The Public Spot
Uncategorizedದೇಶ-ವಿದೇಶ

ಇರಾನ್​ಗೆ ವಾರ್ನಿಂಗ್​ ಮೇಲೆ ವಾರ್ನಿಂಗ್​ ಕೊಡ್ತಿರೋದ್ಯಾಕೆ ಅಮೆರಿಕ..?

ಇರಾನ್‌ ಯುದ್ಧ ನಿಲ್ಲುವ ಲಕ್ಷಣಗಳು ಅಮೆರಿಕ ಕಡೆಯಿಂದ ಕಾಣಿಸಿದ್ರೂ ಇರಾನ್​ ಕಡೆಯಿಮದ ಜಪ್ಪಯ್ಯ ಎಂದರೂ ಕಾಣಿಸ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಡೆಡ್‌ಲೈನ್‌ ಮೇಲೆ ಡೆಡ್‌‌ಲೈನ್‌ ಕೊಡ್ತಾನೇ ಇದ್ದಾರೆ. ಆದರೆ ಇರಾನ್‌ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಇದೀಗ 24 ಗಂಟೆಗಳ ಕಾಲ ಡೆಡ್‌ಲೈನ್‌ ಕೊಟ್ಟಿರುವ ಟ್ರಂಪ್‌, ಹಾರ್ಮುಜ್‌ ಜಲಸಂಧಿಯನ್ನು ಮುಕ್ತ ಮಾಡದಿದ್ರೆ ಭೀಕರ ದಾಳಿ eದುರಿಸಬೇಕಾಗುತ್ತದೆ ಎಂದು ಇರಾನ್​ಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ರಾತ್ರಿ 12 ಗಂಟೆ ತನಕ ಡೆಡ್‌ಲೈನ್‌ ಎಂದಿದ್ದು, ಆ ಬಳಿಕ ಇರಾನ್​ನ ಬೃಹತ್‌ ಸೇತುವೆಗಳು, ವಿದ್ಯುತ್‌ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್‌ ವಾರ್ನಿಂಗ್‌‌ ಬೆನ್ನಲ್ಲೇ ಮತ್ತೊಂದು ಕಡೆ ಸಂಧಾನ ಮಾತುಕತೆ ಪ್ರಸ್ತಾಪವೂ ತೆರೆಮರೆಯಲ್ಲಿ ನಡೆಯುತ್ತಿದೆ. ಇರಾನ್‌ ಹಾಗೂ ಅಮೆರಿಕಕ್ಕೆ 45 ದಿನಗಳ ಮಧ್ಯಂತರ ಕದನ ವಿರಾಮ ಘೋಷಣೆ ಬಗ್ಗೆ ಮಿತ್ರ ರಾಷ್ಟ್ರಗಳು ಒತ್ತಾಯ ಮಾಡಿದ್ದು, ಮುಂದಿನ 45 ದಿನಗಳಲ್ಲಿ ಪೂರ್ಣ ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿವೆ. ಪಾಕಿಸ್ತಾನ, ಟರ್ಕಿ, ಈಜಿಪ್ಟ್‌ ಈ ಪ್ರಸ್ತಾಪ ಮುಂದಿಟ್ಟಿದ್ದು, ಮುಂದಿನ 48 ಗಂಟೆಗಳಲ್ಲಿ ಮಧ್ಯಂತರ ಕದನ ಘೋಷಣೆ ಆಗುವ ನಿರೀಕ್ಷೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ

ಒಂದು ಕಡೆ ವಾರ್ನಿಂಗ್‌, ಮತ್ತೊಂದು ಕಡೆ ಸಂಧಾನ , ಈ ನಡುವೆ ಅಮೆರಿಕ ಇಸ್ರೇಲ್‌ ಜಂಟಿ ದಾಳಿಯಲ್ಲಿ IRGC ಇಂಟೆಲಿಜೆನ್ಸ್‌‌ ಬ್ಯೂರೋ ಮುಖ್ಯಸ್ಥರನ್ನು ಹತ್ಯೆ ಮಾಡಲಾಗಿದೆ. ಮೇಜರ್‌ ಜನರಲ್‌ ಮಜೀದ್‌ ಖಡೇಮಿಯನ್ನು ಹತ್ಯೆ ಮಾಡಿರೋದಾಗಿ ಇಸ್ರೇಲ್‌ ಘೋಷಣೆ ಮಾಡಿಕೊಂಡಿದೆ. ಯುದ್ಧ ಶುರುವಾದ 38 ದಿನಗಳಿಂದ ಅಮೆರಿಕ-ಇಸ್ರೇಲ್‌ ಪಡೆಗಳು ಪ್ರಮುಖ ನಾಯಕರನ್ನು ಹತ್ಯೆ ಮಾಡುತ್ತಲೇ ಸಾಗಿದ್ದು, ನಾವು ಇದೇ ರೀತಿ ಒಬ್ಬೊಬ್ಬರನ್ನೇ ಹತ್ಯೆ ಮಾಡುತ್ತಲೇ ಸಾಗ್ತೇವೆ ಎಂದು ಇಸ್ರೇಲ್‌ ರಕ್ಷಣಾ ಸಚಿವರು ಹೇಳಿಕೊಂಡಿದ್ದಾರೆ.

ಡೆಡ್​​ಲೈನ್​ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಇರಾನ್‌ಗೆ ಅಲರ್ಟ್‌ ಮೆಸೇಜ್‌ ಕಳುಹಿಸಿದ್ದು, ಒಪ್ಪಂದಕ್ಕೆ ಬರ್ತೀರೋ ಅಥವಾ ನಾವು ನಿಮ್ಮ ಮೇಲೆ ಬಾಂಬ್‌ ದಾಳಿ ಮಾಡಬೇಕೋ ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ. ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಮುಕ್ತ ಮಾಡಿದ್ರೆ ಮಾತ್ರ ನಾವು ಮಾತುಕತೆಗೆ ಸಿದ್ಧ ಎಂದಿರುವ ಅಮೆರಿಕ, ಒಂದು ವೇಳೆ ಹಾರ್ಮುಜ್ ಜಲಸಂಧಿ ಮುಕ್ತ ಮಾಡದಿದ್ದರೆ ಬಾಂಬ್‌ ದಾಳಿ ಮಾಡ್ತೇವೆ ಎಂದಿದೆ. ಈ ನಡುವೆ ಇಸ್ರೇಲ್‌ ಪಡೆಗಳು ಇರಾನ್‌ನ ಸ್ಟೀಲ್‌ ಅಂಡ್‌ ಪೆಟ್ರೋಕೆಮಿಕಲ್ ಸಂಸ್ಥೆ ಮೇಲೆ ದಾಳಿ ಮಾಡಿದ್ದು, ಭಾರೀ ಹಾನಿಯಾಗಿದೆ.

ಡೊನಾಲ್ಡ್‌‌ ಟ್ರಂಪ್‌ ಡೆಡ್‌‌ಲೈನ್‌‌ ಕೊಟ್ಟಿದ್ದು, ಇರಾನ್‌ನಲ್ಲಿ ಬಾಂಬ್‌ ಮಳೆ ಸುರಿಸಿ ನರಕ ಮಾಡ್ತೇವೆ ಎಂದಿದ್ದಾರೆ. ವಾಷಿಂಗ್‌‌ಟನ್‌ ಹಾಗೂ ಟೆಹರಾನ್‌ಗೆ ಒಪ್ಪಂದದ ಪ್ರಸ್ತಾವನೆಯೂ ಸಲ್ಲಿಕೆ ಆಗಿದ್ದು, ಇರಾನ್‌ ಮಾತ್ರ ಏಕಾಏಕಿ ಹಾರ್ಮುಜ್‌ ಜಲಸಂಧಿ ತೆರೆಯುವ ಯಾವ ಪ್ತಸ್ತಾಪವೂ ನಮ್ಮ ಮುಂದಿಲ್ಲ ಎಂದಿದೆ. ಅಂದರೆ ಅಮೆರಿಕ ಕೊಟ್ಟಿರುವ ಡೆಡ್‌‌ಲೈನ್‌ಗೂ ಇರಾನ್‌ ಸೊಪ್ಪು ಹಾಕಿಲ್ಲ ಎನ್ನುವಂತಾಗಿದೆ. ಕಳೆದ 39 ದಿನಗಳಿಂದ ಅಮೆರಿಕಕ್ಕೆ ಬಗ್ಗದೆ ತನ್ನೆಲ್ಲಾ ನಾಯಕರನ್ನು ಕಳೆದುಕೊಂಡರೂ ಯುದ್ಧವನ್ನು ಅಂತ್ಯ ಮಾಡುವುದಕ್ಕೆ ನಾವು ತಯಾರಿಲ್ಲ ಎನ್ನುವ ಮೂಲಕ ಇರಾನ್​ ತಿರುಗೇಟು ನೀಡುತ್ತಿದೆ.

ಅಮೆರಿಕದಲ್ಲಿ ಇರಾನ್​ ಮೇಲಿನ ಯುದ್ಧಕ್ಕೆ ಅಲ್ಲಿನ ಜನರು ತೀವ್ರ ಆಕ್ರೋಶಿತರಾಗಿದ್ದಾರೆ. ಇರಾನ್​ ಮೇಲೆ ಯುದ್ಧ ಬೇಕಾಗಿದ್ದಿದ್ದು, ಇಸ್ರೇಲ್​ಗೆ ಮಾತ್ರ. ಇರಾನ್​ ನಮಗೆ ಯಾವ ರೀತಿಯಲ್ಲೂ ಸಮಸ್ಯೆ ಆಗಿರಲಿಲ್ಲ. ಇಸ್ರೇಲ್​ ಜೊತೆಗೂಡಿ ಯುದ್ಧ ಮಾಡುತ್ತಿರುವುದರಿಂದ ಅಮೆರಿಕಕ್ಕೆ ಆಗುತ್ತಿರುವ ಲಾಭವೇನು ಇಲ್ಲ. ಅದರ ಬದಲಾಗಿ ಭಾರೀ ನಷ್ಟ ಅನುಭವಿಸುತ್ತಿದ್ದೇವೆ. ಅಮೆರಿಕದ ಡಾಲರ್​ ಬಳಸಿಯೇ ವಿಶ್ವದ ಎಲ್ಲಾ ರಾಷ್ಟ್ರಗಳು ವ್ಯವಹಾರ ಮಾಡುತ್ತಿದ್ದವು. ಇದೀಗ ಒಂದೊಂದೇ ದೇಶಗಳು ಬೇರೆ ಬೇರೆ ಕರೆನ್ಸಿ ಮೂಲಕ ವ್ಯವಹಾರ ಮಾಡಲು ಶುರು ಮಾಡುತ್ತಿವೆ. ಈಗಾಗಲೇ ಯೂರೋಪಿಯನ್​ ಒಕ್ಕೂಟಗಳೇ ಬೇರೊಂದು ಕರೆನ್ಸಿ ಮಾಡುವ ಬಗ್ಗೆ ಚಿಂತನೆ ಮಾಡಿವೆ. ಅದರ ಜೊತೆ ಜಿ-7 ರಾಷ್ಟ್ರಗಳೂ ಕೂಡ ಟ್ರಂಪ್​ ನಿರ್ಧಾರದ ವಿರುದ್ಧ ಇದ್ದು, ಅಮೆರಿಕ ಅಧ್ಯಕ್ಷ ಟ್ರಂಪ್​ ಭಾರೀ ವಿರೋಧ ಕಟ್ಟಿಕೊಂಡಂತೆ ಆಗಿದೆ. ಹೀಗಾಗಿ ಯುದ್ಧದಿಂದ ಹೊರಬರಲು ಟ್ರಂಪ್​ ಒದ್ದಾಡುತ್ತಿದ್ದಾರೆ. ಆದರೆ ಇರಾನ್​ ಸದ್ಯಕ್ಕೆ ಕಳೆದುಕೊಂಡಿದ್ದಕ್ಕೆ ಪ್ರತಿಕಾರ ಎನ್ನುತ್ತಿದೆ.

Related posts

Big Boss Bund: ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದಿದೆ.. ಮುಂದೆ ಇರುವ ದಾರಿ ಯಾವುದು..?

Publicspot

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

Publicspot

Mask Man Arrest: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದಿದ್ದವನೇ ಅರೆಸ್ಟ್​ ಆಗಿದ್ಯಾಕೆ..?

Publicspot

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ

VICE PRESIDENT ELECTION: NDA ಉಪರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ..?

Publicspot