September 10, 2026
The Public Spot
ರಾಜಕೀಯರಾಜ್ಯ

ನೀಟ್‌ ಅಕ್ರಮದ ಬಗ್ಗೆ ಕಾಂಗ್ರೆಸ್‌ ಪ್ರತಿಭಟನೆ ಖಂಡಿಸಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ

ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಲೀಕ್‌​ ವಿಚಾರವಾಗಿ ಸಿಜೆಪಿ ಪ್ರತಿಭಟನೆ ಮಾಡ್ತಿದೆ. ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತಿದೆ. ಹಾಸನದಲ್ಲಿ ಮಾನವ ಸರಪಳಿ ರಚಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಯ್ತು. ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ದೇಶ ವಿರೊಧಿ ಶಕ್ತಿಗಳು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿವೆ ಅಂತ ಪ್ರತಿಭಟನಾಕಾರರು ಆರೋಪಿಸಿದ್ರು.

ಪ್ರಧಾನಿ ಮೋದಿ ನಿವಾಸಕ್ಕೆ ಕಾಂಗ್ರೆಸ್ ನಾಯಕರು ನುಗ್ಗಲು ಯತ್ನಿಸಿದ ವಿಚಾರವಾಗಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಚೆನ್ನಮ್ಮ ವೃತ್ತದಿಂದ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದು, ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ತಳ್ಳಾಟ ನೂಕಾಟ ನಡೆದಿದೆ.

ಅತ್ತ ಕಲಬುರಗಿಯಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿದೆ. ಎಸ್‌ವಿಪಿ ವೃತದಿಂದ‌ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನ ಮಾರ್ಗಮಧ್ಯೆಯೇ ತಡೆಯಲಾಗಿದೆ. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್, ಶಾಸಕ ಅವಿನಾಶ್ ಜಾಧವ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಬಂಧಿಸಲಾಯ್ತು.

ಕೋಲಾರದಲ್ಲಿ ಕಾಂಗ್ರೆಸ್, CJP ಪಕ್ಷದ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಸ್​ ನಿಲ್ದಾಣದ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಯ್ತು. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸ್ತಿದೆ ಅಂತ ಆರೋಪಿಸಿದ ಬಿಜೆಪಿ ನಾಯಕರು, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಚಿತ್ರದುರ್ಗದಲ್ಲೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. MLC ನವೀನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ಕಚೇರಿಗೆ ನುಗ್ಗಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಪ್ರತಿಭಟನೆ ನಡೆಸಿದ್ದು, ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದ್ದಾರೆ.

ವಿಜಯಪುರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಪ್ರತಿಭಟನೆಗೆ ದಲಿತಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅಂಬೇಡ್ಕರ ವೃತ್ತದಲ್ಲಿ ಬಿಜೆಪಿ – ದಲಿತ ಸಂಘಟನೆಗಳ ಮುಖಾಮುಖಿ ಆಗಿದೆ. ಏಕಾಏಕಿ ಪ್ರತಿಭಟನೆ ಪ್ರಾರಂಭಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರನ್ನ ವಶಕ್ಕೆ ಪಡೆಯಲಾಗಿದೆ.

ಗದಗದಲ್ಲಿ ಕಾಂಗ್ರೆಸ್, ಸಿಜೆಪಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಗದಗದ ಗಾಂಧಿ ಸರ್ಕಲ್ ಬಳಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆದಿದ್ದು, ನೀಟ್ ಪರೀಕ್ಷೆಯಲ್ಲಿ ಅಕ್ರಮ ಮಾಡಿದವ್ರ ವಿರುದ್ಧ ಮೊದಿ ಕ್ರಮ ಕೈಗೊಂಡಿದ್ದಾರೆ. ಆದ್ರೂ ರಾಹುಲ್ ಗಾಂಧಿ ಸುಖಾಸುಮ್ಮನೆ ಪ್ರತಿಭಟನೆ ಮಾಡಿದ್ದಾರೆ ಅಂತ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Related posts

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಆಗುತ್ತಾ..? ಸರ್ಕಾರದ ಉದ್ದೇಶ ಏನು..?

Publicspot

ಪ್ರಧಾನಿ ಮೋದಿಗೆ ಡಿಕೆಶಿ ಬೆಳ್ಳಿ ಗಣಪತಿ ಗಿಫ್ಟ್.. ಏನಿದು ವಿವಾದ..?

Publicspot

RSS ನೋಂದಣಿ ಮಾಡಿಸುವ ವಿಚಾರ.. ಹೋಂ ಮಿನಿಸ್ಟರ್‌ ಮಾತಿಗೆ ಆಕ್ರೋಶ..

Publicspot

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

Publicspot

ಖಾತೆ ಹಂಚಿಕೆ.. ಕೊನೆಗೂ ಗೆದ್ದ ಮುನಿಯಪ್ಪ.. ರಾಮಲಿಂಗಾರೆಡ್ಡಿ.. ಬಿದ್ದವರು ಯಾರು..?

Publicspot

ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?​

Publicspot