The Public Spot
ದೇಶ-ವಿದೇಶ

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್‌ ಒಪ್ಕೊಂಡ್ರೆ ಸಾಕಾ..? ಮಕ್ಕಳಿಗೆ ಮಾತ್ರ ಶಿಕ್ಷೆನಾ..?

ದೇಶಾದ್ಯಂತ ನೀಟ್‌ ಪರೀಕ್ಷೆ ರದ್ದು ಮಾಡಲಾಗಿದೆ. NTA ಆಗಿರುವ ತಪ್ಪನ್ನು ಒಪ್ಪಿಕೊಂಡಿದೆ. ಆದರೆ, ಮರು ಪರೀಕ್ಷೆಗೆ ಮಕ್ಕಳು ರೆಡಿ ಆಗಬೇಕಿದೆ. ಯಾರೊ ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಮಕ್ಕಳು ಶಿಕ್ಷೆ ಅನುಭವಿಸುವಂತೆ ಆಗಿದೆ. ಇದು ಓರ್ವ ಪಿಜಿ ಮಾಲೀಕ ಲೀಕ್‌ ಮಾಡುವಷ್ಟು ಸಣ್ಣ ವಿಚಾರ ಅಲ್ಲವೇ ಅಲ್ಲ. ಇದರಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳೇ ಭಾಗಿಯಾಗಿರುತ್ತಾರೆ. ಸಿಬಿಐ ತನಿಖೆಯಲ್ಲಿ ದೊಡ್ಡ ದೊಡ್ಡ ಮಿಕಗಳನ್ನು ಬಲೆಗೆ ಬೀಳಿಸಿದರೆ ಮಾತ್ರ ಸಂಪೂರ್ಣ ನ್ಯಾಯ ಸಿಗುತ್ತದೆ.

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಕೇಸ್‌‌ನ್ನು ರಾಜಸ್ಥಾನದ ವಿಶೇಷ ತನಿಖಾ ತಂಡದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಜೈಪುರದ ಮನೀಶ್ ಯಾದವ್ ಇಡೀ ಹಗರಣದ ಪ್ರಮುಖ ರೂವಾರಿ ಎನ್ನಲಾಗಿದೆ. ಮನೀಷ್ ಯಾದವ್‌ ಸೇರಿ ದೇಶಾದ್ಯಂತ 48 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ದೇಶದ 6 ರಾಜ್ಯಗಳಲ್ಲಿ ಹಗರಣವಾಗಿದ್ದು ಎಲ್ಲಾ ಕಡೆ ಸಿಬಿಐ ಟೀಂ ಆರೋಪಿಗಳಿಗಾಗಿ ಜಾಲಾಡುತ್ತಿದೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್‌ ನಾಸಿಕ್‌‌ನ ಡಾ. ಶುಭಂ ಖೈರ್ನರ್​ ಎಂಬಾತನನ್ನು ​ಅರೆಸ್ಟ್ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಆಗಿರುವ ನಾಸಿಕ್‌‌ನ ಮುದ್ರಣಾಲಯದಿಂದಲೇ ಲೀಕ್ ಆಗಿದೆ ಎನ್ನುವುದು ಖಚಿತವಾಗಿದೆ.

Female police officer arrest naughty teen girl criminal behaving bad. Policeman put handcuffs on teenage thief or crime suspect. Juvenile and underage crime concept. Vector illustration.

ಈ ರೀತಿಯ ಬಹುದೊಡ್ಡ ಹಗರಣ ಆಗಲು ಹೇಗೆ ಸಾಧ್ಯ? ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಪತ್ರಿಕೆ ಲೀಕ್‌ ಮಾಡಿದವರ ಹಿನ್ನೆಲೆ ಏನು..? ದೇಶಾದ್ಯಂತ ಎಷ್ಟು ಕೇಂದ್ರಗಳಲ್ಲಿ ಅಕ್ರಮ ಆಗಿದೆ..? ಜಾಲದ ಹಿಂದಿರುವ ನೆಟ್‌‌ವರ್ಕ್ ಯಾವುದು..? ಮರು ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಾ..? NEET ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತಾ..? NEET ಪರೀಕ್ಷೆಯೇ ಬೇಡ ಎಂಬ ವಾದ ಹೆಚ್ಚಳ ಆಗುವ ಸಾಧ್ಯತೆ ಇರುತ್ತದೆ. ಕೇಂದ್ರೀಕೃತ ವ್ಯವಸ್ಥೆ ಸರಿಯಲ್ಲ ಎಂಬ ವಾದ ಮಾಡುತ್ತಿದ್ದು, ತಮಿಳುನಾಡು ಮಾದರಿಯಲ್ಲೇ ಕರ್ನಾಟಕ ಆಗ್ರಹ ಕೇಳಿ ಬಂದಿದೆ.

ನೀಟ್ ಪರೀಕ್ಷೆ ಸಂಬಂಧ ರಾಜಕೀಯ ಜಟಾಪಟಿಯೂ ಜೋರಾಗಿದೆ. ಕೇಂದ್ರದಲ್ಲಿ ಸಚಿವರಾಗಿರುವ ಕಾರಣಕ್ಕೆ ಕುಮಾರಸ್ವಾಮಿ ನೀಟ್‌ ಪತ್ರಿಕೆ ಸೋರಿಕೆ ಆಗಿ ರದ್ದು ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಾರೆ. ಬೇರೆ ಎಲ್ಲೂ ಆಗಿಲ್ವಾ? ಕರ್ನಾಟಕದಲ್ಲೇ ಆಗಿಲ್ವಾ ಅಂತಾನೂ ಪ್ರಶ್ನೆ ಮಾಡಿದ್ದಾರೆ. ಆದರೆ ನೀಟ್ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಿಸಿ ಮುಟ್ಟಿಸಿದ್ದಾರೆ. ಪ್ರಧಾನಿ ಮೋದಿ ಅವರು ಅಮೃತಕಾಲದಲ್ಲಿ ವಿದ್ಯಾರ್ಥಿಗಳಿಗೆ ವಿಷ ಇಟ್ಟಿದ್ದಾರೆ. ಇದು ಕೇಂದ್ರದ ತಪ್ಪು ಅಷ್ಟೇ ಅಲ್ಲ, ಅಪರಾಧ. ದೇಶದ 22 ಲಕ್ಷ ಮಕ್ಕಳ ಭವಿಷ್ಯದೊಂದಿಗೆ ಆಟ ಆಡ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ ಎಂದಿದ್ದಾರೆ.

ಪ್ರಮುಖ ಆರೋಪಿಗಳನ್ನು ಅರೆಸ್ಟ್‌ ಮಾಡಿ ಕಠಿಣ ಶಿಕ್ಷೆ ಜೊಯತೆ ಸರ್ಕಾರಿ ಉದ್ಯೋಗದಲ್ಲಿ ಇದ್ದರೆ ವಜಾ ಮಾಡುವಂತ ನಿರ್ಧಾರ ತೆಗೆದುಇಕೊಂಡಾಗವ ಮಾತ್ರವೇ ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯ ಎನ್ನಬಹುದು. ಇಲ್ಲದಿದ್ರೆ ಈ ರೀತಿಯ ಹಗರಣಗಳು ನಡೆಯುತ್ತಲೇ ಇರುತ್ತವೆ. ಕೋರ್ಟ್‌ನಲ್ಲಿ ಸ್ಟೇ ತಂದು ಅಕ್ರಮ ಮಾಡುತ್ತಲೇ ಇರುತ್ತಾರೆ ಎನ್ನಬಹುದು.

Related posts

ತಮಿಳುನಾಡಿನಲ್ಲಿ 23ಕ್ಕೂ ಹೆಚ್ಚು ಬಲಿ ಪಡೆದ ಪಟಾಕಿ ಫ್ಯಾಕ್ಟರಿ..

Publicspot

ಇರಾನ್‌ ಸರ್ವೋಚ್ಛ ನಾಯಕ, ಇಸ್ರೇಲ್‌ ಪ್ರಧಾನಿ ಇಬ್ಬರೂ ಇಲ್ಲ.. ಏನಾದ್ರು..?

Publicspot

Central Budget; ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಏನಿದೆ ವಿಶೇಷತೆ..?

Publicspot

ಇರಾನ್‌ ಯುದ್ಧದಿಂದ ಭಾರತಕ್ಕೆ ಏನೆಲ್ಲಾ ಸಮಸ್ಯೆ ಆಗ್ತಿದೆ ಗೊತ್ತಾ..?

Publicspot

Election Commission Deadline: ರಾಹುಲ್‌ ಗಾಂಧಿ ಈಗ ಏನ್‌ ಮಾಡ್ತಾರೆ..? ಉತ್ತರ ಏನು..?

Publicspot

ಕೇರಳಂಗೆ ಕೊನೆಗೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಯ್ಕೆ.. KCV ಗೆ ಹಿನ್ನಡೆ

Publicspot