The Public Spot
ದೇಶ-ವಿದೇಶ

ಇರಾನ್​ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುತ್ತಾ..? ಅಮೆರಿಕ ದಾಹಕ್ಕೆ ಮಣಿಯುತ್ತಾ..?

ಇರಾನ್‌ ಸರ್ವನಾಶಕ್ಕೆ ಅಮೆರಿಕ ಮತ್ತು ಇಸ್ರೇಲ್‌‌ ದೇಶಗಳು ಪಣ ತೊಟ್ಟಿದ್ದು, ಭೀಭತ್ಸ ದಾಳಿ ನಡೆಸುತ್ತಿವೆ. ಇಸ್ರೇಲ್‌, ಅಮೆರಿಕ ಜಂಟಿ ಕಾರ್ಯಾಚರಣೆಗೂ ಇರಾನ್​ ಪ್ರತ್ಯುತ್ತರ ಕೊಡುವುದನ್ನು ಮುಂದುವರಿಸಿದೆ. ಇರಾನ್‌‌ ರಾಜಧಾನಿ ಟೆಹ್ರಾನ್‌‌ 3 ದಿನದಲ್ಲೇ ಅರ್ಧ ನಾಶವಾಗಿದೆ. ಇರಾನ್ ವಾಯುನೆಲೆಯನ್ನ ಅಮೆರಿಕ ಧ್ವಂಸ ಮಾಡಿದೆ. ಇರಾನ್ ಕ್ಷಿಪಣಿ ಸಂಗ್ರಹಗಾರವನ್ನೂ ನಾಶ ಮಾಡಿದೆ. B-2 ಬಾಂಬರ್, ಸೂಸೈಡ್ ಡ್ರೋಣ್​ಗಳನ್ನು ಬಳಸಿ ವಿನಾಶ ಮಾಡ್ತಿದೆ. ಕ್ಷಿಪಣಿ ಸಾಗಿಸ್ತಿದ್ದ ಟ್ರಕ್ ಧ್ವಂಸ ಮಾಡ್ತಿರೋ ಅಮೆರಿಕ, ಮೇಲ್ನೋಟಕ್ಕೆ ಮೇಲುಗೈ ಸಾಧಿಸಿದೆ ಎಂದೆನಿಸುತ್ತದೆ. ಆದರೆ ಇರಾನ್​ ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ಜಾಯಮಾನ ಅಲ್ಲ ಅನ್ನೋದನ್ನು ಆಯತುಲ್ಲಾ ಅಲಿ ಖಮೇನಿ ಸಾಧಿಸಿ ತೋರಿಸಿದ್ದಾರೆ.

ಖಮೇನಿ ಹತ್ಯೆ ಬಳಿಕ ಸಿಡಿದೆದ್ದಿರುವ ಇರಾನ್​ ನಮ್ಮ ಸೇನೆ ಇನ್ನೂ ಸಂಪೂರ್ಣವಾಗಿ ಯುದ್ಧ ಸಾರಿಲ್ಲ. ಒಂದು ವೇಳೆ ನಾವು ಯುದ್ಧಕ್ಕೆ ಸಂಪೂರ್ಣವಾಗಿ ತೊಡಗಿದರೆ ಅಮೆರಿಕ ಬೆಚ್ಚಿ ಬೀಳುತ್ತದೆ ಎಂದಿದ್ದಾರೆ. ಕುವೈತ್​ನಲ್ಲಿ ಅಮೆರಿಕದ ಅತ್ಯಾಧುನಿಕ F 15 ಯುದ್ಧ ವಿಮಾನಗಳನ್ನು ನಾಶ ಮಾಡಿದೆ. ಮೂರು ಫೈಟರ್​ ಜೆಟ್​ಗಳನ್ನು ಧ್ವಂಸ ಮಾಡಿದ್ದು, ಅಸದರಲ್ಲಿದ್ದ ಪೈಲಟ್​ಗಳು ಪ್ಯಾರಚೂಟ್​ ಮೂಲಕ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಯುನೈಟೆಡ್ ಅರಬ್​​ ಎಮಿರೆಟ್ಸ್​ ದೇಶಗಳಲ್ಲಿ ಇರುವ ಅಮೆರಿಕ ವಾಯುನೆಲೆಯನ್ನು ನಾಶ ಮಾಡುತ್ತಾ ಸಾಗಿದೆ.

ಟೆಹ್ರಾನ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಮೇರಿಕ & ಇಸ್ರೇಲ್ ದಾಳಿ ಮಾಡ್ತಿದ್ದು ಇರಾನ್​ ಅಧಿಕೃತವಾಗಿ 550 ಜನರಿ ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್‌ ಪರಮೋಚ್ಛ ನಾಯಕ ಖಮೇನಿ ಮತ್ತು ಆತನ ಇಡೀ ಕುಟುಂಬವನ್ನೇ ಹತ್ಯೆ ಮಾಡಲಾಗಿದೆ. ಇದೀಗ ಇರಾನ್‌ ಸೇನೆ ಸೌದಿ ಅರೆಬಿಯಾ, UAE, ಕುವೈತ್​, ಯುನೈಟೆಡ್​ ಕಿಂಗ್​ಡಮ್​ ಸೇರಿದಂತೆ ಅಮೆರಿಕ ಪರವಾಗಿ ನಿಂತವರಿಗೂ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಅರಾಮ್ಕೊ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋಣ್ ದಾಳಿ ಮಾಡಿದ್ದು, ವಿಶ್ವದ ಅತಿದೊಡ್ಡ ತೈಲ ಸಂಸ್ಕರಣ ಘಟಕವನ್ನು ನಾಶ ಮಾಡುವ ಕೆಲಸ ಮಾಡಿದೆ.

ಇರಾನ್​ ಕ್ಷಿಪಣಿ ದಾಳಿಗೆ ಇಸ್ರೇಲ್​ನ ಜೆರೊಸಲೇಮ್‌ ನಗರ & ಟೆಲ್​ ಅವೀವ್​ ನಾಶ ಮಾಡಲಾಗಿದೆ. ಇಸ್ರೇಲ್ ದೇಶದಲ್ಲಿ ಪ್ರಮುಖ ನಗರಗಳು ನಾಶ ಆಗ್ತಿವೆ. ಇಸ್ರೇಲ್​ನಲ್ಲಿ 9 ಜನ ಸಾವನ್ನಪ್ಪಿದ್ದು, 221 ಮಂದಿಗೆ ಗಾಯಗೊಂಡಿದ್ದಾರೆ. ಇರಾಕ್​ನಲ್ಲಿ ಇಬ್ಬರು ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಕುವೈತ್​ನಲ್ಲಿ 1 ಸಾವು ಸಂಭವಿಸಿದ್ದು 32 ಮಂದಿಗೆ ಗಾಯಗೊಂಡಿದ್ದಾರೆ. ಬಹರೇನ್​ನಲ್ಲಿ 4 ಮಂದಿಗೆ ಗಾಯಗೊಂಡಿದ್ದಾರೆ. UAE ನಲ್ಲಿ 3 ಸಾವು ಸಂಭವಿಸಿದ್ದು, 58 ಮಂದಿಗೆ ಗಾಯಗೊಂಡಿದ್ದಾರೆ. ಒಮನ್​ನಲ್ಲಿ 5 ಮಂದಿಗೆ ಗಾಯಗೊಂಡಿದ್ದಾರೆ. ಭಾರತೀಯರೂ ನಾಲ್ವರು ಸಾವನ್ನಪ್ಪಿದ್ದಾರೆ.

ಇರಾನ್​ ಸೋಲನ್ನು ಒಪ್ಪಿಕೊಂಡು ಅಮೆರಿಕಕ್ಕೆ ಶರಣಾಗುವ ಇಚ್ಛೆ ಇದ್ದರೆ ಖಮೇನಿ ತನ್ನ ಜೀವವನ್ನೇ ಸಮರ್ಪಿಸುವ ಕೆಲಸಕ್ಕೆ ಕೈ ಹಾಕ್ತಿರಲಿಲ್ಲ. ಆದರೆ ಖಮೇನಿ ತಾನೂ ಸತ್ತರೂ ಇರಾನ್​ ಅಮೆರಿಕಕ್ಕೆ ಶರಣಾಗುವುದು ಸಾಧ್ಯವೇ ಇಲ್ಲ; ಎನ್ನುವ ಸಂದೇಶ ರವಾನಿಸಿದ್ದಾರೆ. ಅದೇ ಕಾರಣಕ್ಕೆ ಖಮೇನಿ ಪ್ರಾಣ ಬಿಡ್ತಿದ್ದ ಹಾಗೆ ಮತ್ತೋರ್ವ ನಾಯಕನ ಆಯ್ಕೆ ಆಗಿದೆ. ಇನ್ನು ಅಮೆರಿಕ ವಿರುದ್ಧ ಸೆಟೆದು ನಿಂತಿರುವ ಇರಾನ್​ ಸೇನೆ ಪ್ರತಿಕಾರದ ಶಪಥ ಮಾಡಿದೆ. ಇದೇ ಕಾರಣಕ್ಕೆ ಇರಾನ್​ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಟ್ರಂಪ್​. ಇರಾನ್​ ಜನರು ದಂಗೆ ಏಳುವಂತೆ ಟ್ರಂಪ್​ ಕರೆ ಕೊಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ಇರಾನ್​ ಅಮೆರಿಕಕ್ಕೆ ಬಗುವ ಸಾಧ್ಯತೆ ಕಡಿಮೆ ಎನ್ನಬಹುದು.

Related posts

ಇರಾನ್‌ ಶರಣಾಗುತ್ತೆ ಎಂದಿದ್ದ ಅಮೆರಿಕಕ್ಕೆ ಡಿಚ್ಚಿ.. ಇಸ್ರೇಲ್‌ ಪ್ರಧಾನಿ ಹತ್ಯೆ ಪ್ರತಿಜ್ಞೆ

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot

VICE PRESIDENT ELECTION: NDA ಉಪರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ..?

Publicspot

ಇರಾನ್​ ಇನ್ಮುಂದೆ ಒಂಟಿಯಲ್ಲ.. ಚೀನಾ, ರಷ್ಯಾ ಬೆಂಬಲ.. ಯುದ್ಧ ಮತ್ತಷ್ಟು ತೀವ್ರ..

Publicspot

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

Publicspot