The Public Spot
Uncategorized

American Presidents Target India: ಭಾರತವನ್ನು ಟಾರ್ಗೆಟ್​ ಮಾಡಿದ್ಯಾ ಅಮೆರಿಕ..?

ಭಾರತ ಸರ್ಕಾರ ಕಚ್ಚಾ ಇಂಧನ ಹಾಗೂ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಖರೀದಿ ಮಾಡುತ್ತಿರುವುದಕ್ಕೆ ಅಮೆರಿಕ ಕೆಂಗಣ್ಣು ಬೀರಿದೆ. ಭಾರತದಿಂದ ರಫ್ತಾಗುವ (ಭಾರತದಲ್ಲಿ ತಯಾರಾಗಿ ಅಮೆರಿಕಕ್ಕೆ ಹೋಗುವ) ವಸ್ತುಗಳ ಮೇಲೆ ಶೇಕಡ 50 ರಷ್ಟು ತೆರಿಗೆ ವಿಧಿಸುವ ನಿರ್ಧಾರ ಮಾಡಿತ್ತು. ಆಗಸ್ಟ್​ 6ರಂದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದರು. ಆ ಆದೇಶ ನಿನ್ನೆ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಇನ್ಮುಂದೆ ಅಮೆರಿಕದಲ್ಲಿ ಭಾರತದ ವಸ್ತುಗಳು ದುಬಾರಿ ಆಗಲಿವೆ. ಅಂದರೆ ಅಮೆರಿಕದಲ್ಲಿ ಭಾರತದ ವಸ್ತುಗಳಿಗೆ ಬೇಡಿಕೆ ಕುಸಿಯುವ ಸಾಧ್ಯತೆ ನಿಚ್ಚಳವಾಗಿದೆ.

ಮಧ್ಯರಾತ್ರಿಯಿಂದ ಅಮೆರಿಕದಲ್ಲಿ ದುಬಾರಿ!

ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಜಾರಿ ಬಗ್ಗೆ ಅಮೆರಿಕ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಒಟ್ಟಾರೆ ಸುಂಕ ಶೇಕಡ 50ಕ್ಕೆ ಏರಿಕೆ ಆಗಿದೆ. ಆಗಸ್ಟ್‌ 6ರಂದು ಈ ಬಗ್ಗೆ ಡೊನಾಲ್ಡ್​ ಟ್ರಂಪ್‌ ಘೋಷಣೆ ಮಾಡಿದ್ದರು. ನಿನ್ನೆ ರಾತ್ರಿಯಿಂದ ನೂತನ ಸುಂಕ ಜಾರಿ ಆಗಿದೆ. ಜವಳಿ, ಆಭರಣ, ಚರ್ಮ, ಯಂತ್ರೋಪಕರಣ, ಪೀಠೋಪಕರಣ ಮತ್ತು ಸಮುದ್ರ ಉತ್ಪನ್ನಗಳಿಗೆ ಸುಂಕ ಅನ್ವಯ ಎನ್ನಲಾಗಿದೆ. ರಷ್ಯಾದಿಂದ ಕಚ್ಚಾ ಇಂಧನ ಖರೀದಿ ಮಾಡಿದ್ದಕ್ಕೆ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.

ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್..!

ಈ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಕೊರಿಯಾ ಅಧ್ಯಕ್ಷರ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಡೊನಾಲ್ಡ್​ ಟ್ರಂಪ್, ಇಂಡೋ-ಪಾಕ್‌ ನಡುವೆ ಯುದ್ಧ ನ್ಯೂಕ್ಲಿಯರ್‌ ವಾರ್‌ ಆಗಿ ಬದಲಾಗುವ ಪರಿಸ್ಥಿತಿಯಿತ್ತು. ಅಷ್ಟರಲ್ಲಿ ಆಗಲೇ 7 ಫೈಟರ್‌ ಜೆಟ್‌ ಹೊಡೆದುರುಳಿಸಲಾಗಿತ್ತು. ನಾನು ಮಧ್ಯಪ್ರವೇಶ ಮಾಡಿ ವ್ಯಾಪಾರ ಬೇಕೋ..? ಬೇಡ್ವೋ ಅಂತಾ ನಿರ್ಧಾರ ಮಾಡಿ ಎಂದು 24 ಗಂಟೆಗಳ ಗಡುವು ಕೊಟ್ಟಿದ್ದೆ. ಆ ಬಳಿಕ ಯುದ್ಧ ಅಂತ್ಯವಾಯ್ತು ಎನ್ನುವ ಮೂಲಕ ಸುಂಕದಿಂದ ಅಷ್ಟೇ ಅಲ್ಲದೆ ಭಾವನಾತ್ಮಕವಾಗಿಯೂ ಭಾರತದ ಮೇಲೆ ಕೋಪ ತೀರಿಸಿಕೊಳ್ಳುವಂತೆ ಕಾಣ್ತಿದೆ..

ಭಾರತದ ಬಳಿ ಇದೆ ಠಕ್ಕರ್ ಪ್ಲ್ಯಾನ್​..!

ಅಮೆರಿಕದ ಸುಂಕ ನೀತಿಗೆ ತಿರುಗಿ ಬಿದ್ದಿರುವ ಭಾರತ, ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು ವ್ಯವಸ್ಥೆ ಮಾಡಿದೆ. ಭಾರತ ಸರ್ಕಾರ 40 ಕ್ಕೂ ಹೆಚ್ಚು ರಾಷ್ಟ್ರಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಜವಳಿ ಉದ್ಯಮಕ್ಕೆ ಆಗಬಹುದಾದ ನಷ್ಟವನ್ನು ತಪ್ಪಿಸಲು ಯೋಜನೆ ರೂಪಿಸಿದೆ. ಬ್ರಿಟನ್‌, ಜಪಾನ್‌, ಸೌತ್‌ ಕೊರಿಯಾ, ಜರ್ಮನಿ, ಫ್ರಾನ್ಸ್‌, ಇಟಲಿ, ಸ್ಪೇನ್‌, ರಷ್ಯಾ ಸೇರಿದಂತೆ 40 ರಾಷ್ಟ್ರಗಳ ಜೊತೆಗೆ ಚರ್ಚೆ ಆರಂಭಿಸಿದೆ. ಅಮೆರಿಕದಲ್ಲಿ ಬೇಡಿಕೆ ಕುಸಿತಗೊಂಡರೆ ರಫ್ತು ಹಾಗೂ ಭಾರತದ ವಸ್ತುಗಳ ಮೇಲಿನ ಬೇಡಿಕೆ ತಗ್ಗದಂತೆ ವ್ಯವಸ್ಥೆ ಮಾಡಲು ನಿರ್ಧಾರ ಆಗಿದೆ ಎನ್ನಲಾಗಿದೆ.

ಟ್ರಂಪ್​ ಫೋನ್​ ತೆಗಿಲಿಲ್ವಂತೆ ಮೋದಿ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೋನ್‌ ಮಾಡಿದರೂ ನರೇಂದ್ರ ಮೋದಿ 4 ಬಾರಿ ಕರೆಯನ್ನು ಸ್ವೀಕರಿಸಿಲ್ಲ ಅನ್ನೋ ಬಗ್ಗೆ ಅಂತಾಷ್ಟ್ರೀಯ ಮಟ್ಟದಲ್ಲಿ ವರದಿಯಾಗಿದೆ. ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಪ್ರಕಾರ ಜರ್ಮನಿಯ ನ್ಯೂಸ್‌ ಪೇಪರ್‌ನಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಏಪ್ರಿಲ್‌ 22 ರಿಂದ ಜೂನ್‌ 17ರ ನಡುವೆ ಟ್ರಂಪ್​ ಕರೆ ಮಾಡಿದ್ದು, ಪ್ರಧಾನಿ ಮೋದಿ ಸ್ವೀಕರಿಸಿಲ್ಲ ಎನ್ನಲಾಗಿದೆ. ಡೊನಾಲ್ಡ್​ ಟ್ರಂಪ್‌ ಮಾತಿನ ಕಿರಿಕಿರಿಯಿಂದ ಅವಮಾನಿತರಾಗಿ ಮೋದಿ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.

Related posts

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot

VISHNU TRIBUTE-KICCHA SUDEEP: ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ

Publicspot

Cough syrup Death; ಪೋಷಕರೇ ಮಕ್ಕಳಿಗೆ ಕೆಮ್ಮು ಔಷಧಿ ಬಳಸಬೆಡಿ.. ಸಾವು ಸಂಭವಿಸುತ್ತೆ..

Publicspot

ಡಿಕೆ ಬ್ರದರ್ಸ್​ ಒತ್ತಡಕ್ಕೆ ಹೈಕಮಾಂಡ್​​ ಮಣಿದರೆ ಉಳಿಯುತ್ತಾ ಸರ್ಕಾರ..?

Publicspot

Mask Man Arrest: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದಿದ್ದವನೇ ಅರೆಸ್ಟ್​ ಆಗಿದ್ಯಾಕೆ..?

Publicspot

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot