September 30, 2026
The Public Spot
ರಾಜಕೀಯ

ಸರ್ಕಾರ ಸಾಲ ತೀರಿಸಲು ಶಾಸಕರಿಂದ ಸಖತ್‌‌ ಐಡಿಯಾ..?

ರಾಜ್ಯ ಸರ್ಕಾರ ₹7.64 ಲಕ್ಷ ಕೋಟಿ ಸಾಲ ಮಾಡಿದೆ ಅನ್ನೋ ವಿಚಾರ ಬಜೆಟ್‌ ಮಂಡನೆ ವೇಳೆ ಭಾರೀ ಸುದ್ದಿಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಸಾಲ ಮಾಡಿ ಗ್ಯಾರಂಟಿ ಕೊಟ್ಟು ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಆರ್‌ ಅಶೋಕ್‌ ವಾಗ್ದಾಳಿ ಮಾಡಿದ್ದರು. ಆದೆ ಇದೀಗ ಬಜೆಟ್‌ ಅಧಿವೇಶನದಲ್ಲಿ ಜೆಡಿಎಸ್‌ ಶಾಸಕ ಎ. ಮಂಜು ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ವೇಳೆ ಮಾತನಾಡಿದ ಶಾಸಕ ಎ. ಮಂಜು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಿದ್ದು, ರಾಜ್ಯದ ಸಾಲ ಪ್ರಮಾಣವನ್ನು ಶೂನ್ಯಕ್ಕೆ ತರಬಹುದು ಎಂದು ಸಲಹೆ ನೀಡಿದ್ದಾರೆ. ನೈಸ್ ರಸ್ತೆ ಅಕ್ರಮದಲ್ಲಿ ₹5.25 ಲಕ್ಷ ಕೋಟಿ ಹಗರಣ ಆಗಿದೆ ಅಂತ ಟಿ.ಬಿ ಜಯಚಂದ್ರ ನೇತೃತ್ವದ ಜಂಟಿ ಸದನ ಸಮಿತಿ ವರದಿ ಕೊಟ್ಟಿದೆ. ಅರ್ಕಾವತಿ ರೀಡೂ ಅಕ್ರಮದಲ್ಲಿ ₹3.20 ಲಕ್ಷ ಕೋಟಿ ಹಗರಣ ಆಗಿದೆ ಅಂತ ವರದಿ ಕೊಟ್ಟಿದೆ. ಅಕ್ರಮ ಅದಿರು ಸಾಗಣೆ ಸಂಬಂಧ ₹1.25 ಲಕ್ಷ ಕೋಟಿ ರೂಪಾಯಿ ಹಗರಣ ಆಗಿದೆ ಅಂತ ಹೆಚ್.ಕೆ ಪಾಟೀಲ್ ಸಮಿತಿ ವರದಿ ಕೊಟ್ಟಿದೆ.

ಇಷ್ಟೆಲ್ಲಾ ಹಣ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದು, ಸರ್ಕಾರ ಈ ಹಣವನ್ನು ವಸೂಲಿ ಮಾಡುವ ಕೆಲಸ ಮಾಡಬೇಕು. ಸರ್ಕಾರ ಹಣವನ್ನು ವಸೂಲಿ ಮಾಡಿದ್ರೆ, ಇಷ್ಟೆಲ್ಲಾ ಹಣದಿಂದ ರಾಜ್ಯದ ಸಾಲ ಶೂನ್ಯಕ್ಕೆ ತರಬಹುದು. ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಆ ನಿಟ್ಟಿನಲ್ಲಿ ಗಮನ ಕೊಡಬೇಕು ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆ, ಇಡೀ ರಾಜ್ಯದ ಸಾಲವನ್ನು ತೀರಿಸಿ ಶೂನ್ಯಕ್ಕೆ ತರುವುದಕ್ಕೆ ಸಲಹೆ ನೀಡಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಗಮನ ಕೊಡಬೇಕಿದೆ. ಸಮಿತಿ ಮಾಡಿದ್ದು, ಅಕ್ರಮ ಆಗಿದ್ಯಾ ಇಲ್ವಾ ಅನ್ನೋ ಬಗ್ಗೆ ತನಿಖೆ ಮಾಡುವುದಕ್ಕೆ, ಇದೀಗ ಸಮಿತಿ ವರದಿ ಕೊಟ್ಟಿದೆ. ಸಮಿತಿಯ ಶಿಫಾರಸ್ಸನ್ನು ಸರ್ಕಾರ ಜಾರಿ ಮಾಡಿಲ್ಲ ಅನ್ನೋದನ್ನು ಎತ್ತಿ ತೋರಿಸಿದ್ದಾರೆ.

Related posts

ಕಾಂಗ್ರೆಸ್​ ಐದಕ್ಕೆ ಐದೂ ಸ್ಥಾನ ಗೆಲ್ಲುತ್ತಾ..? ಉಚ್ಛಾಟಿತರು ಏನು ಮಾಡಿದ್ರು..?

Publicspot

ಕಾಂಗ್ರೆಸ್‌ ನಾಯಕತ್ವ ಬಿಕ್ಕಟ್ಟು ನಡುವೆ ಸಾವಿರ ದಿನದ ಸಂಭ್ರಮ!

Publicspot

ಸಚಿವ ಸಂಪುಟ ಪುನಾರಚನೆ 31 ಶಾಸಕರ ಒತ್ತಾಯ..! ಇದು ಯಾರ ಯೋಜನೆ..?

Publicspot

ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಒತ್ತಡ.. ಹೈಕಮಾಂಡ್​ ಹಾದಿ ಏನು..?

Publicspot

ನಾನೊಬ್ಬನೇ ಸಿಎಂ ಆಗ್ಬೇಕು ಅಂತ ದೇವರು ಬರೆದಿದ್ದಾನಾ..? ತಪ್ಪಲ್ವಾ..? ಸಿಎಂ ಪ್ರಶ್ನೆ..

Publicspot

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot