The Public Spot
ಕ್ರೀಡೆ

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

ಏಷ್ಯಾ ಕಪ್‌ ಟಿ-20 ಟೂರ್ನಿಯಲ್ಲಿ ಭಾರತ ಪಾಕಿಸ್ತಾನವನ್ನು ಫೈನಲ್‌ನಲ್ಲೂ ಸೋಲಿಸುವ ಮೂಲಕ ಏಷ್ಯಾ ಕಪ್‌ ಎತ್ತಿ ಹಿಡಿದಿದ್ದಾರೆ. 19.1 ಓವರ್‌ಗಳಲ್ಲಿ 146 ರನ್‌ ಗಳಿಸಲು ಶಕ್ತವಾದ ಪಾಕಿಸ್ತಾನ ಭಾರತವನ್ನು ಆರಂಭದಲ್ಲಿ ಕಟ್ಟಿಹಾಕುವಲ್ಲಿ ಪಾಕಿಸ್ತಾನದ ಬೌಲರ್‌ಗಳು ಯಶಸ್ವಿ ಆದರು. ಆದರೆ ಯಾವುದೇ ಕ್ಷಣದಲ್ಲೂ ಆಟದಲ್ಲಿ ದಿಗಿಲುಗೊಳ್ಳದ ತಿಲಕ್‌ ವರ್ಮಾನ ಬ್ಯಾಟಿಂಗ್​ ಅಬ್ಬರಕ್ಕೆ ಪಾಕಿಸ್ತಾನ ಬೌಲರ್​ಗಳು ತತ್ತರಿಸಿ ಹೋದರು. 69 ರನ್​ಗಳ ಭರ್ಜರಿ ಆಟವಾಡಿದ ತಿಲಕ್​ ವರ್ಮಾ ಭಾರತದ ಗೆಲುವಿನ ರೂವಾರಿ ಆದರು. 19.4 ಓವರ್​ಗಳಲ್ಲಿ 5 ವಿಕೆಟ್​​ ಕಳೆದುಕೊಂಡ ಭಾರತ 150 ರನ್​ಗಳನ್ನು ಗಳಿಸಿ ಗೆಲುವಿನ ದಡ ಸೇರಿತು.

Read more: India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

ಸೂರ್ಯಕುಮಾರ್​ ಯಾದವ್​ ನಾಯಕತ್ವದಲ್ಲಿ ಏಷ್ಯಾ ಕಪ್​ ಟೂರ್ನಿಗೆ ಹೋಗಿದ್ದ ಭಾರತ, ಈ ಹಿಂದಿನ 2 ಪಂದ್ಯಗಳಲ್ಲೂ ಪಾಕಿಸ್ತಾನವನ್ನು ಸೋಲಿಸಿದ್ದ ಭಾರತ, ಅಂತಿಮವಾಗಿ ಫೈನಲ್​ ಪಂದ್ಯದಲ್ಲೂ ಪಾಕಿಸ್ತಾನವನ್ನು ಸೊಲ್ಲೆತ್ತದ ಹಾಗೆ ಸೋಲಿಸಿ, 9ನೇ ಬಾರಿಗೆ ಟೀಂ ಇಂಡಿಯಾ ಏಷ್ಯಾ ಕಪ್​ ಎತ್ತಿ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ ಭಾರತ. ತಿಲಕ್​ ವರ್ಮಾನ ಆಟಕ್ಕೆ ಸಂಜು ಸ್ಯಾಮ್‌‌ಸನ್‌, ಶಿವಂ ದುಬೆ ಭಾರತ ತಂಡಕ್ಕೆ ಬಲ ತುಂಬುವಲ್ಲಿ ಯಶಸ್ವಿ ಆದ್ರು. ಇನ್ನು ಬೌಲಿಂಗ್​ನಲ್ಲಿ ಚೈನಾ ಮನ್​ ಕುಲದೀಪ್‌ ಯಾದವ್​​ ಬೌಲಿಂಗ್‌ ದಾಳಿಗೆ ತರಗೆಲೆಗಳಂತೆ ಉದುರಿ ಹೋಗಿದ್ದು, ಪಾಕಿಸ್ತಾನವನ್ನು ಸಾಮಾನ್ಯ ರನ್​ಗೆ ಕಟ್ಟಿಹಾಕುವುದಕ್ಕೆ ಸಾಧ್ಯವಾಯ್ತು.

