸ್ ಆಚರಣೆ, ಜನರ ಆಕ್ರೋಶ

ಹಿಂದಿ ದಿವಸ್​ ಆಚರಣೆಗೆ ಜೆಡಿಎಸ್​ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ವ್ಯಕ್ತ ಮಾಡಿದ್ದಾರೆ. ಹಿಂದಿ ದಿವಸ್​ ಆಚರಣೆಯನ್ನು ಕೈ ಬಿಡುವಂತೆ ಎರಡ್ಮೂರು ದಿನಗಳ ಹಿಂದೆಯೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು,. ಆದರೂ ಹಿಂದಿ ದಿವಸ್​ ಆಚರಣೆ ನಿಲ್ಲಲಿಲ್ಲ. ಇದನ್ನು ವಿರೋಧಿಸಿದ ಜೆಡಿಎಸ್​ ಪಕ್ಷ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಹೋರಾಟ ಮಾಡಿದೆ. ತೋಳಿಗೆ ಕಪ್ಪು ಪಟ್ಟಿ ಧರಿಸಿ ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದೆ. ಆದರೆ ಕಾಂಗ್ರೆಸ್​ ಹಾಗು ಬಿಜೆಪಿ ಈ ಬಗ್ಗೆ ದನಿ […]

ಬಸ್​ ನಿಲ್ದಾಣ ಉದ್ಘಾಟನೆಗೆ ಎಮ್ಮೆಲ್ಲೆ (MLA) ಬರಲಿಲ್ಲ, ಎಮ್ಮೆ ಕರೆತಂದ ರೈತರು..!

ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಸ್​ ನಿಲ್ದಾಣ ಉದ್ಘಾಟನೆಗೆ ಶಾಸಕರು ಬರಲಿಲ್ಲ ಅಂತಾ ಆಕ್ರೋಶಗೊಂಡ ರೈತ ಸಮುದಾಯ ತಾವು ಹಾಲಿಗಾಗಿ ಸಾಕಿದ್ದ ಎಮ್ಮೆಯನ್ನು ಕರೆತಂದು ಟೆಪ್​ ಕತ್ತರಿಸಿ, ಶಾಸಕರಿಗೆ ತಿರುಗೇಟು ನೀಡಿದ್ದಾರೆ. ಆದರೆ ಶಾಸಕರು, ಸಂಸದರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಉದ್ಘಾಟನೆ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಗದಗ ಜನಪ್ರತಿನಿಧಿಗಳಿಗೆ ಏನಾಗಿದೆ ಎಂದು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರ ‘ಇದು ಅಸಲಿ ಬಸ್​ ನಿಲ್ದಾಣ’ ಅಲ್ಲ. 10 ವರ್ಷದಿಂದ ಮನವಿ ಕೊಟ್ರೂ […]

ರಾಜಸ್ಥಾನದಲ್ಲಿ ಕೊಲೆಯಾದ ಕನ್ಹಯ್ಯ ಲಾಲ್​ ಕುಟುಂಬಸ್ಥರ ಕೊನೆ ಆಸೆ ಏನು..?

ರಾಜ್ಯಸ್ಥಾನದಲ್ಲಿ 47 ವರ್ಷದ ಟೈಲರ್​ ಕನ್ಹಯ್ಯ ಲಾಲ್​ನನ್ನು ಕೊಲೆ ಮಾಡಿದ ಬಳಿಕ ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್​ ಹಾಗು ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ವಕ್ತಾರೆ ಆಗಿದ್ದ ನೂಪುರ್​ ಶರ್ಮಾ ಹೇಳಿಕೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೆ ಕುರ್ತಾಗೆ ಅಳತೆ ಕೊಡುವ ನೆಪದಲ್ಲಿ ಬಂದ ಇಬ್ಬರು ಮುಸಲ್ಮಾನ್​ ಸಮುದಾಯಕ್ಕೆ ಸೇರಿದ ಮೊಹಮದ್​ ರಿಯಾಜ್​ ಅಖ್ತಾರಿ ಹಾಗು ಗೌಸ್ ಮೊಹಮದ್ ಎಂಬುವರು ಕತ್ತು ಕೊಯ್ದು ಕೊಲೆ ಮಾಡಿದ್ದರು. ಅಂತಿಮ ಶವಯಾತ್ರೆ ಬಳಿಕ […]

ರಾಜಸ್ಥಾನದಲ್ಲಿ ಹಿಂದೂ ಸಮುದಾಯದ ವ್ಯಕ್ತಿ ಹತ್ಯೆಗೆ ನಿಖರ ಕಾರಣ ಏನು..!?

ರಾಜಸ್ಥಾನದ ಉದಯ್​ಪುರದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಕನ್ಹಯ್ಯ ಕುಮಾರ್​ ಎಂಬಾತನನ್ನು ಹಾಡಹಗಲೇ ಕೊಲೆ ಮಾಡಲಾಗಿದೆ. ಟೈಲರ್​ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ಕುತ್ತಿಗೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಟ್ಟೆ ಹೊಲಿಸುವ ನೆಪದಲ್ಲಿ ಅಂಗಡಿ ಒಳಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಸಮಯ ನೋಡಿ ದಾಳಿ ಮಾಡಿ ಕುತ್ತಿಗೆಯನ್ನು ಕತ್ತರಿಸಿ ಅಟ್ಟಹಾಸ ಮೆರೆದಿದ್ದಾರೆ. ಗೌಸ್ ಮೊಹಮ್ಮದ್ ರಿಯಾಜ್​​, ಮೊಹಮ್ಮದ್​ ಅನ್ಸಾರಿ ಎಂಬ ಕಟುಕರು ಕೊಲೆ ಮಾಡಿ ಬೆದರಿಕೆಯನ್ನೂ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನೂಪುರ್​ ಶರ್ಮಾರನ್ನು […]

Hubli Muslim: ಕರ್ನಾಟಕದಲ್ಲಿ ಧರ್ಮ ಸಂಘರ್ಷ.. ಮುಸಲ್ಮಾನರ ರಾತ್ರಿ ರಹಸ್ಯ..!!

ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳು ಮುಸ್ಲಿಂ ಸಮುದಾಯದ ವಿರುದ್ಧ ಒಂದೊಂದೇ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಘಟನೆಗಳು. ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ತಾಲೀಮು ಎಂದು ಬಣ್ಣಿಸಲಾಗ್ತಿದೆ. ಈ ಎಲ್ಲಾ ಬೆಳವಣಿಗೆ ಹಿಂದೆ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಬೆಂಬಲ ಇದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿಪಕ್ಷಗಳ ಮಾತಿಗೆ ಅನುಗುಣವಾಗಿ ಆಡಳಿತದಲ್ಲಿರುವ ನಾಯಕರು ನೀಡುತ್ತಿರುವ ಹೇಳಿಕೆಗೆಗಳು ಹೌದು ಎನ್ನುವಂತಿವೆ. ಧರ್ಮ ಸಂಘರ್ಷದಿಂದ ಲಾಭ ಮಾಡಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇನ್ನೂ […]

Its Murder; ಸಂತೋಷ್ ಪಾಟೀಲ್‌ರದ್ದು ಆತ್ಮಹತ್ಯೆ ಅಲ್ಲ.. ಕೊಲೆ.. ಹೆಂಡತಿ ಸ್ಫೋಟಕ ಹೇಳಿಕೆ..

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 4 ಕೋಟಿ ವೆಚ್ಚದ ಕಾಮಗಾರಿ ಮಾಡಿಸಿ, ವರ್ಕ್ ಆರ್ಡರ್ ಬಿಡುಗಡೆ ಆಗದೆ, ಸಚಿವ ಈಶ್ವರಪ್ಪ ವಿರುದ್ಧ ಶೇಕಡಾ 40 Percent ಕಮಿಷನ್‌ ಪಡೆಯುತ್ತಿದ್ದಾರೆ. ವರ್ಕ್ ಆರ್ಡರ್ ರಿಲೀಸ್ ಮಾಡದೆ ಸಾಕಷ್ಟು ಹಿಂಸೆ ಕೊಡಲಾಗ್ತಿದೆ‌ ಎಂದು ಸಂತೋಷ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕಾರ್ಯಕರ್ತನಾಗಿದ್ದ ಸಂತೋಷ್ ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಅದರಲ್ಲೂ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ನೇರವಾಗಿಯೇ ಆರೋಪ ಮಾಡಿದ್ದರು. ಆದರೆ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ‌. ಮೊದಲಿಗೆ […]

Santhosh Death secret; ಈಶ್ವರಪ್ಪನ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆ..! ಆರೋಪ ಎಷ್ಟು ಸತ್ಯ..?

ಸಚಿವ ಈಶ್ವರಪ್ಪ ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮಿಷನ್​​ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯ ಲಾಡ್ಜ್​​ನಲ್ಲಿ ಸ್ನೇಹಿತರ ಜೊತೆಗೆ ಉಳಿದುಕೊಂಡಿದ್ದ ಸಂತೋಷ್​ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಿವೈಎಸ್‌ಪಿ ಸುಧಾಕರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಂತೋಷ್ ಜೊತೆಯಲ್ಲಿ ಉಳಿದುಕೊಂಡಿದ್ದ ಇಬ್ಬರು ಸ್ನೇಹಿತರು, ಪಕ್ಕದ ಕೊಠಡಿಯಲ್ಲೇ ಇದ್ದರು ಎನ್ನಲಾಗಿದೆ. ಪ್ರವಾಸಕ್ಕೆ ಎಂದು ಉಡುಪಿ ಕಡೆಗೆ ಬಂದಿದ್ದ ಸಂತೋಷ್​ ಪಾಟೀಲ್​ ಕುಟುಂಬಸ್ಥರಿಗೆ ಸಾವಿನ ಬಗ್ಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ನನ್ನ ಸಾವಿಗೆ ಕೆ.ಎಸ್​ ಈಶ್ವರಪ್ಪ […]

ರೈತರ ಒಗ್ಗಟ್ಟಿನ ಹೋರಾಟಕ್ಕೆ ಮಂಡಿಯೂರಿದ ಮೋದಿ ಸರ್ಕಾರ..! ಕಾರಣ ಇಲ್ಲಿದೆ..

ಕೇಂದ್ರ ಸರ್ಕಾರ ಜಾರಿ‌ ಮಾಡಲು ಮುಂದಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದೆ. ದೆಹಲಿ ಗಡಿಯಲ್ಲಿ 11 ತಿಂಗಳ ನಿರಂತರ ಹೋರಾಟ ಮಾಡಿದ್ದ ರೈತ ಸಮುದಾಯದ ಒಗ್ಗಟ್ಟಿನ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ. ಆದರೆ ಮಳೆ, ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಟ‌ ನಡೆಸುತ್ತಿದ್ದ ಸುಮಾರು 700 ಮಂದಿ ರೈತರ ಪ್ರಾಣಾರ್ಪಣೆ ಮಾಡಿದ್ದಾರೆ ಎನ್ನುವುದು ದುಃಖಕರ ಸಂಗತಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ತಪ್ಪನ್ನು ಮೊದಲೇ […]

ಪ್ರತಿಭಟನೆ ವೇಳೆ ಕಾರು ಹತ್ತಿಸಿ 4 ರೈತರ ಹತ್ಯೆ, ಹಿಂಸಾಚಾರದಲ್ಲಿ ಮತ್ತೆ 4 ಸಾವು..

ದೆಹಲಿಯಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ರೂ ಕೇಂದ್ರ ಸರ್ಕಾರ ಮಣಿದಿಲ್ಲ. ಆದರೆ ಉತ್ತರ ಪ್ರದೇಶದ ಲಖಿಮ್ ಪುರದಲ್ಲಿ ಭಾರತೀಯ ಕಿಸಾನ್ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ಪಡೆ ರೈತರ ಮೇಲೆ ಹತ್ತಿದ ಪರಿಣಾಮ ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ರು. ಇದ್ರಿಂದ ರೊಚ್ಚಿಗೆದ್ದ ಅನ್ನದಾತರು ಎರಡು ಎಸ್​ಯುವಿ ಕಾರುಗಳಿಗೆ ಬೆಂಕಿ ಹಚ್ಚಿದ್ರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಅಸುನೀಗಿದ್ದಾರೆ. […]

‘ಹಿಂದಿ ದಿವಸ್’ ಆಚರಣೆಗೆ ಕರ್ನಾಟಕದ ಪ್ರತಿಕ್ರಿಯೆ ಹೇಗಿತ್ತು..?

ಭಾರತ ಹಲವು ಸಂಸ್ಕೃತಿಗಳ ಹೂರಣ. ಹಲವು ಭಾಷೆಗಳನ್ನಾಡುವ ಸಣ್ಣ ಸಣ್ಣ ಒಕ್ಕೂಟಗಳ ಗುಂಪು ಸೇರಿ ಭಾರತ ಎಂಬ ರಾಷ್ಟ್ರವಾಗಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಸೆಪ್ಟೆಂಬರ್​ 14, 1949 ರಲ್ಲಿ ಸರ್ಕಾರದ ಆಡಳಿತ ಭಾಷೆಯನ್ನಾಗಿ ಕೇಂದ್ರ ಸರ್ಕಾರ ಹಿಂದಿಯನ್ನು ಒಪ್ಪಿಕೊಂಡಿತ್ತು. 1953ರ ಸೆಪ್ಟೆಂಬರ್​ 14 ರಂದು ಹಿಂದಿ ದಿವಸ್​ ಆಚರಣೆ ಶುರು ಮಾಡಿತ್ತು. ಇತ್ತೀಚಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ಹಿಂದಿ ಭಾಷೆಯಲ್ಲೇ ಅಧಿಸೂಚನೆಗಳನ್ನು ಹೊರಡಿಸಬೇಕು ಎಂದು […]