The Public Spot
ದೇಶ-ವಿದೇಶ

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

ಮಧ್ಯ ಪ್ರಾಚ್ಯದಲ್ಲಿ ಶುರುವಾಗಿರುವ ಸಂಘರ್ಷಕ್ಕೆ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸ್ತಿಲ್ಲ. ಅಮೆರಿಕ ಕೂಡ ಕದನ ವಿರಾಮ, ಶಾಂತಿ ಸಭೆ ಅಂತಾ ಹೇಳ್ತಾನೆ ಇದೆ. ಆದರೆ ಯಾವುದೂ ಅಂತಿಮ ಆಗ್ತಿಲ್ಲ. ಈ ನಡುವೆ ಪಾಕಿಸ್ತಾನದ ಇಸ್ಲಮಾಬಾದ್​​ನಲ್ಲಿ ಇವತ್ತು 2ನೇ ಸುತ್ತಿನ ಮಾತುಕತೆಗೆ ವೇದಿಕೆ ನಿಗದಿಯಾಗಿದೆ. 14 ದಿನಗಳ ಮಧ್ಯಂತರ ಕದನ ವಿರಾಮ ಏಪ್ರಿಲ್ 22ಕ್ಕೆ ಮುಕ್ತಾಯ ಆಗುತ್ತಿದ್ದು, ಅಷ್ಟರಲ್ಲಿ ಸಂಪೂರ್ಣ ಕದನ ವಿರಾಮ ಘೋಷಣೆ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಮತ್ತೆ ಯುದ್ಧ ಶುರುವಾಗುವ ಆತಂಕ ಎದುರಾಗಿದೆ.

ಪಾಕಿಸ್ತಾನ ರಾಜಧಾನಿ ಇಸ್ಲಮಾಬಾದ್​ನಲ್ಲಿ 2ನೇ ಸುತ್ತಿನ ಸಂಧಾನ ಸಭೆಗೆ ಭಾರೀ ಸರ್ಕಸ್‌ ನಡೀತಿದೆ. ಇಂದು ಸಂಜೆ ಅಮೆರಿಕದಿಂದ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಲಿದ್ದು, ಅಮೆರಿಕದ ಎರಡು ಹೆವಿ ಏರ್‌ಲಿಫ್ಟ್ ವಿಮಾನಗಳು, C-17 ಗ್ಲೋಬ್‌ ಮಾಸ್ಟರ್‌ಗಳು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಗೆ ಬಂದಿಳಿದಿವೆ. 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇಸ್ಲಾಮಾಬಾದ್‌ಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಾದ್ಯಂತ 600 ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದೆ.

ಅಮೆರಿಕ ನಿಯೋಗ ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ, ನೂರ್ ಖಾನ್ ವಾಯುನೆಲೆ ಮತ್ತು ಇಸ್ಲಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಲವಾರು ಸೂಕ್ಷ್ಮ ಪ್ರದೇಶಗಳು ಸೀಲ್ ಮಾಡಲಾಗಿದೆ. ರಾವಲ್ಪಿಂಡಿಯಲ್ಲಿ ಡ್ರೋಣ್​ ಹಾರಾಟ, ಪಾರಿವಾಳ ಹಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ರಾವಲ್ಪಿಂಡಿಯಲ್ಲಿ, ವಿಶೇಷವಾಗಿ ನೂರ್ ಖಾನ್ ವಾಯುನೆಲೆ ಮತ್ತು ಇಸ್ಲಮಾಬಾದ್ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಆದರೆ ಇರಾನ್‌ ಹಾಗೂ ಅಮೆರಿಕ ನಡುವಿನ 2 ಸುತ್ತಿನ ಸಭೆಗೆ ವಿಘ್ನ ಎದುರಾಗಿದ್ದು, ಇಂದು ನಿಗದಿಯಾಗಿದ್ದ ಶಾಂತಿ ಸಭೆಗೆ ನಾವು ಯಾವುದೇ ನಿಯೋಗ ಕಳಿಸಲ್ಲ ಎಂದು ಇರಾನ್​ ಕಡ್ಡಿ ಮುರಿದಂತೆ ಹೇಳಿದೆ. ಪಾಕಿಸ್ತಾನಕ್ಕೆ ನಿಯೋಗ ಕಳುಹಿಸಲ್ಲ ಎಂದಿರುವ IRGC, ಹಾರ್ಮುಜ್‌ ಜಲಸಂಧಿ ಬ್ಲಾಕ್‌ ಮಾಡಿರುವ ಅಮೆರಿಕ ಸೇನೆಗೆ ಸವಾಲು ಎಸೆದಿದೆ. ನಾವು ಹಾರ್ಮುಜ್‌ ಜಲಸಂಧಿ ತೆರೆದರೂ ಅಮೆರಿಕ ಸೇನೆ ದಿಗ್ಬಂಧನ ವಿಧಿಸಿತ್ತು. ಜೊತೆಗೆ ಸಂಧಾನ ಸಭೆಗೂ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ತಮ್ಮ ಸೋಷಿಯಲ್ ಮೀಡಿಯಾ ಟ್ರೂತ್‌ನಲ್ಲಿ ಪೋಸ್ಟ್‌ ಮಾಡಿದ್ದ ಟ್ರಂಪ್​, ಸಂಧಾನಕ್ಕೆ ಒಪ್ಪದಿದ್ರೆ, ಬೃಹತ್​ ಸೇತುವೆಗಳು ಹಾಗೂ ವಿದ್ಯುತ್​ ಸ್ಥಾವರಗಳು ಸೇರಿದಂತೆ ಮೂಲಭೂತ ಸೌಕರ್ಯ ಧ್ವಂಸ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದರು.

ಇದೆಲ್ಲದರ ನಡುವೆ ಅಮೆರಿಕ ಷರತ್ತುಗಳಿಗೆ ನಾವು ಒಪ್ಪಿಗೆ ಕೊಡುವುದಿಲ್ಲ ಎಂದಿರುವ ಇರಾನ್‌, ಸಂಫೂರ್ಣ ಯುರೇನಿಯಂ ನಮ್ಮ ವಶಕ್ಕೆ ಕೊಡಬೇಕು ಎಂದಿದ್ದ ಅಮೆರಿಕಕ್ಕೆ ಸಡ್ಡು ಹೊಡೆದು ನಾವು ಮಾತುಕತೆಗೇ ಬರುವುದಿಲ್ಲ ಎಂದು ಘೋಷಣೆ ಮಾಡಿದೆ. ಅಮೆರಿಕ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಇರಾನ್‌, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಭೆಯಿಂದಲೇ ದೂರ ಉಳಿಯುವ ನಿರ್ಧಾರ ಮಾಡಿದೆ. ಇರಾನ್​ ನಿಯೋಗ ಕಳುಹಿಸದೆ ಅಮೆರಿಕಕ್ಕೆ ತಿರುಗೇಟು ಕೊಟ್ಟಿದೆ IRGC. ಅಮೆರಿಕ ಅಧ್ಯಕ್ಷ ಟ್ರಂಪ್‌ ಎಚ್ಚರಿಕೆಗೆ ಕ್ಯಾರೇ ಎನ್ನದ ಇರಾನ್‌, ಆನೆ ನಡೆದಿದ್ದೇ ದಾರಿ ಎನ್ನುವಂತೆ ತನ್ನ ನಿಲುವು ತಿಳಿಸಿದೆ.

ಇದೀಗ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಬರುತ್ತಾ..? ಇಲ್ವಾ ಅನ್ನೋ ಅನುಮಾನ ದಟ್ಟವಾಗಿದ್ದು, ಇರಾನ್​ ವಿದೇಶಾಂಗ ಇಲಾಖೆ ಸಚಿವ ಪಾಕಿಸ್ತಾನದ ಅಧಿಕಾರಿಗಳ ಜೊತೆಗೆ ಟೆಲಿಫೋನ್​ನಲ್ಲಿ ಸಂಭಾಷಣೆ ಮಾಡಿದ್ದಾರೆ. ಅಮೆರಿಕ ಹಾಕುತ್ತಿರುವ ಷರತ್ತುಗಳಿಗೆ ನಮ್ಮ ಒಪ್ಪಿಗೆ ಇಲ್ಲ, ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ನಾವು ಅಮೆರಿಕಕ್ಕೆ ಸಲಾಂ ಹೇಳಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

Related posts

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

ಇರಾನ್‌ ಸರ್ವೋಚ್ಛ ನಾಯಕ, ಇಸ್ರೇಲ್‌ ಪ್ರಧಾನಿ ಇಬ್ಬರೂ ಇಲ್ಲ.. ಏನಾದ್ರು..?

Publicspot

LPG ತುಂಬಿದ 2 ಹಡಗು ತೆರಳಲು ಬಿಟ್ಟ ಭಾರತದ ಗೆಳಯ ಇರಾನ್‌..!

Publicspot

ಇರಾನ್​ಗೆ ವಾರ್ನಿಂಗ್​ ಮೇಲೆ ವಾರ್ನಿಂಗ್​ ಕೊಡ್ತಿರೋದ್ಯಾಕೆ ಅಮೆರಿಕ..?

Publicspot

ಇರಾನ್​ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುತ್ತಾ..? ಅಮೆರಿಕ ದಾಹಕ್ಕೆ ಮಣಿಯುತ್ತಾ..?

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot