The Public Spot
ಕ್ರೀಡೆ

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

ಟಿ-20 ವಿಶ್ವ ಕಪ್‌ನಲ್ಲಿ ಭಾರತ ಸೆಮಿಫೈನಲ್‌ಗೆ ಹಲ್ಲೆ ಹಾಕಿದೆ. ಸೂಪರ್ 8ರ ಹಂತದಲ್ಲಿ ಸೌತ್‌ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ ಸೋಲುಂಡು ಆತಂಕವನ್ನು ಭಾರತೀಐರ ಎದೆಗೆ ಇಳಿಸಿದ್ದ ಟೀಂ ಇಂಡಿಯಾ ಆಟಗಾರರು, ಜಿಂಬಾಂಬ್ವೆ ವಿರುದ್ಧ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಕುತೂಹಲ ಮೂಡಿಸಿದ್ದರು. ಆ ಬಳಿಕ ನಿನ್ನೆ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ. ಮಾರ್ಚ್ 5ರಂದು ಇಂಗ್ಲೆಂಡ್‌ ಜೊತೆಗೆ ನಡೆಯುವ ಹಣಾಹಣಿಯಲ್ಲಿ ಸೆಣಸಾಡಲಿದ್ದಾರೆ.

ಕೋಲ್ಕತ್ತಾದ ಈಡನ್​ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಸೆಮೀಸ್‌ಗೆ ಲಗ್ಗೆಯಿಟ್ಟಿದೆ. ಟಾಸ್‌ ಗೆದ್ದು ಮೊದಲಿಗೆ ಫೀಲ್ಡಿಂಗ್‌ ಆಯ್ದುಕೊಂಡಿದ್ದ ಭಾರತ ವಿಂಡೀಸ್‌‌ ಕಟ್ಟಿಹಾಕುವಲ್ಲಿ ವಿಫಲವಾಗಿತ್ತು. 20 ಓವರ್‌ಗಳಲ್ಲಿ ವಿಂಡೀಸ್‌ ದಾಂಡಿಗರು 4 ವಿಕೆಟ್‌ ನಷ್ಟಕ್ಕೆ 195 ರನ್‌ ಬಾರಿಸಿದ್ದರು. 196 ರನ್‌ಗಳ ಬೃಹತ್‌ ಮೊತ್ತ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಸಂಜು ಸ್ಯಾಮನ್ಸ್‌ 97 ರನ್‌ ಸಿಡಿಸಿ ಅತ್ಯುತ್ತಮ ಆಟವಾಡಿದ್ದು, ಭಾರತ 5 ವಿಕೆಟ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಲು ಸಹಕಾರಿ ಆಯ್ತು. ಈ ಗೆಲುವಿನ ಮೂಲಕ ಭಾರತ ಸೆಮಿಫೈನಲ್‌‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಐಸಿಸಿ ಟಿ-20 ವಿಶ್ವಕಪ್‌ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ವಿಶ್ವಕಪ್‌ನಲ್ಲಿ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಸೌತ್‌ ಆಫ್ರಿಕಾ ವರ್ಸಸ್‌ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ವರ್ಸಸ್‌ ಭಾರತ ಸೆಮೀಸ್‌ನಲ್ಲಿ ಪೈಪೋಟಿ ನಡೆಸಲಿವೆ. ಮೊದಲ ಸೆಮಿ ಫೈನಲ್‌ ಪಂದ್ಯವನ್ನು ಮಾರ್ಚ್‌ 4 ರಂದು ಕೊಲ್ಕತ್ತಾದ ಈಡನ್‌ ಗಾರ್ಡ್‌ನ್‌ ಮೈದಾನದಲ್ಲಿ ಆಡಲಿದ್ದು, 2ನೇ ಸೆಮಿ ಫೈನಲ್‌ ಪಂದ್ಯವನ್ನು ಇಂಗ್ಲೆಂಡ್‌ ಹಾಗೂ ಭಾರತ ತಂಡ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿ ಆಗಲಿದೆ. ಈ 2 ಪಂದ್ಯಗಲ್ಲಿ ಗೆಲ್ಲುವ ತಂಡಗಳು ಮಾರ್ಚ್‌ 8ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯುಂನಲ್ಲಿ ಫೈನಲ್‌ನಲ್ಲಿ ಸೆಣಸಲಿವೆ.

ವಿಶೇಷ ಅಂದ್ರೆ ಭಾರತ ತಂಡ ಟಿ-20 ವಿಶ್ವಕಪ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ರನ್‌‌ ವಿರುದ್ಧ ಗೆಲುವು ಸಾಧಿಸಿದ್ದು, ದಾಖಲೆ ಆಗಿದೆ. ವಿಂಡೀಸ್ ವಿರುದ್ಧ 196 ರನ್‌ಗಳ ದಾಖಲೆಯ ರನ್ ಬೆನ್ನತ್ತಿ ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಭಾರತ ಕ್ರಿಕೆಟ್‌ ತಂಡ 6ನೇ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡುವುದಕ್ಕೆ ಸಿದ್ಧವಾಗಿದೆ. ಶ್ರೀಲಂಕಾ ಹಾಗೂ ಭಾರತ ಜಂಟಿಯಾಗಿ ಟಿ-20 ವಿಶ್ವಕಪ್‌ ಆಯೋಜನೆ ಮಾಡಿದ್ದು, ಈಗಾಗಲೇ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಭಾರತದ ಬದ್ಧ ವೈರಿಯಾದ ಪಾಕಿಸ್ತಾನ ಕೂಡ ಸೂಪರ್‌ 8 ಹಂತದಲ್ಲೇ ಸೋತು ಸುಣ್ಣವಾಗಿದೆ. ಭಾರತ ಕೂಡ ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲುಂಡು ಹೊರ ಬೀಳುತ್ತದೆ ಎಂದು ಕಾಯುತ್ತಿದ್ದ ಪಾಕ್‌ ಪ್ರೇಮಿಗಳಿಗೆ ಭಾರತೀಯ ಆಟಗಾರರು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.

Related posts

RCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್​..!

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot

ಪಂಜಾಬ್‌ ವಿರುದ್ಧ RCB ಗೆಲುವಿಗೆ CSK ಫ್ಯಾನ್ಸ್‌ ಪ್ರಾರ್ಥನೆ.. ಯಾಕೆ..?

Publicspot

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

Publicspot