The Public Spot
ರಾಜ್ಯ

ಇಂದು ನಾಳೆ ಭಾರೀ ಮಳೆ ಆಗುವ ಬಗ್ಗೆ ಅಲರ್ಟ್​.. ಬೆಂಗಳೂರಿಗೆ ಸಂಕಷ್ಟ!!

ಇಂದು ನಾಳೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದಾರೆ ಹವಾಮಾನ ತಜ್ಞರು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ ಸಿಕ್ಕಿದೆ. ಈ ಜಿಲ್ಲೆಗಳಿಗೆ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ ಮುನ್ಸೂಚನೆ ಸಿಕ್ಕಿದ್ದು, ಈ ಎರಡು ಜಿಲ್ಲೆಗಳಲ್ಲಿ ಬರೋಬ್ಬರಿ 112 ಮಿ.ಮೀ ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ಮಳೆ ಬಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಬಗ್ಗೆ ತಜ್ಞರೆ ಹೇಳುತ್ತಿದ್ದಾರೆ. ಮಳೆಯಿಂದ ಹಾನಿಯಾಗ್ತಿದ್ರೂ ಜಿಬಿಎ ಹಾಗೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿವೆ. ಮಳೆ ಬಂದಾಗ ಹಾನಿಯಾಗ್ತಿದೆ ಮುಕ್ತಿ ಕೊಡಿಸಿ ಎಂದು ಜನ ಕೇಳಿಕೊಂಡ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಮಳೆ ಬಂದು ಪ್ರವಾಹ ಆಗಿ ಜನರು ಶಾಪ ಹಾಕಿದ್ರೂ ಸ್ಥಳಕ್ಕೆ ಬಂದು ಸರಿ ಮಾಡುವ ಗೋಜಿಗೆ ಹೋಗ್ತಿಲ್ಲ ಅಧಿಕಾರಿಗಳು. ರಾಜ್ಯ ಸರ್ಕಾರ ಹಾಗೂ ಜಿಬಿಎ ನಿರ್ಲಕ್ಷ್ಯಕ್ಕೆ ತೆರಿಗೆದಾರರು ಆಕ್ರೋಶಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದ ಸಮಸ್ಯೆ ಇದ್ರೂ ಸರ್ಕಾರ ಮಾತ್ರ ಪರಿಹಾರ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಮಳೆಯಾದ್ರೂ ಪ್ರವಾಹ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ಬೆಂಗಳೂರಿನಲ್ಲಿ ಮಳೆಯಿಂದ ಅಪಾಯ ತಂದುಕೊಳ್ಳುವ 226 ಸ್ಥಳಗಳನ್ನು ಗುರುತು ಮಾಡಲಾಗಿದೆ. 226 ಸ್ಥಳಗಳ ಪೈಕಿ 109 ಸ್ಥಳಗಳು ತಗ್ಗು ಪ್ರದೇಶದಲ್ಲಿ ಇದ್ದರೆ ಉಳಿದ 117 ಸ್ಥಳಗಳು ರಸ್ತೆ, ಅಂಡರ್ ಪಾಸ್​ ಹಾಗೂ ಕೆಲವು ಜಂಕ್ಷನ್​ಗಳು ಆಗಿವೆ. ಯಾವ್ಯಾವ ಭಾಗದಲ್ಲಿ ಮಳೆಯಿಂದ ಅಪಾಯದ ಎದುರಾಗುತ್ತದೆ ಅನ್ನೋದನ್ನು ನೋಡೋದಾರೆ ಪೂರ್ವ ಬೆಂಗಳೂರು ಭಾಗದಲ್ಲಿ 61, ಪಶ್ಚಿಮ ಬೆಂಗಳೂರು ಭಾಗದಲ್ಲಿ 40, ದಕ್ಷಿಣ ಬೆಂಗಳೂರು ಭಾಗದಲ್ಲಿ 40, ಯಲಹಂಕ ಭಾಗದಲ್ಲಿ 11, ಮಹದೇವಪುರ ಭಾಗದಲ್ಲಿ 24, ಬೊಮ್ಮನಹಳ್ಳಿ ಭಾಗದಲ್ಲಿ 24, ರಾಜರಾಜೇಶ್ವರಿ ನಗರ ಭಾಗದಲ್ಲಿ 23, ದಾಸರಹಳ್ಳಿ ಭಾಗದಲ್ಲಿ 3 ಸ್ಥಳಗಳಲ್ಲಿ ಮಳೆಯಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಮಹದೇವಪುರ ಭಾಗದಲ್ಲಿ ಸಾಯಿ ಲೇಔಟ್, ರೇನ್‌ಬೋ ಡ್ರೈವ್ ಲೇಔಟ್, ಕಾಡುಬೀಸನಹಳ್ಳಿ, ವರ್ತೂರು, ಪಣತ್ತೂರು ಅಂಡರ್‌ಪಾಸ್, ಇಬಲೂರು ಜಂಕ್ಷನ್, ಬೊಮ್ಮನಹಳ್ಳಿ, ಸಿಲ್ಕ್ ಬೋರ್ಡ್ ಜಂಕ್ಷನ್, ಹೆಚ್‌ಎಸ್‌ಆರ್ ಲೇಔಟ್‌, ಕೋರಮಂಗಲ, ಬಿಸ್ಮಿಲ್ಲಾ ನಗರ, ರಾಜರಾಜೇಶ್ವರಿ ನಗರ, ಆರ್.ಆರ್. ನಗರ ಆರ್ಚ್, ಸುಮ್ಮನಹಳ್ಳಿ ಜಂಕ್ಷನ್, ವೃಷಭಾವತಿ ವ್ಯಾಲಿ ಪ್ರದೇಶ, ಕೆಂಗೇರಿ, ಪೂರ್ವ ಭಾಗದಲ್ಲಿ ಕೋರಮಂಗಲ, ಶಾಂತಿನಗರ, ಬನಶಂಕರಿ ಸಿಗ್ನಲ್, ಯಲಹಂಕ ಭಾಗದಲ್ಲಿ ವಿದ್ಯಾರಣ್ಯಪುರ, ಅಲ್ಲಾಲಸಂದ್ರ, ಕೋಗಿಲು ಜಂಕ್ಷನ್​ನಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇನ್ನುಳಿದಂತೆ ಕೆ.ಆರ್. ಪುರಂ ರೈಲ್ವೆ ಸ್ಟೇಷನ್, ಕುಮಾರಸ್ವಾಮಿ ಲೇಔಟ್, ಸರ್ಜಾಪುರ ಕೈಗಾರಿಕಾ ಪ್ರದೇಶಗಳು, ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲೂ ಸಮಸ್ಯೆ ಆಗುತ್ತದೆ ಎಂದು ಅಂದಾಜಿಸಲಾಗಿದೆ.

Related posts

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ.. ಹೌದು ನಮ್ಮ ತಪ್ಪು ಎಂದು ಒಪ್ಪಿಕೊಂಡ ಸಚಿವರು..

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot

Farmers Suicide; ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ.. ಒಂದೇ ದಿನ ಇಬ್ಬರು ಸಾವು.. ಆಕ್ರೋಶ

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin