The Public Spot
Uncategorized

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕ ಪ್ರಕರಣದಲ್ಲಿ ಎಡರಡನೇ ಅಸ್ಥಿಪಂಜರದ ಗುರುತು ಪತ್ತೆಯಾಗಿದೆ. ಧರ್ಮಸ್ಥಳದ ಬಂಗ್ಲಗುಡ್ಡೆಯಲ್ಲಿ SIT ತಂಡ ನಡೆಸಿದ ಎರಡನೇ ಹಂತದ ಶೋಧದಲ್ಲಿ ಅಸ್ತಿಪಂಜರ ಸಿಕ್ಕಿತ್ತು. ಮೊದಲ ಅಸ್ಥಿಪಂಜರದ ಗುರುತು ಸಿಕ್ಕಿತ್ತು. ಇದೀಗ 2ನೇ ಅಸ್ಥಿಪಂಜರದ ಗುರುತು ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿ ಆದಿಶೇಷ ನಾರಾಯಣ ಎಂಬವರಿಗೆ ಸೇರಿದೆ ಎನ್ನಲಾದ ಅಸ್ಥಿಪಂಜರ ಎನ್ನಲಾಗಿದೆ. ಶೋಧ ಸಂದರ್ಭದಲ್ಲಿ ಆದಿಷೇಷ ನಾರಾಯಣರ ಡಿಎಲ್ ಪತ್ತೆಯಾಗಿತ್ತು. ಆ ಬಳಿಕ ಕುಟುಂಬ ಸದಸ್ಯರನ್ನು ಸಂಪರ್ಕಿಸಿತ್ತು SIT ಟೀಂ. SIT ಕರೆ ಹಿನ್ನಲೆಯಲ್ಲಿ ಕಛೇರಿಗೆ ಆಗಮಿಸಿದ ಆದಿಶೇಷ ನಾರಾಯಣರ ಅವರ ಕುಟುಂಬ ಸದಸ್ಯರು. ಈ ನಡುವೆ ಸುಪ್ರೀಂಕೋರ್ಟ್‌ PIL (Public Interest Litigation) ಅರ್ಜಿಯನ್ನು ವಜಾ ಮಾಡಿದೆ ಅನ್ನೋ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ.

ಧರ್ಮಸ್ಥಳದ ಬುರುಡೆ ಕೆಸ್‌ ಬೆಳ್ತಂಗಡಿ ಸ್ಟೇಷನ್‌ಗೆ ಬರುವ ಮುನ್ನ ದೆಹಲಿ ಸುತ್ತಾಡಿ ಬಂದಿತ್ತು ಅನ್ನೋ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ‘ಬುರುಡೆ’ ಜೊತೆಗೆ ಇದೇ ಟೀಂ ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಿತ್ತು. ಸುಪ್ರೀಂಕೋರ್ಟ್‌ ವಕೀಲ ಕೆ.ವಿ ಧನಂಜಯ ಮೂಲಕ ಪಿಐಎಲ್‌ ಹಾಕಿದ ಬಳಿಕ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿತ್ತು. ‘ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ರೂಪದಲ್ಲಿ ಇಲ್ಲ’ ಇದು ‘ಪಬ್ಲಿಸಿಟಿ ಇಂಟೆರೆಸ್ಟ್‌ ಲಿಟಿಗೇಷನ್‌’ ‘ಪೈಸಾ ಇಂಟೆರೆಸ್ಟ್‌ ಲಿಟಿಗೇಷನ್‌’ ‘ಪ್ರೈವೇಟ್‌ ಇಂಟೆರೆಸ್ಟ್‌ ಲಿಟಿಗೇಷನ್‌’, ‘ಪೊಲಿಟಿಕಲ್‌ ಇಂಟೆರೆಸ್ಟ್‌ ಲಿಟಿಗೇಷನ್‌’ ಎಂದಿದ್ದ ನ್ಯಾಯಮೂರ್ತಿಗಳು ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಇಲ್ಲ ಎಂದು ಅರ್ಜಿದಾರರಿಗೆ ಛೀಮಾರಿ ಹಾಕಿತ್ತು ಅನ್ನೋದು ಗೊತ್ತಾಗಿದೆ.

ಸುಪ್ರೀಂಕೋರ್ಟ್ PIL ಸಲ್ಲಿಕೆ ಮಾಡಿ ಛೀಮಾರಿ ಹಾಕಿಸಿಕೊಂಡ ನಂತರ ಧರ್ಮಸ್ಥಳದಲ್ಲಿ ದೂರು ಸಲ್ಲಿಸಲಾಗಿತ್ತು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಕೋರ್ಟ್‌ನಲ್ಲಿ ಹೇಳಿಕೆ ದಾಖಲು ಮಾಡಲಾಯ್ತು. ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ ನಂತರ ಎಸ್‌ಐಟಿ ರಚನೆಗೆ ಒತ್ತಡ ಹೆಚ್ಚಾಗಿ ಎಸ್‌ಐಟಿ ರಚನೆ ಆಯ್ತು ಎನ್ನಲಾಗಿದೆ. ದೂರಿನ ಮಾದರಿ, ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದರಿಂದ ಎಸ್‌ಐಟಿ ರಚನೆ ಮಾಡಿದ್ರು. ರಾಜ್ಯ ಸರ್ಕಾರ ತರಾತುರಿಯ ನಿರ್ಧಾರ ಮಾಡಿತ್ತು ಎಂದು ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ವಜಾ ಆಗಿರುವ ಪಿಐಎಲ್‌ ಅರ್ಜಿಯ ತೀರ್ಪಿಗೂ ಎಸ್‌ಐಟಿ ರಚನೆಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

ಧರ್ಮಸ್ಥಳ ಷಡ್ಯಂತ್ರದ PIL ವಜಾ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, PIL ವಜಾ ಆಗಿದ್ದರು ಕೂಡ ಸರ್ಕಾರ ತನಿಖೆಗೆ ಆದೇಶ ಮಾಡಿದೆ. ಜನರ ಒತ್ತಡ ಮೇರೆಗೆ ತನಿಖೆ ನಡೆಯುತ್ತಿದೆ. PIL ವಜಾ‌ ನಮಗೆ ತಡವಾಗಿ ಗೊತ್ತಾಗಿದೆ ಎಂದಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಸತ್ಯ ಹೊರಗೆ ಬರುತ್ತದೆ. ತನಿಖೆ ಸಂಪೂರ್ಣ ಆಗುವರೆಗೆ SIT ಇರುತ್ತೆ ಅಂತ ಹೇಳಲು ಹೋಗಲ್ಲ, ಈ ಬಗ್ಗೆ ಗೃಹ ಸಚಿವರು ‌ಮಾತನಾಡುತ್ತಾರೆ ಎಂದಿದ್ದಾರೆ. ಧರ್ಮಸ್ಥಳದ ವಿಚಾರ ಹಾಗೂ ಎಸ್‌ಐಟಿ ತನಿಖೆ ವಿಚಾರ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಯಾವುದೆ ಚರ್ಚೆ ಆಗಿಲ್ಲ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ ಹೇಳಿದ್ದಾರೆ. ಪಿಐಎಲ್ ವಿಚಾರ ಅದು ನಮ್ಮ ಗಮನಕ್ಕೂ ಬಂದಿಲ್ಲ, ಕ್ಯಾಬಿನೆಟ್‌ನಲ್ಲೂ ಚರ್ಚೆ ನಡೆದಿಲ್ಲ ಎಂದಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಮಾತ್ರ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ, ಈಗ ಮಂಗಳೂರಿಗೆ ಹೋಗ್ತಿದ್ದೇನೆ. ಅಲ್ಲಿಯೇ ಮಾತನಾಡ್ತೇನೆ ಎಂದಿದ್ದಾರೆ.

Related posts

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

Publicspot

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

Publicspot

ಹುಟ್ಟುಹಬ್ಬದ ನೆಪದಲ್ಲಿ ಸಾಕಷ್ಟು ರಹಸ್ಯ ಬಿಚ್ಚಿಟ್ಟ ನಟಿ ರಚಿತಾ ರಾಮ್​!

Publicspot

GST Effect; ಇಂದಿನಿಂದ ಬಹುತೇಕ ವಸ್ತುಗಳ ದರ ಇಳಿಕೆ.. ಯಾವ್ಯಾವ ವಸ್ತುಗಳ ಬೆಲೆ ಇಳಿಕೆ ನೋಡಿ..

Publicspot

ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಕುಮಾರಣ್ಣ!

Publicspot

Nepal New Leader emerged: ನೇಪಾಳಕ್ಕೆ ನೂತನ ನಾಯಕರು ಯಾರು..? ಏನು ವಿಶೇಷ..?

Publicspot