The Public Spot
ದೇಶ-ವಿದೇಶ

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಜಯಭೇರಿ ಬಾರಿಸಿದ ಬಳಿಕ ನಟ ವಿಜಯ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲೇ ಸೆಂಚುರಿ ಹೊಡೆದಿದ್ದಾರೆ. 108 ಸ್ಥಾನ​ಗಳನ್ನ ಪಡೆದುಕೊಂಡು ಬಹುದೊಡ್ಡ ಪಕ್ಷವಾಗಿ ಟಿವಿಕೆ ಪಾರ್ಟಿ ಹೊರಹೊಮ್ಮಿದೆ. ಈಗಾಗಲೇ ಸರ್ಕಾರ ರಚನೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಇಂದು ರಾಜ್ಯಪಾಲರನ್ನು ಭೇಟಿ ಮಾಠಡಿ ವಿಜಯ್ ಹಕ್ಕು ಮಂಡಿಸಲಿದ್ದಾರೆ.

ಟಿವಿಕೆ ಶಾಸಕಾಂಗ ಪಕ್ಷದ ನಾಯಕರಾಗಿ ನಟ ವಿಜಯ್ ಆಯ್ಕೆ ಆಗಿದ್ದು, ತಮಿಳುನಾಡಿನ ಪಣಿಯೂರಿನ ಪಕ್ಷದ ಕಚೇರಿಯಲ್ಲಿ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಸರಳ ಬಹುಮತಕ್ಕೆ ಕೆಲವು ಸ್ಥಾನಗಳು ಕಡಿಮೆ ಆಗಿದ್ದು, ಯಾರೊಂದಿಗೆ ಮೈತ್ರಿ ಮಾಡಿಕೊಳ್ಳೋದು. TVK ಮುಂದಿನ ನಡೆ ಹೇಗಿರಬೇಕು..? ಟಿವಿಕೆಯ 108 ಶಾಸಕರ ಜೊತೆಗೆ ಉಳಿದ ಶಾಸಕರಿಗೆ ಸ್ಥಾನಮಾನ ನೀಡುವುದು ಹೇಗೆ..? ಅನ್ನೋ ಬಗ್ಗೆ ಚರ್ಚೆ ನಡೆಸಲಾಯ್ತು.

ಕಾಂಗ್ರೆಸ್​ನ ಐವರು ಶಾಸಕರು ವಿಜಯ್‌‌ ನೇತೃತ್ವದ ಟಿವಿಕೆ ಪಾರ್ಟಿ ಸೇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಅಧಿಕೃತವಾಗಿ ರಾಜ್ಯಪಾಲರ ಅಂಗಳ ತಲುಪುವ ಹಕ್ಕು ಮಂಡನೆ ಪತ್ರದಲ್ಲಿ ಯಾರ ಯಾರ ಹೆಸರು ಇರಲಿದೆ ಅನ್ನೋ ಬಗ್ಗೆ ಕುತೂಹಲ ಮೂಡಿಸಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆನ್‌ಲೈನ್‌ ಸಭೆ ನಡೆಸಿದ್ದು, ಕಾಂಗ್ರೆಸ್‌‌‌ ನಾಯಕರ ಸಭೆಯಲ್ಲಿ ಟಿವಿಕೆ ಬೆಂಬಲಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯ್ತು. ಸಂವಿಧಾನದ ಆಶಯದಂತೆ ಸರ್ಕಾರ ರಚಿಸಲು TVKಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಿದ್ದಾರೆ.

ಮುಖ್ಯಮಂತ್ರಿ ಆಗಿ ನಟ ವಿಜಯ್‌‌ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ.. ಮೇ 7ರಂದು ಚೆನ್ನೈನ ಜವಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಕಲ ತಯಾರಿ ನಡೆದಿದೆ. ಇಂದು ಖುದ್ದು ಗವರ್ನರ್​ ಭೇಟಿಯಾಗಲಿದ್ದು, ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋಲು ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಟಾಲಿನ್ ರಾಜೀನಾಮೆ ನೀಡಿದ್ದು, ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸಿಎಂ ಸ್ಥಾನಕ್ಕೆ ಸ್ಟಾಲಿನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವಾಲಯದ ಕಚೇರಿಯಲ್ಲಿದ್ದ ಸ್ಟಾಲಿನ್ ಫೋಟೋಗಳನ್ನ ಸಿಬ್ಬಂದಿ ತೆರವು ಮಾಡಿದ್ದಾರೆ..

Related posts

RSS ನೋಂದಣಿ ವಿಚಾರದಲ್ಲಿ ವಾಕ್ಸಮರ.. ಪತ್ರ ಸೋರಿಕೆ ಆಗಿದ್ಯಾ..?

Publicspot

Central Budget; ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಏನಿದೆ ವಿಶೇಷತೆ..?

Publicspot

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

Publicspot

ತಮಿಳುನಾಡಿನಲ್ಲಿ 23ಕ್ಕೂ ಹೆಚ್ಚು ಬಲಿ ಪಡೆದ ಪಟಾಕಿ ಫ್ಯಾಕ್ಟರಿ..

Publicspot

Supreme Court on Waqf; ಕೇಂದ್ರದ ವಕ್ಫ್‌ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್‌ನಲ್ಲಿ ಸಿಹಿ ಕಹಿ..

Publicspot

MODI GIFT FOR INDIANS: ದೇಶವಾಸಿಗಳಿಗೆ ದೀಪಾವಳಿ ಗಿಫ್ಟ್​.. ಏನೇನು ಕಡಿಮೆ ಆಗುತ್ತೆ..?

Publicspot