The Public Spot
ಅಪರಾಧ

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

ಬೆಂಗಳೂರಿನಲ್ಲಿ ಪ್ರತಿದಿನವೂ ಬೆಂಕಿ ಅನಾಹುತಗಳು ಆಗುತ್ತಲೇ ಇವೆ. ನಿನ್ನೆ ನಿಗೂಢ ಸ್ಫೋಟ ಸಂಭವಿಸಿ, ಓರ್ವ ಬಾಲಕ ಮೃತಪಟ್ಟು ಆರೇಳು ಮನೆಗಳು ನಾಶ ಆಗಿದ್ದವು. ಇವತ್ತು ಮತ್ತೆ ಬೆಂಗಳೂರಿನಲ್ಲಿ ಬೆಂಕಿ ಅವಘಡ ಸಂಭವಿಸಿ ಐವರು ಸಾವನ್ನಪ್ಪಿದ್ದಾರೆ. ಮಳೆಗಾಲದಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸುತ್ತಿರುವುದು ಅಧಿಕಾರಿಗಳಿಗೇ ಸೋಜಿಗದ ಸಂಗತಿ ಎನ್ನುವಂತಾಗಿದೆ. ನಗರತ್ ಪೇಟೆಯ ಕಮರ್ಷಿಯಲ್ ಬಿಲ್ಡಿಂಗ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಐವರರನ್ನು ಬಲಿ ತೆಗೆದುಕೊಂಡಿದೆ. ಕಟ್ಟಡದಲ್ಲಿ ಮ್ಯಾಟ್‌ಗಳೂ ಸೇರಿದಂತೆ ಗೃಹೋಪಯೋಗಿ ಅಲಂಕಾರಿಕ ವಸ್ತುಗಳ ಅಂಗಡಿಗಳಿದ್ವು ಎನ್ನಲಾಗಿದೆ. 5 ಅಗ್ನಿಶಾಮಕ ವಾಹನ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ಮಾಡಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಮರ್ಷಿಯಲ್ ಬಿಲ್ಡಿಂಗ್ ಮೇಲೆ ಮನೆಗಳು ಇದ್ದು, ಇದೂ ಕೂಡ ಸಿಲಿಂಡರ್ ಸ್ಫೋಟನಾ ಅಥವಾ ಶಾರ್ಟ್ ಸೆಕ್ಯೂರ್ಟ್ ಆಗಿದ್ಯಾ ಅನ್ನೋ ಬಗ್ಗೆ ಅನುಮಾನಗಳಿವೆ. ಮದನ್ ಸಿಂಗ್ ಎಂಬಾತನ ಇಡೀ ಸಂಸಾರವೇ ಸಾವನ್ನಪ್ಪಿದೆ. ರಾಜಸ್ಥಾನ ಮೂಲದ ಮದನ್​ ಸಿಂಗ್​ ಕುಟುಂಬ ಮೂರನೇ ಮಹಡಿಯಲ್ಲಿ ವಾಸವಾಗಿತ್ತು. ಒಟ್ಟು ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು, ಗಂಡ ಮದನ್ ಸಿಂಗ್, ಪತ್ನಿ ಸಂಗೀತಾ ಹಾಗೂ ಇಬ್ಬರು ಮಕ್ಕಳು ಮನೆ ಒಳಗೆ ಸಿಲುಕಿದ್ದಾರೆ. ಎಂಟು ವರ್ಷದ ಒಂದು ಮಗು ಹಾಗೂ ಐದು ವರ್ಷದ ಮತ್ತೊಂದು ಮಗು ಸಿಲುಕಿ ಸಜೀವ ದಹನ ಆಗಿದೆ.

ಕೆಳ ಮಹಡಿಯಲ್ಲಿ ಶಾರ್ಟ್ ಸಕ್ಯೂರ್ಟ್ ಆಗಿದ್ದು, ಮೇಲಿನವರೆಗೂ ಬೆಂಕಿ ಆವರಿಸಿದೆ. ಕಿಚನ್ ವಸ್ತುಗಳ ವ್ಯಾಪಾರಿಯಾಗಿದ್ದ ಮದನ್​ ಸಿಂಗ್​, ಈ ಬಿಲ್ಡಿಂಗ್‌ನಲ್ಲಿ ಬಾಡಿಗೆ ಮನೆ ಪಡೆದುಕೊಂಡು ವಾಸವಾಗಿದ್ದರು ಎನ್ನಲಾಗಿದೆ. ಕೆಳ ಅಂತಸ್ತಿನ ಕೊಠಡಿಯಲ್ಲಿ ಚಾಪೆ ಹಾಗೂ ಪ್ಲಾಸ್ಟಿಕ್ ಗೋಡೌನ್ ಇತ್ತು.. ಅಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಬಿಲ್ಡಿಂಗ್ ಗೆ ಬೆಂಕಿ ಆವರಿಸಿರೋ ಮಾಹಿತಿ ಲಭಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿರುವ ಮದನ್ ಸಿಂಗ್ ಮಾಡಿದ ಎಡವಟ್ಟಿಗೆ ಇಡೀ ಕುಟುಂಬವೇ ಸರ್ವ ನಾಶ ಆಗಿದೆ. ಬೆಂಕಿ ಬಿದ್ದಾಗ ಮೂರನೇ ಪ್ಲೋರ್​ನಲ್ಲಿದ್ದ ಮದನ್ ಸಿಂಗ್, ಮೊದಲನೇ ಪ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಕೆಳಕ್ಕೆ ಇಳಿದು ಬಂದಿದ್ದಾರೆ. ಆದರೆ ಬರುವಾಗ ಮನೆಗೆ ಬೀಗ ಹಾಕಿಕೊಂಡು ಬಂದಿದ್ದು ಎಲ್ಲರನ್ನೂ ಬಲಿ ತೆಗೆದುಕೊಂಡಿದೆ.

ಕೆಳಗಡೆ ಬಿಲ್ಡಿಂಗ್‌ನಲ್ಲಿ ಸುಟ್ಟಿರೋ ತರ ಏನೋ ವಾಸನೆ ಬರ್ತಾ ಇದೆ ಎಂದು ಕೆಳಗೆ ಇಳಿದು ಬಂದಿದ್ದ ಮದನ್ ಸಿಂಗ್, ಮನೆಯಿಂದ ಹೊರ ಬರುವಾಗ ಮನೆಗೆ ಬೀಗ ಹಾಕಿಕೊಂಡು ಹೊರ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಮನೆಯ ಒಳಗೆ ಮದನ್ ಸಿಂಗ್ ಹೆಂಡ್ತಿ ಹಾಗೂ ಮಕ್ಕಳು ಇದ್ರು. ಹೊರಕ್ಕೆ ಬಂದ ಮದನ್ ಸಿಂಗ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲು ಆಗಿದ್ದರು. ಈ ಕಡೆ ಒಳಗೆ ಇದ್ದ ಹೆಂಡ್ತಿ ಮಕ್ಕಳು ಹೊರಕ್ಕೆ ಬರಲಾಗದೇ ಅವರು ಒಳಗಡೆಯೇ ಸಿಲುಕಿ ಸಾವನ್ನಪ್ಪಿದ್ದಾರೆ‌. ಇತ್ತ ಎರಡನೇ ಮಹಡಿಯಲ್ಲಿದ್ದ ಸುರೇಶ್ ಎಂಬಾತನೂ ಕೂಡ ಬೆಂಕಿಯಲ್ಲಿ ಸಜೀವ ದಹನ ಆಗಿದ್ದಾನೆ. 36 ವರ್ಷದ ಸುರೇಶ್‌ನ ಮೃತದೇಹ ​ಎರಡನೇ ಮಹಡಿಯಲ್ಲಿ ಸಿಕ್ಕಿದೆ.

ಈ ಕಟ್ಟಡದಲ್ಲಿ ಎರಡು ಕುಟುಂಬಗಳು ಮಾತ್ರ ವಾಸವಾಗಿದ್ದವು. ಒಂದು ಕುಟುಂಬ ಬೆಂಕಿ ಕಾಣಿಸಿಕೊಳ್ತಿದ್ದಂತೆ, ಟೆರಸ್ ಮೇಲೆ ಹೋಗಿ ಪಕ್ಕದ ಬಿಲ್ಡಿಂಗ್ ಗೆ ಹೋಗಿದ್ದಾರೆ. ಎರಡನೇ ಪ್ಲೋರ್‌ನಲ್ಲಿ ಬ್ಯಾಚುಲರ್ ಸುರೇಶ್ ಮಾತ್ರ ವಾಸವಾಗಿದ್ದನು. ಮೂರನೇ ಮಹಡಿಯಲ್ಲಿ ಮದನ್ ಕುಟುಂಬವಿತ್ತು. ಎಂದು ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಮದನ್ ಕುಟುಂಬ ಸೇರಿದಂತೆ ಬ್ಯಾಚುಲರ್‌ ಸುರೇಶ್ ಸೇರಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಅವರು ಗೋಡೌನ್ ಮತ್ತೆ ಸ್ಟೀಲ್ ಐಟಮ್‌ಗಳ ಬಿಸಿನೆಸ್ ಮಾಡ್ತಿದ್ರು ಅಂತಾ ತಿಳಿಸಿದ್ದಾರೆ. ಈ ಘಟನೆ ಮುಂಜಾನೆ ಎರಡೂವರೆ ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ. ಚಿಕ್ಕ ಚಿಕ್ಕ ರಸ್ತೆಗಳು ಇರುವ ಕಾರಣದಿಂದಾಗಿ ಅಗ್ನಿಶಾಮಕ ವಾಹನ ಬರೋಕೆ‌ ತಡವಾಗಿದೆ ಎನ್ನಲಾಗ್ತಿದೆ.

Related posts

Actress Ranya Rao: ನಟಿ ರನ್ಯಾ ರಾವ್​ ಗೆ ಕೋರ್ಟ್ ನಿಂದ ಭಾರೀ ದಂಡ..

Publicspot

ಆನ್‌ಲೈನ್‌ ಗೇಮ್‌ಗೆ ಇಡೀ ಕುಟುಂಬವೇ ಸರ್ವನಾಶ..! ಪೋಷಕರೇ ಎಚ್ಚರ..

Publicspot

Husband Murder: ನನಗೆ ಗಂಡ ಬೇಡ.. ನೀನೇ ಬೇಕು ಅಂದಳು.. ಬಾಲ್ಯ ಸ್ನೇಹಿತನ ಕೊಂದವನ ಮಾತು.. ಖಾಕಿ ಶಾಕು..

Publicspot

ಒಂದು ಪ್ರೀತಿ ಮೂವರ ಕೊಲೆ.. ಮನೆಯಲ್ಲೇ ಮಣ್ಣು ಮಾಡಿ ಸಿಕ್ಕಿಬಿದ್ದಿದ್ಯಾಕೆ..?

Publicspot

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

ಕಮಲಾಕರ ಭಟ್‌ಗೆ ಬಲೆ ಬೀಸಿದಾಕೆ ಸುಚಿತ್ರಾ ಅಲ್ಲ.. ಸುಳ್ಳು ಹೆಸರಿನ ಹಿಂದಿನ ರಹಸ್ಯ ಏನು..?

Publicspot