‘ಹಿಂದೂ ಪದದ ಅರ್ಥ ಕೇಳಿದ್ರೆ ನಾಚಿಕೆ ಆಗುತ್ತದೆ’ ಮೂಲ ಕೆಣಕಿದ ಸತೀಶ್​ ಜಾರಕಿಹೊಳಿ..!

ಕಾಂಗ್ರೆಸ್​ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ಸಮಾವೇಶ ಒಂದರಲ್ಲಿ ಮಾತನಾಡಿ, ಹಿಂದೂ ಧರ್ಮ ಅಂದ್ರೆ ಏನು..? ಹಿಂದೂ ಧರ್ಮದ ಮೂಲ ಯಾವುದು..? ಹಿಂದೂ ಧರ್ಮ ಅಂದ್ರೆ ಅದರ ಅರ್ಥ ಏನು..? ಅನ್ನೋ ವಿಚಾರದಲ್ಲಿ ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಮಾತನಾಡಿರುವ ಸತೀಶ್​ ಜಾರಕಿಹೊಳಿ, ಹಿಂದೂ ಧರ್ಮ.. ಹಿಂದೂ ಶಬ್ಧ ಎಲ್ಲಿಂದ ಬಂತು..? ಹಿಂದೂ ಶಬ್ಧ ನಮ್ಮದಾ..? ಹಿಂದೂ ಅನ್ನೋದು ಪರ್ಷಿಯನ್ ಮೂಲದಿಂದ ಬಂದಿರುವ ಪದ. ಪರ್ಷಿಯನ್ ಎಲ್ಲಿದೆ..? ಇರಾನ್, ಇರಾಕ್​, ಕಜಕಿಸ್ತಾನ್, ಉಜ್ಬೇಕಿಸ್ತಾನ್​ ಮೂಲದ್ದು. ಹಿಂದೂ ಪದಕ್ಕೂ ಭಾರತಕ್ಕೂ […]

ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವಪತ್ತೆ.. ಕೊಲೆ ಆಗಿರೋ ಅನುಮಾನ..

ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತ್ರ ಕಳೆದ ನಾಲ್ಕು ದಿನಗಳಿಂದ ಅನ್ನ ಆಹಾರ ಬಿಟ್ಟು ಗೋಳಿಡುತ್ತಿದ್ದರು. ಆದರೆ ಸಾವು ಸಂಭವಿಸಿದ್ದು ಅಪಘಾತದಿಂದ ಎಂದು ಹೇಳಲಾಗ್ತಿದೆ, ಆದರೆ ಸಾವಿನ ಹಿಂದೆ ಹತ್ತಾರು ಅನುಮಾನಗಳು ಕಾಡುತ್ತಿದೆ. ಕಾರು ಅಪಘಾತ ಆಗಿದ್ರೆ, ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿ ಬಿದ್ದಿರೋದು ಯಾಕೆ..? ಕಾರಿನ ಮುಂಭಾಗದಲ್ಲಿ ಎರಡು ಏರ್​ಬ್ಯಾಗ್​ಗಳು​ ಓಪನ್​ ಆಗಿದೆ. ಅಂದಮೇಲೆ ಇಬ್ಬರು ಪ್ರಯಾಣಿಕರು ಇದ್ದಿರಬಹುದು. […]

ಗುಜರಾತ್​ನಲ್ಲಿ ಬಿಜೆಪಿಗೆ ಕೇಡುಗಾಲ ಆರಂಭ.. 90 ಜನರನ್ನು ಬಲಿ ಪಡೆದ ತೂಗು ಸೇತುವೆ..!

ಗುಜರಾತ್​ನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಒದಗಿ ಬಂದಿದೆ. ಗುಜರಾತ್​ನ ಮೊರ್​ಬಿನಲ್ಲಿ ತೂಗು ಸೇತುವೆ ಕುಸಿದು ಬಿದ್ದಿದ್ರಿಂದ ಬರೋಬ್ಬರಿ 78 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ತೂಗು ಸೇತುವೆ ನವೀಕರಣ ಕಾರ್ಯ ಮುಗಿದಿತ್ತು. 5 ದಿನಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸುಮಾರು 400 ಜನರು ನಿಂತಿದ್ದ ತೂಗು ಸೇತುವೆ ಕಳಚಿ ನದಿಗೆ ಬಿದ್ದಿದ್ರಿಂದ ಸುಮಾರು 200 ಜನರು ನಾಪತ್ತೆ ಆಗಿದ್ದಾರೆ. ಇನ್ನುಳಿದ 200 […]

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸೋಲಿಗೆ ಒಂದೊಂದೇ ಮೆಟ್ಟಿಲು..! ನಿನ್ನೆ ಭಾರೀ ಬೆಳವಣಿಗೆ..

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್​ ಕನಸು. ಇದೇ ಕಾರಣಕ್ಕೆ ಬಿಎಸ್​ ಯಡಿಯೂರಪ್ಪ ಅವರನ್ನು ಪ್ರಕ್ಷದ ಪ್ರಮುಖ ಹುದ್ದೆ ಸಂಸದೀಯ ಸ್ಥಾನಕ್ಕೂ ನೇಮಕ ಮಾಡಿತ್ತು. ಆದರೆ ಬಿಜೆಪಿಯಲ್ಲಿ ದಿನೇ ದಿನೇ ನಡೆಯುತ್ತಿರುವ ಬೆಳವಣಿಗೆ ಬಿಜೆಪಿ ಸೋಲಿಗೆ ಒಂದೊಂದೇ ಮೆಟ್ಟಿಲುಗಳು ಆಗುತ್ತಿವೆಯಾ ಅನ್ನೋ ಅನುಮಾನವನ್ನು ಮೂಡಿಸುತ್ತಿದೆ. ಇದೀಗ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಎದುರಾಗಿರುವ ಸಂಕಷ್ಟಗಳು ಮೂರು. ಒಂದನೆಯದ್ದು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ, ಬಳ್ಳಾರಿ ಭಾಗದಲ್ಲಿ ಎಸ್​ಟಿ ಸಮುದಾಯದ ಮೀಸಲಾತಿ ಹೋರಾಟ. ಪಂಚಮಸಾಲಿ […]

ಲೋಕಾಯುಕ್ತರ ಮೊದಲ ಬೇಟೆ ಆರಂಭ.. ಮುಂದಿದೆ ಭ್ರಷ್ಟರಿಗೆ ಹಬ್ಬ..!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, ಎಸಿಬಿ ಸಂಸ್ಥೆ ಸ್ಥಾಪನೆ ಮೂಲಕ ಲೋಕಾಯುಕ್ತ ಸಂಸ್ಥೆಯ ರೆಕ್ಕೆ ಪುಕ್ಕ ಮುರಿದು ಬಲಹೀನ ಸಂಸ್ಥೆಯನ್ನಾಗಿ ಮಾಡಿತ್ತು. ಇದೀಗ ರಾಜ್ಯ ಹೈಕೋರ್ಟ್​ ಎಸಿಬಿ ಸಂಸ್ಥೆ ರಚನೆಯನ್ನೇ ರದ್ದು ಮಾಡಿದ್ದು ಲೋಕಾಯುಕ್ತ ಸಂಸ್ಥೆಗೆ ಶಕ್ತಿವರ್ಧಕ ಕೊಟ್ಟಂತಾಗಿತ್ತು. ಅದೂ ಅಲ್ಲದೆ ಎಸಿಬಿಯನ್ನೇ ಲೋಕಾಯುಕ್ತ ಸಂಸ್ಥೆ ಜೊತೆಗೆ ಸೇರ್ಪಡೆ ಮಾಡಿದ್ದು ಮತ್ತಷ್ಟು ಶಕ್ತಿ ಬಂದಂತಾಗಿದ್ದು, ಲೋಕಾಯುಕ್ತ ಟೀಂ ಭ್ರಷ್ಟರ ಬೇಟೆ ಶುರು ಮಾಡಿದೆ. ನಿನ್ನೆ ಸಂಜೆ ಬೆಂಗಳೂರಿನ ಬಿಬಿಎಂಪಿ ಪಶ್ಚಿಮ ವಿಭಾಗ ಜಂಟಿ ಆಯುಕ್ತರ ಕಚೇರಿ ಮೇಲೆ […]

ಕರ್ನಾಟಕಕ್ಕೆ ಕಾದಿದೆ ಮಳೆಯ ಶಾಕ್​.. ಮೂರು ದಿನ ಬೀ ಕೇರ್​ ಫುಲ್​..

ಭಾನುವಾರದಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ರಾಮನಗರ ಸುತ್ತಮುತ್ತ ಭಾರೀ ಮಳೆಯಾಗುವ ಎಚ್ಚರಿಕೆ ಸಂದೇಶ ಜಿಲ್ಲಾಡಳಿತವನ್ನು ತಲುಪಿದ್ದು, ಬೆಂಗಳೂರಿನಿಂದ ರಾಮನಗರ, ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಸಂಚಾರ ಮಾಡುವ ಪ್ರಯಾಣಿಕರು ಎಚ್ಚರಿಕೆಯಿಂದ ಬದಲಿ ಮಾರ್ಗ ಬಳಸುವುದು ಸೂಕ್ತ ಎಂದು ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಬಾಬು ಮಾಹಿತಿ ನೀಡಿದ್ದಾರೆ. ಕಳೆದ ವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಆ […]

IAS ಅಧಿಕಾರಿ ರಕ್ಷಣೆಗೆ ರಾಜ್ಯ ಸರ್ಕಾರದ ಸಾಥ್​, ಅರೆಸ್ಟ್​ ಆಗಿದ್ದ ಡಿಸಿಗೆ ಡಿಫಾಲ್ಟ್​ ಬೇಲ್​..!

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ ಎನ್ನುವುದನ್ನು ಉನ್ನತ ಮಟ್ಟದ ಅಧಿಕಾರಿಯಿಂದ ಹಿಡಿದು ಜನಸಾಮಾನ್ಯರೂ ಕೂಡ ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಇತ್ತೀಚಿಗೆ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್​. ಜಿಲ್ಲಾಧಿಕಾರಿ ಕಚೇರಿಯಲ್ಲೇ ಭೂ ವ್ಯಾಜ್ಯಕ್ಕೆ ಸಂಬಂಧಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಭೂ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ತಹಶೀಲ್ದಾರ್​ ಬಂಧನ ಆಗಿತ್ತು. ಆ ಬಳಿಕ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್​ ಅವರ ಕೈವಾಡ ಇರುವುದು ಪತ್ತೆಯಾಗಿತ್ತು. ಹಾಲಿ ಜಿಲ್ಲಾಧಿಕಾರಿ […]

ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮೋದಿ ಮಾಸ್ಟರ್ ಪ್ಲ್ಯಾನ್..! ಬಿಜೆಪಿ ನಾಯಕರಿಗೆ ಹೇಳಿದ ಕಿವಿಮಾತು..

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ಮುಂದೆ ಪ್ರತೀ ತಿಂಗಳು ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರಾದೇಶಿಕವಾಗಿ ಮತ್ತು ಆಯಕಟ್ಟಿನ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಮೋದಿ ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಸಭೆಗಳಲ್ಲಿ ಈ ರೀತಿಯ ಜೋಷ್ ಇರುತ್ತದೆ. ಆದರೆ ಇಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿ ಆ ಜೋಷ್ ಕಾಣಿಸಿದೆ. ಈ ಕ್ಷಣಕ್ಕೂ ನಾನು ಹೇಳುತ್ತೇನೆ […]

ಮಕ್ಕಳ ಅತ್ಯಾಚಾರಿ ಆರೋಪಿ ರಕ್ಷಣೆಗೆ ಹೈಡ್ರಾಮಾ ಮಾಡಿದ್ಯಾರು..? ಕೋರ್ಟ್ ಹೇಳಿದ್ದೇನು..?

ಚಿತ್ರದುರ್ಗ ಮುರುಘಾ ಮಠದ ಹಿರಿಯ ಸ್ವಾಮೀಜಿ ಮಾಡಿರುವ ಅನಾಚಾರದ ಬಗ್ಗೆ ರಾಜ್ಯ ಸರ್ಕಾರ ಬರೋಬ್ಬರಿ 5 ದಿನಗಳ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುವ ನಾಟಕ ಮಾಡುತ್ತಿದೆ. ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಾಗಿದ್ದರೂ ಪೊಲೀಸರು ಬಂಧಿಸದ ಕ್ರಮವನ್ನು ಸಾಮಾಜಿಕ ಹೋರಾಟಗಾರರು ಹಾಗು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದವು. ಆ ಬಳಿಕ ಡಾ ಶಿವಾಚಾರ್ಯ ಮುರುಘಾ ಶರಣರನ್ನು ಪೊಲೀಸರು ವಾಶಕ್ಕೆ ಪಡೆಯುವ ಕೆಲ ಮಾಡಿದ್ದರು. ಆ ಬಳಿಕ ನಡೆದಿದ್ದೆಲ್ಲವೂ ಹೈಡ್ರಾಮಾ. ಆದರೆ […]

ಕ್ಲಬ್​ನಲ್ಲಿ ಮೈಮರೆತು ಕುಣಿದು ಸತ್ತಿದ್ದು ಹೇಗೆ ಬಿಜೆಪಿ ನಾಯಕಿ..? ಸಾವಿನ ಸುತ್ತ ಇಲ್ಲಿದೆ ಅನುಮಾನ..

ವೈಲ್ಡ್​ ಕಾರ್ಡ್​ ಮೂಲಕ ಹಿಂದಿ ಬಿಗ್​ಬಾಸ್​ಗೆ ಎಂಟ್ರಿ ಪಡೆದಿದ್ದ ನಟಿ ಸೊನಾಲಿ ಪೋಗಟ್, ಬಿಜೆಪಿ ಮೂಲಕ ರಾಜಕೀಯಕ್ಕೂ ಪ್ರವೇಶ ಮಾಡಿದ್ದರು. ಹರ್ಯಾಣದ ಹಿಸ್ಸಾರ್​ ಮೂಲದ ನಟಿ ಸೊನಾಲಿ ಪೊಗಟ್​ ಕಳೆದ ವೀಕೆಂಡ್​ನಲ್ಲಿ ಗೋವಾಗೆ ಬಂದು ಸಾವನ್ನಪ್ಪಿದ್ದರು. ಮೊದಲಿಗೆ ಹೋಟೆಲ್​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕುಟುಂಬಸ್ಥರು, ಹೃದಯಾಘಾತ ಅಲ್ಲ, ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆ ನಂತರ ಪೊಲೀಸರಿಗೆ ಸಿಕ್ಕಿದ್ದು ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಅಂದರೆ ತಪ್ಪಲ್ಲ. ಯಾಕಂದ್ರೆ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ […]