The Public Spot
ಅಪರಾಧ

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

ಬಾಗಲಕೋಟೆ: ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತ ಬಾಲಕನೇ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಇದೀಗ ಎರಡು ತಿಂಗಳ ಗರ್ಭಿಣಿ ಆಗಿದ್ದಾಳೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪೋಕ್ಸೊ ಆ್ಯಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರೂ ಅಪ್ರಾಪ್ತರು ಈ ಹಿಂದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು ಅನ್ನೋ ಮಾಹಿತಿ ಇದೆ.

ಕಂದಗಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆ ಓದುತ್ತಿದ್ದರು. ಅಪ್ರಾಪ್ತೆ 7ನೇ ತರಗತಿಯಲ್ಲಿ ಇದ್ದಾಗ ಬಾಲಕ 8ನೇ ತರಗತಿ ಓದುತ್ತಿದ್ದ. ಸದ್ಯ ಅಪ್ರಾಪ್ತನಿಗೆ 17 ವರ್ಷ ವಯಸ್ಸಾಗಿದ್ದು, ಅಪ್ರಾಪ್ತೆಗೆ 16 ವರ್ಷ ವಯಸ್ಸು ಆಗಿದೆ. ಅಪ್ರಾಪ್ತೆಯ ತಂದೆಯಿಂದ ಅಪ್ರಾಪ್ತನ ವಿರುದ್ಧ FIR ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ನೀಡುವುದೂ ಕೂಡ ಕಾನೂನು ಬಾಹಿರವಾಗಿದೆ. ಹೀಗಾಗಿ ಯಾವುದೇ ಮಾಹಿತಿ ಕೊಡುವುದಿಲ್ಲ.

ಶಾಲಾ ಹಂತದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದು, ಇಬ್ಬರೂ ಅಪ್ರಾಪ್ತರಾಗಿದ್ದಾರೆ. ಪೊಲೀಸರು ಮುಂದೆ ಯಾವ ಕ್ರಮ ತೆಗೆದುಕೊಳ್ತಾರೆ ಅನ್ನೋದಕ್ಕೂ ಮುಂಚೆ, ಈ ರೀತಿಯ ಅನಾಹುತ ನಡೆಯುವುದನ್ನು ತಡೆಯುವ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ. ಲೈಂಗಿಕ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಲೈಂಗಿಕ ಜ್ಞಾನವನ್ನು ಹೆಚ್ಚಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಸರ್ವೇ ಸಾಮಾನ್ಯ ಎನ್ನುವಂತಾದರೂ ಅಚ್ಚರಿಯಿಲ್ಲ.

Related posts

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

Publicspot

ಲಿವ್‌ ಇನ್‌ ರಿಲೇಷನ್‌ಶಿಪ್‌‌‌ನಲ್ಲಿ ಯುವತಿಯನ್ನು ಕೊಂದನಾ ಅಂಕಲ್‌..?

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

husband Suicide : ಗಂಡನ ಮನೆ ಬಿಟ್ಟ ಹೆಂಡತಿ ತವರು ಸೇರಿದ್ಲು.. ನದಿಗೆ ಹಾರಿದ ಗಂಡ..

Publicspot