The Public Spot
ರಾಜ್ಯ

ಹಿರಿಯ ಕಾರ್ಮಿಕ ಹೋರಾಟಗಾರ ಅನಂತ್‌ ಸುಬ್ಬರಾವ್‌ ಇನ್ನಿಲ್ಲ.. ದೇಹವೂ ದಾನ..

ಬೆಂಗಳೂರಿನ ವಿಜಯನಗರ ನಿವಾಸದಲ್ಲಿ 85 ವರ್ಷ ವಯಸ್ಸಿನ ಹಿರಿಯ ಹೋರಾಟಗಾರ ಅನಂತ ಸುಬ್ಬರಾವ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅನಂತ್ ಸುಬ್ಬರಾವ್ ನಿಧನರಾಗಿದ್ದು, ವಿಜಯನಗರ ನಿವಾಸದಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ರಾತ್ರಿ ವ್ಯವಸ್ಥೆ ಮಾಡಲಾಗಿತ್ತು. 1960ರ ದಶಕದಲ್ಲಿ ಕಾರ್ಮಿಕ ಸಂಘಕ್ಕೆ ಬಂದಿದ್ದ ಆನಂತ್ ಸುಬ್ಬರಾವ್, ಸಾಕಷ್ಟು ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ರು. ನಿಧನರಾದ ಬಳಿಕವೂ ಯಾವುದೇ ಸಂಪ್ರದಾಯ ಪಾಲಿಸಿ ಅಂತ್ಯಕ್ರಿಯೆ ಮಾಡಬಾರದು ಅಂತ ಹೇಳಿದ್ದರಿಂದ, ಅನಂತ್‌ ಸುಬ್ಬರಾವ್‌ ಅವರ ದೇಹ ದಾನ ಮಾಡುವ ಬಗ್ಗೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಕಾರ್ಮಿಕ ಮುಖಂಡ ಅನಂತ್‌ ಸುಬ್ಬರಾವ್‌ ಮೃತದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ನೀಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಇಂದು ಬೆಳಗ್ಗೆ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮಲ್ಲೇಶ್ವರದ ಘಾಟೆ ಭವನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅನಂತ್‌ ಸುಬ್ಬರಾವ್‌ ಅವರ ಪುತ್ರಿ ಜ್ಯೋತಿ ತಿಳಿಸಿದ್ದಾರೆ. ಇನ್ನು ಅನಂತ್‌ ಸುಬ್ಬರಾವ್‌ ಅವರ ಅಂಗಾಂಗಗಳನ್ನು ಯಾರಿಗೆ ಅಗತ್ಯವಿದೆಯೋ ಅವರಿಗೆ ಅವರ ಅಂಗಾಗವನ್ನು ವೈದ್ಯರೇ ನಿರ್ಧರಿ ನೀಡಲಿ ಎಂದಿದ್ದಾರೆ. ಇನ್ನು ಸಾರಿಗೆ ನೌಕರರು ಇವತ್ತು ಪ್ರತಿಭಟನೆಗೆ ಕರೆ ನೀಡಿದ್ರು. ಸಾರಿಗೆ ನೌಕರರ ಗೌರವಾಧ್ಯಕ್ಷರಾಗಿದ್ದ ಅನಂತ್‌ ಸುಬ್ಬರಾವ್‌ ಅವರ ನಿಧನದಿಂದ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ.

ಎಲ್‌ಐಸಿ ನೌಕರರ ಸಂಘವನ್ನೂ ಉದ್ಯೋಗಿ ನಾಯಕರಾಗಿ ಅನಂತ್‌ ಸುಬ್ಬರಾವ್‌ರ ಮುನ್ನಡೆಸಿದರು. ಭಾರತೀಯ ಕಮ್ಯುನಿಸ್ಟ್ ಪಕ್ಷದ (CPI) ನಾಯಕರಾಗಿದ್ದರು. ಸಿಪಿಐ ಮೂಲಕ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದರು. ಕರ್ನಾಟಕದಲ್ಲಿ ಎಐಟಿಯುಸಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಖ್ಯಾತಿಯೂ ಅನಂತ್‌ ಸುಬ್ಬರಾವ್‌ ಹೆಸರಿನಲ್ಲಿದೆ. ಅನಂತ್‌ ಸುಬ್ಬರಾವ್‌ ನಾಯಕತ್ವದಲ್ಲಿ, ಎಐಟಿಯುಸಿ ಸ್ಕೀಮ್ ವರ್ಕರ್‌ಗಳು ಮತ್ತು ಸಾರ್ವಜನಿಕ ಸಾರಿಗೆಯಂತಹ ಹೊಸ ಕ್ಷೇತ್ರಗಳಿಗೆ ವಿಸ್ತರಿಸಿತು. ಐಟಿಸಿ, ಮೈಕೋ ಬಾಷ್ ಸೇರಿದಂತೆ ವಿವಿಧ ಕೈಗಾರಿಕಾ ಸಂಘಗಳನ್ನು ಮುನ್ನಡೆಸಿದರು. ಕರ್ನಾಟಕದ ಸಾರ್ವಜನಿಕ ಸಾರಿಗೆ ಕಾರ್ಮಿಕರಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದರು.

ಸಾರಿಗೆ ನೌಕರರ ಮುಷ್ಕರದ ಸಂದರ್ಭದ ಹಲವು ಬಾರಿ ಅನಂತ್‌ ಸುಬ್ಬರಾವ್‌ ಅವರು ಜೈಲಿಗೂ ಹೋಗಿದ್ದರು. ಜನವರಿ 2026 ರವರೆಗೆ ಅವರು AITUC ಕರ್ನಾಟಕ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪತ್ನಿ ಮತ್ತ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅನಂತ್ ಸುಬ್ಬುರಾವ್ ಪತ್ನಿ ನಾಗರತ್ನ, ಪುತ್ರಿ ರೇಖಾ ಮತ್ತು ಜ್ಯೋತಿ. ಇವರಲ್ಲಿ ಹಿರಿಯ ಪುತ್ರಿ ರೇಖಾ ಅಮೆರಿಕದಲ್ಲಿದ್ದಾರೆ. ಜನವರಿ 30ರಂದು ರೇಖಾ ಬೆಂಗಳೂರಿಗೆ ಬರಲಿದ್ದಾರೆ. ಮಗಳು ಅಮೆರಿಕದಿಂದ ಬಂದ ಬಳಿಕ ಅನಂತ್‌ ಸುಬ್ಬರಾವ್‌ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಿದ್ದಾರೆ. ಸಿಎಂ ಸೇರಿದಂತೆ ಸಾರಿಗೆ ಸಚಿವರು ಹಲವು ಗಣ್ಯರಿಂದ ಇಂದು ಅಂತಿಮ ದರ್ಶನ ಪಡೆಯಲಿದ್ದಾರೆ.

Related posts

ಕಸ ಗುಡಿಸುವ ವಾಹನ ಖರೀದಿ ಓಕೆ.. ಬಾಡಿಗೆಗೆ ಕೊಡೋದು ಯಾಕೆ..? JDS ಆಕ್ರೋಶ..

Publicspot

Veerashaiva Lingayat; ಲಿಂಗಾಯತ ಬೇರೆ ಅಲ್ಲ.. ವೀರಶೈವ ಬೇರೆ ಅಲ್ಲ.. ನಾವಿಬ್ಬರೂ ಒಂದೇ.. ಮತ್ತೆ ಗೊಂದಲ

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin

ಕಾಡು ಪ್ರಾಣಿಗಳು – ಮಾನವ ಸಂಘರ್ಷ ಹೆಚ್ಚಳ.. ಸರ್ಕಾರದ ಮುಂದಿನ ನಡೆ ಏನು..?

Publicspot

14 ವರ್ಷದ ಮಗಳನ್ನು ಕೊಂದು ಜೀವ ಬಿಟ್ಟ ನತದೃಷ್ಟ ಹೆಣ್ಣು!!

Publicspot