The Public Spot
ಅಪರಾಧ

ಮದುವೆ ಆಗದಿದ್ದರೂ ಬೇಡ ಇಂಥಹ ಹುಡುಗಿ.. ಈಕೆ ಮಾಡಿದ್ದಾದ್ರೂ ಏನು..?

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಗಣೇಶ ಕೋಲಕಾರ ಎಂಬಾತನಿಗೆ ಕಳೆದ 5 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಅಕ್ಷತೆ ಹಾಕುತ್ತ ಹಸೆಮಣೆ ಏರಿದ್ದಳು ಅಕ್ಷತಾ. ಮದುವೆ ದಿನದಿಂದಲೂ ನಗುನಗುತ್ತಲೇ ನವರಂಗಿ ಆಟ ಆಡಿದ್ದ ಅಕ್ಷತಾ, ಗಂಡನನ್ನೇ ಘೋರಾತಿ ಘೋರವಾಗಿ ಕೊಂದು ಪರಾರಿ ಆಗಿದ್ದಾಳೆ.

ಮದುವೆ ಆದ ಬಳಿಕ ಸದಾ ಕಾಲ ಮೊಬೈಲ್​ ಫೋನ್‌ನಲ್ಲೇ ಬ್ಯುಸಿಯಾಗಿ ಇರ್ತಿದ್ದ ಅಕ್ಷತಾ, ಗಂಡನ ಜೊತೆ ಅಷ್ಟಕಷ್ಟೇ ಎನ್ನುವಂತೆ ವರ್ತಿಸುತ್ತಿದ್ದಳು. ಎರಡು ದಿನದ ಹಿಂದೆ ಯಾವುದೋ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿತ್ತು. ಇದಾದ ಮರುದಿನವೇ ಅಂದರೆ, ವಿಜಯದಶಮಿ ದಿನವೇ ಗಂಡನಿಗೆ ಮುಹೂರ್ತ ಇಟ್ಟಿದ್ದಳು. ಕೊಡಲಿಯಿಂದ ಗಂಡನ ಕುತ್ತಿಗೆ ಸೀಳಿ ಪ್ರಿಯಕರನ ಜೊತೆ ಎಸ್ಕೇಪ್‌ ಆಗಿದ್ದಾಳೆ.

ಈ ಘಟನೆಯನ್ನು ನೋಡಿದ ಹುಡುಗರು, ಮದುವೆ ಆಗದಿದ್ದರೂ ಪರವಾಗಿಲ್ಲ, ನಮಗೆ ಈ ರೀತಿಯ ಹುಡುಗಿ ಬೇಡಪ್ಪ ಬೇಡ ಎನ್ನುತ್ತಿದ್ದಾರೆ. ಆದರೂ 23 ವರ್ಷದ ಹುಡುಗ ಇಷ್ಟ ಇಲ್ಲದಿದ್ದರೆ ಆತನನ್ನು ಬಿಟ್ಟು ಹೋಗಿದ್ದರೂ ಅನ್ಯಾಯ ಆಗುತ್ತಿರಲಿಲ್ಲ. ಇಚ್ಛೆಪಟ್ಟವರ ಜೊತೆಗೆ ಆಕೆ ಸಂಸಾರ ಮಾಡಲು ಅಡ್ಡಿಯೇನು ಇರಲಿಲ್ಲ. ಅಷ್ಟಕ್ಕೂ ಕಾನೂನು ರೀತ್ಯ ವಿಚ್ಛೇದನ ಪಡೆಯಲು ಸಾಧ್ಯವಿತ್ತು. ಆದರೆ ಕೊಂದು ಬದುಕು ಕಟ್ಟಿಕೊಳ್ತೇನೆ ಅಂದುಕೊಂಡಿದ್ದು ಮೂರ್ಖತನ. ಇಂದಲ್ಲ ನಾಳೆ ಪೊಲೀಸರು ಕೋಳ ಹಾಕಿ ಜೈಲಿಗೆ ಅಟ್ಟುತ್ತಾರೆ ಅನ್ನೋದು ಮರೆತಿದ್ದು ಪೆದ್ದುತನ.

Related posts

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

ದುಷ್ಚಟಕ್ಕೆ ದಾಸರಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿದ್ದ ಗೆಳೆಯರು ಅಂದರ್!

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

Man Stab a Girl for ; ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿತ!!

Publicspot

ಒಂದಲ್ಲ.. ಎರಡಲ್ಲ.. ಆಂಟಿ ಮೂರನೇ ಮದುವೆ.. ಬುಲೆಟ್‌ ರೈಡ್‌ಗಾಗಿ ಜೂಟ್‌..

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot