ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ತೀರ್ಮಾಮ ಮಾಡಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಸಚಿವ ಕೃಷ್ಣ ಬೈರೇಗೌಡರು ಹೈಕಮಾಂಡ್‌ಗೆ ಹತ್ತಿರ ಇದ್ದಾರೆ ಅವರಿಗೆ ಗೊತ್ತಿರಬಹುದು. ರೀ ಶಫಲ್ ಮಾಡ್ತೀನಿ ಅಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಸಚಿವರಾಗಿದ್ದ ರಾಜಣ್ಣ, ನಾಗೇಂದ್ರ ಅವರದ್ದು ಏನೇನೋ ಆಗೋಯ್ತು. ನವೆಂಬರ್ 21 ಕ್ಕೆ ಎರಡೂವರೆ ವರ್ಷ ಆಗುತ್ತದೆ. ಹೈಕಮಾಂಡ್ ಈಗ ರೀಶಫಲ್‌ಗೆ ಒಪ್ಪಿದ್ದಾರೆ ಎನಿಸುತ್ತದೆ. ನವೆಂಬರ್ 20 ರಿಂದ 30 ರ ಒಳಗಾಗಿ ಈ ಬಗ್ಗೆ ಡಿಸ್ಕಷನ್ ಆಗುತ್ತದೆ. ಹೈಕಮಾಂಡ್ ಕೂಡ ರೀ ಶಫಲ್‌ಗೆ ಮನಸ್ಸು ಮಾಡಿದ್ದಾರೆ ಅಂತ ನನಗೂ ಗೊತ್ತಾಗಿದೆ. ನಮ್ಮ ಬಳಿ ಪುನರ್ ರಚನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಏನೂ ಮಾತಾಡಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆ ವಿಚಾರವಾಗಿ ಈಗಾಗಲೇ ಸಿಎಂ, ಡಿಸಿಎಂ ಮಾತನಾಡಿದ್ದಾರೆ. ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಅದು ನಾವು ಮಾತನಾಡುವ ವಿಚಾರ ಅಲ್ಲ. ಇಬ್ಬರೂ ಬಹಳ ಕಷ್ಟ ಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ವಿಪಕ್ಷಗಳು ಶತಾಯ ಗತಾಯ ಅವರ ನಡುವೆ ಏನಾದ್ರೂ ಮಾಡಬೇಕು ಅಂತ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೈಕಮಾಂಡ್, ಸಿಎಂ, ಡಿಸಿಎಂ ನಡುವೆ ಮಾತ್ರ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗಿರೋದು. ಅದನ್ನು ಬಿಟ್ರೆ ಇದು ಯಾವುದೇ ಕಾರಕ್ಕೂ ಬೀದಿಗೆ ಬರೋದಿಲ್ಲ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರು ಬದಲಾಗ್ತಾರೆ ಅಂತ ಹೇಳಿ ಒಂದೂವರೆ ವರ್ಷ ಆಯ್ತು. ಬಹಳ ಕೆಟ್ಟ ಪರಿಸ್ಥಿತಿ ಬಿಜೆಪಿಯಲ್ಲಿ ಇದೆ. ವಿಜಯೇಂದ್ರ, ಆರ್ ಅಶೋಕ್ ಚೆನ್ನಾಗಿದ್ದರಾ..? ಬೊಮ್ಮಾಯಿ- ವಿಜಯೇಂದ್ರ ಚನ್ನಾಗಿದ್ದಾರಾ..? ನಾವಾದ್ರೂ ಒಂದು ಕಡೆ ಸೇರಿ ಟೀ ಕುಡಿತೀವಿ, ಮಾತಾಡ್ತೀವಿ ಎಂದಿದ್ದಾರೆ.

ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ, ರಾಜ್ಯದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಾರೆ. ಹೈಕಮಾಂಡ ಹೇಳಿದ ಮೇಲೆ ವಿಸ್ತರಣೆ ಮಾಡುತ್ತಾರೆ. ಹೊಸಬರಿಗೆ ಸಚಿವ ಸ್ಥಾನ ನೀಡುವುದು ಸಿಎಂಗೆ ಹಾಗೂ ಡಿಸಿಎಂಗೆ ಬಿಟ್ಟ ವಿಚಾರ ಎಂದಿದ್ದಾರೆ. ಶಾಸನ ಎನ್.ಹೆಚ್.ಕೊನರಡ್ಡಿ ಸಚಿವ ಸ್ಥಾನಕ ಆಕಾಂಕ್ಷಿ ಅನ್ನೋ ವಿಚಾರವಾಗಿ ಮಾತನಾಡಿ, ಕೊನರಡ್ಡಿ ಅಷ್ಟೇ ಅಲ್ಲ ಎಲ್ಲರೂ ರೇಸ್ ನಲ್ಲಿ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ ನಾನು ಭವಿಷ್ಯ ನುಡಿಯಲು ಆಗಲ್ಲ ಎಂದಿದ್ದಾರೆ.. ಬದಲಾವಣೆ ಆಗಬೇಕಾ..? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಲಾಡ್, ಕೇಂದ್ರದಲ್ಲಿ ನಿತೀನ್ ಗಡ್ಕರಿ ಪಿಎಂ ಆದರೆ ನಮಗೆ ಅನುಕೂಲ. ರಾಜ್ಯದಲ್ಲಿ ಯಥಾಸ್ಥಿತಿ ಅಥವಾ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಸಿಎಂ ಬದಲಾವಣೆ ಕುರಿತು ಯಾರೂ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಈ ಬಾರಿ ಸಚಿವ ಆಗೋದು ಪಕ್ಕಾ, ಯಾವುದೇ ಅನುಮಾನ ಇಲ್ಲ. ಕ್ಯಾಬಿನೆಟ್ ಪುನಾರಚನೆ ಆದ್ರೆ ನನಗೆ ಮೊದಲ ಆದ್ಯತೆ. ನಾನು ಟವಲ್ ಹಾಕಿದ್ಮೇಲೆ, ನನ್ನ ಕುರ್ಚಿ ಮೇಲೆ ಬೇರೆ ಯಾರೂ ಟವಲ್ ಹಾಕೋಕೆ ಆಗಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಎಂಎಸ್ಐಎಲ್ ನಿಗಮದ ಅಧ್ಯಕ್ಷ, ಶಾಸಕ ಪುಟ್ಟರಂಗಶೆಟ್ಟಿ ಪುನಾರಚನೆ ಬಗ್ಗೆ ದೊಡ್ಡವರೇ ಹೇಳಿದ್ದಾರೆ ಚಿಕ್ಕವರು ಏನ್ ಹೇಳೋದು. ಸಿಎಂ ಸಿದ್ದರಾಮಯ್ಯ ಎರಡನೇ ಹೈಕಮಾಂಡ್ ಇದ್ದಂತೆ. ಪುನಾರಚನೆಯಾದ್ರೆ ನಾನು ಸಚಿವನಾಗ್ತೀನಿ ಅಂತಾ ಅಂದ್ಕೊಡಿದ್ದೀನಿ. ಕಳೆದ ಬಾರಿ ಕಡೆ ಕ್ಷಣದಲ್ಲಿ ಮಿಸ್ ಆಗಿತ್ತು. ಆದ್ರೆ ಈ ಬಾರಿ ಆ ರೀತಿ ಆಗಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.


