The Public Spot
ಅಪರಾಧ

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅಂಡ್​ ಗ್ಯಾಂಗ್​ ಜೈಲಿಗೆ ಹೋಗಿದ್ದು ಆಗಿದೆ. ಈ ಪ್ರಕರಣದ ಬಗ್ಗೆ ನಟಿ ರಮ್ಯಾ ರಿಯಾಕ್ಷನ್​ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್​ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶವನ್ನು ಕಟುವಾಗಿ ಟೀಕಿಸಿತ್ತು. ಆಗಲೇ ನ್ಯಾಯ ಸಿಗುವ ನಿರೀಕ್ಷೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದ ನಟಿ ರಮ್ಯಾ, ದರ್ಶನ್​ ಅಭಿಮಾನಿಗಳು ಎನ್ನಲಾದ ಹುಡುಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ದರ್ಶನ್​ ಅಂಡ್​ ಗ್ಯಾಂಗ್​ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ. ಇದೀಗ ರಮ್ಯಾ ಕೊಂಚ ಬೇಸರ ಹೊರಹಾಕಿದ್ದಾರೆ. ಜೊತೆಗೆ ದರ್ಶನ್​ ಜೊತೆಗೆ ಇರುವ ತಂಡ ಸರಿಯಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ವಾಯ್ಸ್​ ನೋಟ್​ ಪ್ರತಿಕ್ರಿಯೆ ನೀಡಿರುವ ರಮ್ಯಾ, ನಾನು ದರ್ಶನ್​ ಜೊತೆಗೆ ಕೆಲಸ ಮಾಡಿದ್ದೇನೆ, ನನಗೆ ಗೊತ್ತಿರುವ ವ್ಯಕ್ತಿ. ದರ್ಶನ್​ ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡರು ಎನಿಸುತ್ತದೆ. ನಾನು ಅವರ ಜೊತೆಗೆ ಕೆಲಸ ಮಾಡುವಾಗ ನನ್ನ ಜೊತೆಗೆ ಕೆಲವೊಂದು ವಿಚಾರ ಹಂಚಿಕೊಂಡಿದ್ದರು. ಎಷ್ಟು ಕಷ್ಟಪಟ್ಟು ಮೇಲೆ ಬಂದೆ ಅನ್ನೋದನ್ನು ಹೇಳಿಕೊಂಡಿದ್ದರು. ಆ ಬಗ್ಗೆ ನನಗೆ ಹೆಮ್ಮೆ ಇದೆ. ಲೈಟ್​ ಬಾಯ್​ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದು ಹೆಮ್ಮೆಯ ವಿಚಾರ. ಇತ್ತೀಚಿನ ನಡವಳಿಕೆ ನೋಡಿ ನನಗೆ ಬೇಸರವೂ ಆಗಿತ್ತು. ಅವರ ಅಕ್ಕಪಕ್ಕದ ಜನರು ಇಲ್ಲ ಎನಿಸುತ್ತದೆ. ಅವರಿಗೆ ಒಳ್ಳೆಯ ದಾರಿ ತೋರಿಸಲು, ಮಾರ್ಗದರ್ಶನ ಮಾಡಲು ಗುಡ್​ ಅಡ್ವೈಸರ್​ ಇರಬೇಕು ಎಂದಿದ್ದಾರೆ.

ಮತ್ತೊಂದು ಕಡೆ ಸುಪ್ರೀಂಕೋರ್ಟ್​ ಆದೇಶ ನೋಡಿದಾಗ ನನಗೆ ರಿಲೀಫ್ ​ಎನಿಸಿತು. ಇತ್ತೀಚಿಗೆ ನಾವು, ನಮ್ಮ ಸಮಾಜ ದಿಕ್ಕು ತಪ್ಪುತ್ತಿದೆ. ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ. ಸೇಫ್ಟಿ ಇಲ್ಲ. ಕಳೆದ ಬಾರಿ ಸುಪ್ರೀಂಕೋರ್ಟ್​ ತೀರ್ಪು ಬಗ್ಗೆ ಮಾತನಾಡಿದ್ದಕ್ಕೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ಟ್ರೋಲ್ಸ್​ ಮಾಡಿದ್ದರು. ಸಮಾಜದಲ್ಲಿ ಒಂದು ಕಾನೂನು, ನೀತಿ ನಿಯಮಗಳು ಇರುತ್ತವೆ. ಅವುಗಳನ್ನು ಪಾಲಿಸಬೇಕು. ನಾವೇ ಕಾನೂನು ಕೈಗೆ ತೆಗೆದುಕೊಂಡರೆ ಈ ರೀತಿಯ ಕೆಟ್ಟ ಕೆಟ್ಟ ಕೆಲಸಗಳು ಆಗುತ್ತವೆ. ಸುಪ್ರೀಂಕೋರ್ಟ್​ ಆದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಆಗಿದೆ. ನ್ಯಾಯ ಅಂದ್ರೆ ನ್ಯಾಯ ಅಷ್ಟೆ. ದೊಡ್ಡವರೇ ಇರಲಿ, ಚಿಕ್ಕವರೇ ಇರಲಿ.

ಒಮ್ಮೊಮ್ಮೆ ನಮಗೆ ಅನಿಸುತ್ತದೆ, ನ್ಯಾಯ ಸಿಗಲ್ಲ, ತುಂಬಾ ವರ್ಷ ಕಾಯಬೇಕು ಎಂದು. ಆದರೆ ನ್ಯಾಯಾಂಗ ವ್ಯವಸ್ಥೆಯೇ ಹಾಗೆ. ಆದರೆ ನಾವು ನಂಬಿಕೆ ಇಟ್ಟುಕೊಳ್ಳಬೇಕು. ದೊಡ್ಡ ಮಟ್ಟದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಹೋಗಿದೆ. ಆದರೆ ನನಗೆ ಬೇಸರವೂ ಆಗಿದೆ, ಖುಷಿಯೂ ಆಗಿದೆ. ಇದೊಂದು ಉತ್ತಮ ಆದೇಶ, ಮುಂದಿನ ಭವಿಷ್ಯದ ಸಮಾಜಕ್ಕೆ ಈ ಆದೇಶ ಸಹಕಾರಿ ಆಗಲಿದೆ ಎಂದಿದ್ದಾರೆ. ಒಟ್ಟಾರೆ ಈ ಪ್ರತಿಕ್ರಿಯೆ ನೋಡಿದಾಗ ಟ್ರೋಲರ್ಸ್​ಗಳಿಗೆ ರಮ್ಯಾ ಹೆದರಿದ್ರಾ ಅಂತಾ ಅನುಮಾನ ಬರೋದು ಸಹಜ. ಆದರೆ ರಮ್ಯಾ ಮನಸ್ಸಿನಿಂದ ಮಾತನಾಡಿದ್ದಾರೆ. ನಮ್ಮ ಜೊತೆಗಿದ್ದವರು ನಮಗೆ ಇಷ್ಟ ಇಲ್ಲದೇ ಇದ್ದರೂ ಅವರಿಗೆ ಕೆಟ್ಟದಾಯ್ತು ಅಂದಾಗ ಅಯ್ಯೋ ಎನುವುದು ಧರ್ಮ. ನಮ್ಮ ಶತ್ರುವಿಗೇ ಸಮಸ್ಯೆ ಆಯ್ತು ಅಂದಾಗ ಅಯ್ಯೋ ಪಾಪ ಎನ್ನುವುದು ಮಾನವೀಯತೆ. ಅದನ್ನೇ ರಮ್ಯಾ ಮಾಡಿದ್ದಾರೆ ಎನಿಸುತ್ತದೆ.

Related posts

Mysore Girl Rape; ಬಲೂನ್​ ಮಾರಾಟ ಮಾಡ್ತಿದ್ದ ಪುಟ್ಟ ಕಂದನ ಮೇಲೆ ಅತ್ಯಾಚಾರ, ಕೊಲೆ..!!

Publicspot

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

ಮದುವೆಗೆ ಹೆಣ್ಣುಗಳು ಸಿಗದೆ ಬಳಲುತ್ತಿರುವಾಗ ವಂಚಕರ ಮಾಸ್ಟರ್​ ಪ್ಲ್ಯಾನ್​..!

Publicspot

ತಂದೆ ತಾಯಿಗೆ ಚಾಕು ಇರಿದ ಮಗ.. ಅಮೆರಿಕದಲ್ಲಿ ಓದಿಸಿದ್ದಕ್ಕೂ ಸಾರ್ಥಕ..

Publicspot

ಸಾವಿತ್ರಿ ಗಂಡನ ಸಹವಾಸ ಬಿಟ್ಟು ಹೋದಳಾ..? ಕೊಲೆ ಆದಳಾ..? ಏನೀ ಅನುಮಾನ..?

Publicspot