ವರುಣ್​ ಚಕ್ರವರ್ತಿ, ಜಸ್​ಪ್ರೀತ್​ ಬೂಮ್ರಾ, ಅಕ್ಷರ್​ ಪಟೇಲ್​ ತಲಾ ಎರಡು ವಿಕೆಟ್​ ಕಬಳಿಸಿದ್ರೆ 4 ಓವರ್​ಗಳಲ್ಲಿ 30 ರನ್​ ಕೊಟ್ಟು 4 ವಿಕೆಟ್​ ಕಬಳಿಸಿದ ಕುಲದೀಪ್​ ಯಾದವ್​ ಪಾಕಿಸ್ತಾನದ ಪಾಲಿಗೆ ಸಿಂಹಸ್ವಪ್ನರಾದರು. ಭಾರತದ ಸ್ಪಿನ್ನರ್​ ದಾಳಿಗೆ ಪಾಕಿಸ್ತಾನದ 8 ಮಂದಿ ದಾಂಡಿಗರು ಔಟ್​ ಆಗುವ ಮೂಲಕ ಸ್ಪಿನ್​ ಮೋಡಿ ಫೈನಲ್​ನಲ್ಲಿ ವರ್ಕ್​ ಆಗಿದೆ ಎನ್ನಬಹುದು. ಲೀಗ್​ ಹಂತ ಹಾಗೂ ಸೂಪರ್​ 4 ಹಂತದಲ್ಲೂ ಪಾಕಿಸ್ತಾನವನ್ನು ಸೋಲಿಸಿ ಗೆದ್ದು ಬೀಗಿದ್ದ ಭಾರತ, 41 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್​​ನಲ್ಲಿ ಮುಖಾಮುಖಿಯಾಗಿದ್ದು ಇದೇ ಮೊದಲು. ಭಾರತ – ಪಾಕಿಸ್ತಾನ ಪಂದ್ಯದಲ್ಲಿ ವಿಜಯಲಕ್ಷ್ಮೀ ಆ ಕಡೆ ಈ ಕಡೆ ತೂಗುಯ್ಯಾಲೆಯಲ್ಲಿ ಕುಳಿತರೂ ಒಮ್ಮೆಯೂ ಪಾಕ್​ಗೆ ಅವಕಾಶ ಇದೆ ಎಂದು ಆತಂಕ ಆಗುವ ಪ್ರಮೇಯ ಬಾರಲಿಲ್ಲ.

BigBoss Kannada; ಈ ಬಾರಿ ಕನ್ನಡಮಯ ಆಗಿದ್ಯಾಕೆ ಬಿಗ್‌ಬಾಸ್‌..?

ಪಾಕಿಸ್ತಾನದ ವಿರುದ್ಧ ಗೆದ್ದು ಏಷ್ಯಾ ಕಪ್​ ಟಿ 20 ಕಿರೀಟ ಗೆದ್ದ ಭಾರತದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ಸೋತು ಸುಣ್ಣ ಆಗಿರುವ ಪಾಕಿಸ್ತಾನವನ್ನು ಮತ್ತಷ್ಟು ವ್ಯಂಗ್ಯ ಮಾಡಿರುವ ಪ್ರಧಾನಿ ಇದು ಅಂಗಳದಲ್ಲಿ ಆಪರೇಷನ್​ ಸಿಂದೂರ್. ಅಂತಿಮ ಫಲಿತಾಂಶ ಮಾತ್ರ ಒಂದೆ ಆಗಿದೆ ಎನ್ನುವ ಮೂಲಕ ಆಪರೇಷನ್​ ಸಿಂದೂರ್​ನಲ್ಲಿ ಭಾರತದ ಫೈಟರ್​ ಜೆಟ್​ ಹೊಡೆದಿದ್ದೇವೆ ಎಂದಿದ್ದ ಪಾಕಿಸ್ತಾನ ಆಟಗಾರರ ಮಾತಿಗೆ ಟಾಂಟ್​ ಮಾಡಿದ್ದಾರೆ. ಇನ್ನು ಜಾಲತಾಣದಲ್ಲಿ ಈ ಪಂದ್ಯವನ್ನು ಆಪರೇಷನ್​ ಸಿಂದೂರ್​ಗೆ ಹೋಲಿಸುತ್ತಿರುವ ಅಭಿಮಾನಿಗಳು, ​ಈ ಪಂದ್ಯದಲ್ಲಿ ಕಮಾಲ್​ ಮಾಡಿದ್ದು ತಿಲಕ್​ ವರ್ಮಾ. ಹೀಗಾಗಿ ತಿಲಕ್​ ಅಂದರೆ ಸಿಂದೂರ್​.. ಹೀಗಾಗಿ ಇದೂ ಕೂಡ ಆಪರೇಷನ್​ ಸಿಂದೂರ್​ ಎನ್ನುತ್ತಿದ್ದಾರೆ.

Related posts

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

Publicspot

Indo – Pak T-20 Cricket; ವಿರೋಧದ ನಡುವೆ ದೇಶದ ಜನರ ಮನಸ್ಸು ಗೆದ್ದ ಕ್ರಿಕೆಟ್ ಆಟಗಾರರು..!

Publicspot

RCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್​..!

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot

T-20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದ ಟೀಂ ಇಂಡಿಯಾ..!

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot