The Public Spot
ಅಪರಾಧ

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಅನ್ನೋ ಮಾತಿದೆ. ಆದರೆ ಈತಗನ ಬದುಕಿನಲ್ಲಿ ಮದುವೆ ಅನ್ನೋದು ಸಾವಿಗೆ ನಿಶ್ರಚಯ ಆಗಿತ್ತಾ..? ಅನ್ನೋ ಅನುಮಾನ ಮೂಡಿಸುತ್ತಿದೆ. ದಾವಣಗೆರೆ ಜಿಲ್ಲೆ ಗುಮ್ಮನೂರು ಗ್ರಾಮದಲ್ಲಿ ಹರೀಶ್‌ ಎಂಬಾತನ ವಿವಾಹ ಆಗಿತ್ತು. ಮದುವೆ ಆಗಿ ಕೇವಲೊ 2 ತಿಂಗಳು ಆಗಿತ್ತು ಅಷ್ಟೆ. ಅಷ್ಟರಲ್ಲಿ ಹೆಂಡತಿ ತನ್ನ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಳು. ಇದರಿಂದ ಮನನೊಂದ ಹರೀಶ್​ ನೇಣಿಗೆ ಕೊರಳೊಡ್ಡಿದ್ದಾನೆ. ತುಂಬಾ ಅಮಾಯಕನಾಗಿದ್ದ ಹರೀಶ್​, ತಾನಾಯ್ತು ತನ್ನ ಪಾಡಾಯ್ತು ಅನ್ನೋ ವ್ಯಕ್ತಿತ್ವ. ಹೀಗಾಗಿ ಊರಲ್ಲೂ ಒಳ್ಳೆ ಹೆಸರಿತ್ತು. ಆದರೆ ಬದುಕಿನಲ್ಲಿ ಹೆಂಡತಿ ಅನ್ನೋಳು ಈ ರೀತಿ ಆಟವಾಡಿದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮದುವೆ ಅನ್ನೋ ಮುದ್ರೆ ಬೀಳೋದಕ್ಕೂ ಮೊದಲೇ ಹುಡುಗನ ಹೃದಯ ಕದ್ದಿದ್ದ ಯುವತಿ ಸರಸ್ವತಿ, ಅದ್ದೂರಿಯಾಗಿ ಮದುವೆ ಆಗುವ ಮೊದಲು ಐಶಾರಾಮಿಯಾಗಿ ಪ್ರೀ ವೆಡ್ಡಿಂಗ್​ ಫೋಟೋ ಶೂಟ್ ಕೂಡ ಮಾಡಿಸಿದ್ದಳು. ಬದುಕಿನುದ್ದಕ್ಕೂ ಜೊತೆಯಾಗಿರ್ತೀನಿ ಅಂತಾ ಏಳು ಹೆಜ್ಜೆ ಇಟ್ಟು, ಗುರು ಹಿರಿಯರ ಮುಂದೆ, ಮೂರು ಗಂಟಿನ ನಂಟು ಬೆಸೆದುಕೊಂಡ ಬಳಿಕ ಕೇವಲ 2 ತಿಂಗಳಲ್ಲಿ ಗಂಡನ ತೋಳ್ತೆಕ್ಕೆ ಬಿಟ್ಟು ಹಳೇ ಗೆಳೆಯನ ಜೊತೆಗೆ ಪಲ್ಲಂಗ ಏರಲು ಹಣಿಯಾಗಿ ಹೊರಟಿದ್ದಳು. ಮದುವೆಯಾದ ಕೇವಲ 2 ತಿಂಗಳಲ್ಲಿ ಇಷ್ಟೆಲ್ಲಾ ದುರ್ಘಟನೆ ಆಗಿದ್ದನ್ನು ಸಹಿಸಿಕೊಳ್ಳಲಾಗದ ಹರೀಶ್​ ಸಾವಿನ ಮನೆ ಸೇರಿಬಿಟ್ಟ. ವಿಚಿತ್ರ ಅಂದ್ರೆ ಸರಸ್ವತಿಯ ಸೋದರ ಮಾವನೂ ಹೆಣವಾಗಿಬಿಟ್ಟ.

ಸರಸ್ವತಿ ಅನ್ನೋ ಹೆಸರಿಟ್ಟುಕೊಂಡು ಹೆಸರಿಗೆ ತದ್ವಿರುದ್ಧವಾಗಿ ಮಾಡುತ್ತ ಕಾಮದ ಪ್ರೇಮಕ್ಕೆ ನೊಂದು ಅಮಾಯಕ ಗಂಡ ದುರಂತ ಅಂತ್ಯ ಕಂಡಿದ್ದಾನೆ. ಆದರೆ ಸರಸ್ವತಿಯ ಸೋದರ ಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಡುಗಿ ಸೋದರ ಮಾವನೇ ಮುಂದೆ ನಿಂತು ಒಳ್ಳೇ ಹುಡುಗ ಅಂತಾ ಹೇಳಿ ಮದುವೆ ಮಾಡಿಸಿದ್ರಂತೆ. ಒಳ್ಳೆ ಸಂಬಂಧ, ಒಳ್ಳೆ ಮನೆತನ.. ನನ್ನ ಅಕ್ಕನ ಮಗಳು ಒಳ್ಳೆ ನಡೆತೆ ಇರುವ ಹೆಣ್ಣು ಮಗಳು ಅಂತ ಹೇಳಿ ಧಾರೆ ಎರೆದು ಕೊಟ್ಟಿದ್ರಂತೆ. ಆದ್ರೆ, ಈ ಮಾಯಾಂಗಿನಿ ಸರಸ್ವತಿ ಯಾವಾಗ ಗಂಡನ ಮನೆ ಬಳಿಗೇ ಪ್ರಿಯಕರನನ್ನ ಬರೋದಕ್ಕೆ ಹೇಳಿ ಕಾರ್‌ ಹತ್ತಿ ಎಸ್ಕೇಪ್‌ ಆದಳೋ ಗಂಡ ಆ ಕಡೆ ಆತ್ಮಹತ್ಯೆ ಮಾಡಿಕೊಂಡ್ರೆ, ಈ ಕಡೆ ವಿಚಾರ ತಿಳಿದ ಸೋದರ ಮಾವ ಕೂಡ ಸಾವಿನ ಮನೆ ಸೇರಿದ್ದಾನೆ.

ಯುವಕ ಹರೀಶ್​ ಸಾಯೋದಕ್ಕೂ ಮೊದಲು ಡೆತ್‌ನೋಟ್‌ ಬರೆದಿಟ್ಟಿದ್ದು, ನನ್ನ ಸಾವಿಗೆ ಹೆಂಡತಿ ಸರಸ್ವತಿ ಹಾಗೂ ಆಕೆಯ ತಂದೆ ತಾಯಿ ಗಣೇಶ್‌ ಹಾಗೂ ಅಂಜಿನಮ್ಮ ನೇರ ಕಾರಣ ಅಂತಾ ಉಲ್ಲೇಖಿಸಿದ್ದಾನೆ. ಅಷ್ಟೇ ಅಲ್ಲ ನನ್ನ ಅಂತ್ಯಸಂಸ್ಕಾರವನ್ನ ಬಸವ ಧರ್ಮದ ಪ್ರಕಾರವಾಗಿ ನೆರವೇರಿಸಿ ಅಂತಾನೂ ಕೊನೇ ಆಸೆ ಹೇಳಿಕೊಂಡಿದ್ದಾನೆ. ಪ್ರಿಯಕರನ ಜೊತೆಗೆ ಪಲ್ಲಂಗದಾಟ ಆಡುವ ಮನಸ್ಸಿದ್ದ ಮೇಲೆ ಹರೀಶ್​ ಜೊತೆಗೆ ಮದುವೆ ಆಗುವ ನಾಟಕ ಆಡಬಾರದಿತ್ತು. ಹೆತ್ತವರು ಮದುವೆ ಒತ್ತಾಯ ಮಾಡಿದ್ರು ಅನ್ನೋದಾದರೆ ತಾಳಿ ಕಟ್ಟುವ ಮೊದಲು ಊರೆಲ್ಲಾ ಸುತ್ತುವಾಗ ನನಗೆ ಒತ್ತಡ ಇದೆ. ನಾನು ಬೇರೊಬ್ಬನನ್ನು ಪ್ರೀತಿಸ್ತಿದ್ದೀನಿ ಅಂತ ಹೇಳಿಕೊಂಡಿದ್ರೆ ಎರಡು ಜೀವಗಳು ಉಳಿಯುತ್ತಿದ್ದವು. ಈಗ ಸರಸ್ವತಿ ಪ್ರಿಯಕರನ ತೋಳಲ್ಲಿ ಚೆಲ್ಲಾಟ ಆಡುತ್ತಿದ್ರೆ ಎರಡು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿವೆ.

Related posts

Brother murder: ಅಕ್ಕನ ಅಕ್ರಮ ಸಂಬಂಧಕ್ಕೆ ಬಲಿಯಾದ ತಮ್ಮ..

Publicspot

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot

Lover Good Husband Bad; ಆನೇಕಲ್​ ಆಂಟಿ ವಾಪಸ್​ ಬಂದು ಗೊಳೋ ಅಂತಿರೋದ್ಯಾಕೆ..?

Publicspot

Darshan And Police Officers: ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಖಡಕ್​ ಅಧಿಕಾರಿಗಳ ಪಾತ್ರ..

ಯಶವಂತಿ

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot